ಪುಟ:ಮಾತೃನಂದಿನಿ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃ ನಂದಿನಿ 163 ಸತ್ಯಾನಂದ ಪರಮ ಹಂಸನೆಂದರೆ, ಈಕಾಲದ ತಾಮಸ ಸನ್ಯಾಸವೇಷಧರಿ ಗಳತವನಲ್ಲ. ಸರ್ವಸಂಗ ಪರಿತ್ಯಾಗ ಮಾಡಿದೆನೆಂದು ನಟಿಸಿ, ವಿರಕ್ತನೇಷ ಧಾರಣೆಯಿಂದ ಬಹುಜನರನ್ನು ವಂದಿಸಿ, ಘಾತಿಸಿ, ತನ್ಮೂಲಕ ಧನಸಂಗ್ರಹ ಮಾಡಿಕೊಂಡು, ಸತ್ಯ- ಪುತ್ರ ವರಿವಾರಗಳಿಗೆ ಯಥೇಷ್ಟವಾದ ಸಸಿ ಸಂವದಗಳ ಮಾರ್ಗವನ್ನು ಕಲ್ಪಿಸಿ, ಸ್ಕೋಪಯೋಗಕ್ಕಾಗಿ, ಹಲವು ಮಂತ್ರತಂತ್ರಗಳನ್ನು ಮುಂದಿರಿಸಿ ಕುಳ್ಳಿರುವ ಚಾಲಕರಂತೆಯೇ ನಮ್ಮ ಸತ್ಯಾನಂದ ನನ್ನ ಒಬ್ಬ ಚಾಲಕನೇದು ತಿಳಿದಿರುವಿರೇ ? ಹಾಗಿದ್ದರೆ ತ್ರಿನಾರಹೇಳಿರಿ. (ಶಾಂತಂವಾನಂ-ಪ್ರತಿಹತಮ ವ೦ಗಳಂ' ನನ್ನ ಅಸಹಾರಕ್ಕಾಗಿ ಕ್ಷಮೆಯನ್ನು ಕೋರಲೇಬೇಕು. ಮತ್ತು ಈ ನನ್ನ ಸತ್ಯಾನಂದ ಸರವ ಹಂಸನು, ತಾನೇ ವಿರಕ್ತನೆಂದು ಹೆಮ್ಮೆಗೊಂಡು, ತನ್ನಲ್ಲಿ ಉಪದೇಶಕ್ಕಾಗಿ ಬರುವವ ರನ್ನು ಕುರಿತು --ಈ ನೃಷ್ಟಿಯ ಅನಾರವು; ಈ ಸಂಸಾರವೇ ಘೋರವು: ಈ ಭವನೇ ಭಯಂಕರ ರೋಗ ಪೀಡಿತವು, ಪತ್ನಿ ಪುತ್ರವ್ಯಾಮೋಹವೇ ಕೇಶಾಗರವು ಮತ್ತು ಕ್ಷಣಿಕವು; ಇವುಗಳಿಂದ ನಮಗೆ ಸುಖವಿಲ್ಲ; ಇವರಿಂದ ಸಮಾಧಾನವೆಂಬುದೇ ದೊರೆವಂತಿಲ್ಲ; ಬರಿಯ ಭ್ರಾಂತಿ-ತಾಪಗಳಿಗೆ ಮ•. ಇದನ್ನು ನಂಬಿ, ವಿಷಯಲಾಲಸೆಯಲ್ಲಿ ಮರುಳಾಗಿ, ಮಮಕಾರ ವ್ಯಾಧಿ ಯಿಂದ ಕೆಡುವವರಿಗೆ ಎಂದಿಗೂ ಮುಕ್ತಿಯಾಗುವುದಿಲ್ಲ: ಪರಮಾತ್ಮನ ದಿವ್ಯ ರೂಪಧ್ಯಾನವೊಂದರಿಂದ ಮಾತ್ರವೇ ನಮ್ಮ ಆತ್ಮನಿಗೆ ಶಾಂತಿಯಾಗಬೇಕು: ಅದರಿಂದಲೇ ನಮಗೆ ನಿತ್ಯಾನಂದವಾಗಬೇಕು;ಆತ್ಮಧ್ಯಾನವೊಂದೇ ನಮ್ಮ ಮುಖ್ಯಗುರಿಯಾಗಬೇಕು; ಆತ್ಮಧ್ಯಾನಕ್ಕೆ ಸಂತಸೇವೆ, ಸ್ವಾರ್ಥತ್ಯಾಗ ಭಗವತ್ಕೈಂಕರ್ಯಗಳೇ ಸಾಧನಗಳಾಗಿರಬೇಕು;” ಹೀಗೆ ಉವದೇಶ ಮಾಡುವ ಜಡಬೋಧೆಯ ಗಂಧವನ್ನು ಕೂಡ ತಿಳಿದವನಲ್ಲ. ಕೇವಲ ಈತನ ವೇಷ-ಭಾಷಣ-ಪ್ರಕೃತಿಸ್ಥಿತಿಗಳನ್ನು ನೋಡಿಯೇ, ಯಾರೇ ಆಗಲಿ, ಈತನ ನಿಷ್ಕಾಮಪ್ರೇಮ, ನಿರತಿಶಯು ಬ್ರಹ್ಮನಿಷ್ಠೆ, ನಿರಂತರ ದಯಾಪರತೆಗಳ ಮಹೋಜ್ವಲವ್ವ ರೂಪವಂತಹದೆಂದು ಹೇಳಬಹುದು. ಹೆಚ್ಚೇಕೆ ! ದೇಶ ಮಾತೃ ಸೇವಕನೆಂದರೆ---ಪತಿತೋದ್ದಾರಕರ್ತನೆಂದರೆ--ಭೂತದಯಾಪರ ನಂದರಿ-ಸತ್ಯಪರಾಕ್ರಮನಂದರೆ-ಕ್ಷಮಾಗುಣಸಂಪನ್ನನೆಂದರೆ- ಈನಮ್ಮ ಸತ್ಯಾನಂದ ಬ್ರಹ್ಮಚಾರಿಯೇ ಸರಿ. ವಿವರವನ್ನು ಸಾಕು.