ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

162 ಸತೀ ಹಿತೈಷಿಣಿ ಯಾಗಲೀ, ಗೋಪ್ರಾದದಷ್ಟು ಸ್ಥಲವಾದರೂ ಅಸಂಸ್ಕೃತವಾಗಿ ಅಥವಾ ಉಪೇಕ್ಷಿತವಾಗಿ ಬಿಟ್ಟಿರುವಂತೆ ಕಾಣುತ್ತಿಲ್ಲ. ಸಾರಣೆ-ಕಾರಣೆ, ಚಿತ್ರನಟ, ತಳಿರು-ತೋರಣಗಳಿಂದ, ವಿವಿಧ ಶೃಂಗಾರದಿಂದ, ಘುಮಘುಮಿನ ಸಮಸ್ತ ಚಾಹಿಯ ಗಂಧಗಳಿಂದ ಕೂಡಿ, ಸುಮನೋಹರವಾಗಿ ಬೆಳಗುತ್ತಿರುವುದನ್ನು ನೋಡಿದರೆ, ಅನಂದಕ್ಕೆ ಕೊರತೆಯಾದೀತೇ? ಅನಂದವನದ ಸ್ವರೂಪವೇ ಇಷ್ಟು ಮೋಹಕವಾಗಿರುವುದೆಂದರೆ, ಆನಂದರಾಯಿನಿಯಾದ ಮಂದಿರಾಧಿಷ್ಠಾ ತ್ರೀದೇವಿಯ ಸುಸ್ವರೂಪವು ಮತ್ತೆಷ ಪ್ರಕಾಶಿಸುತ್ತಿರಬೇಕೆಂಬುದನ್ನು ಊಹಿಸಿಯೇ ತಿಳಿಯಬೇಕಲ್ಲವೇ? ಅನಂದಮಂದಿರ ಮತ್ತು ಮಾತೃದೈವದ ಸುಸ್ವರೂಪಕ್ಕೆ ಒಪ್ಪುವಂತೆ ಅನಂದವನವೂ ಶೃಂಗಾರವಾಗಿರಬೇಕಾದುದು ಸಹಜವೇ ಸರಿಯಷ್ಟೆ ! ಅನಂದ ವನದ-ಮಾತೃಮಂದಿರದ ಮುಂಗಡೆಯ ಪ್ರದೇಶದಲ್ಲಿ ಸುಮಾರು ಅರ್ಧ ಮೈಲಿಯಷ್ಯರ ಪ್ರದೇಶವೂ ಕಲ್ಕುಳ್ಳುಗಳ ಹೆಸರಿಲ್ಲದೆ ಪರಿಷ್ಕೃತವಾಗಿರುವ ನೆಲವ. ಉದ್ದಕ್ಕೂ ಸಾಲುಮರಗಳು, ನಡುನಡುವೆ ಧ್ವಜಸ್ತಂಭಗಳು; ಅಲ್ಲಲ್ಲಿಗೆ ಮರಗಳ ಹಿಂದೆ ಮಂಟಪಗಳು, ಚಪ್ಪರಗಳು, ಎಲ್ಲೆಡೆಯಲ್ಲಿಯ ತಳಿರು-ತೋರಣಗಳು. ಸುತ್ತಮುತ್ತಲ ಮಂದಿರದ “ಹಿಂದುಮುಂದಿನ ಪ್ರದೇಶದಲ್ಲಿಯೂ, ಕೆಲವು ಹೀಗೆಯೇ ಪರಿಷ್ಕರಿಸಲ್ಪಟ್ಟೆ ಇರುವುವು. ಅಲ್ಲದೆ, ಬಂದವರಿಗೆ ಉಳಿದು-ತಿಂದು-ಮಲಗಿ ವಿಶ್ರಾಂತಿಹೊಂದಲನುಕೂಲ ವಾಗಿ ಅಲ್ಲಲ್ಲಿಗೆ ಪರ್ಣಕುಟೀರಗಳೂ ಬಿಡಾರಗಳೂ ನಿಯಮಿಸಲ್ಪಟ್ಟಿವೆ. ಹೆಚ್ಚೇಕೆ? ಆನಂದವನವು ನೂತನೋತ್ಸವದ ಸಂಭ್ರಮಕ್ಕಾಗಿ ಬೇಕಾದ ಸಕಲ ಸೋಬಸ್ತರಗಳಿಂದಲೂ ಸುಸಜ್ಜಿತವಾಗಿರುವಂತೆ ತೋರುವುದೆಂದರೆ ಸಾಕು. ಮಂದಿರದ ಗರ್ಭಾ೦ಕಣದಲ್ಲಿ ದೇವಿಯ ಮುಂದೆ ಪದ್ಮಾಸನಾಸೀನ ನಾಗಿ ಕುಳಿತು, ಉಚ್ಚಸ್ವರದಿಂದ (ಅನಂದಪಾರವಶ್ಯತೆಯಲ್ಲಿ ಉಂಟಾಗುವ ಗದ್ದ ದಸ್ವರದಿಂದ)-lefಸರ್ವ ೦ಸಹೇತಿ ವಸುಧೇತೃಚಲೇತಿಮಾತರ್ವಿಶ್ವಂಭ ರೇತಿ ವಿಪುಲೇ” ಎಂದೀ ಬಗೆಯಾಗಿ ಬಗೆಬಗೆಯಿಂದ ಮಾತೃಸ್ತವವನ್ನು ಗಾನಮಾಡುತ್ತಿರುವ ಈ ನಮ್ಮ ಸತ್ಯಾನಂದ ಬ್ರಹ್ಮಾಚಾರಿಯನ್ನು ನೋಡಿ ದರೆ, ಆತ್ಮಾನಂದವುಂಟಾಗದಿರುವುದೇನು ?.. ಎಂದಿಗೂ ಅಗದ ಬಿಡುವದಿಲ್ಲ