ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಸತೀಹಿತ್ಯ ಸಿನೇ ಮಾಡಿಕೊಳ್ಳುವುದು ನಮಗೆ ರುಚಿಸಲಿಕ್ಕಿಲ್ಲವೆಂದೇ ಹೇಳುವೆನು. ಇದು ಸುಳ್ಳಲ್ಲ.

  • ನಂದಿನಿ:- ಓಹೋ! ಎಷ್ಟುದ್ದದ ಹೊಗಳಿಕೆ? ಸುರಸೆ | ಯಾರಿಗೆ ಈ ಸ್ತುತಿ? ಯಾರಲ್ಲಿ ಆಕರ್ಷಣಾಶಕ್ತಿ? ಯಾರಲ್ಲಿ ಸ್ಪಿರತೆ ?......ಎಲ್ಲವೂ ಭಗವತಿಗೆ, ಆ ತಾಯಿಯ ಅಪಾರವಾದ ವಾತ್ಸಲ್ಯಕ್ಕೆ, ಅವಳ ಅತ್ಯದ್ಭುತವಾದ-ಅಖಂಡವಾದ-ತೇಜಸ್ಸಿಗೆ ನಿವೇದಿತವಾಗಬೇಕಲ್ಲದೆ, ನನಗೇನೂ ಸಲ್ಲುವಂತಿಲ್ಲ. ಅದು ಹಾಗಿರಲಿ; ನಮ್ಮ ಅಚಲಚಂದ್ರನು ನನ್ನ ವಿಷಯವಾಗಿ ಹೇಳುವುದೇನು?'

- ಸುರಸೆ: ಹೇಳುವುದೇನು? ತಿಳಿದೇ ಇದೆ! ಭಗವತಿಯ ಅಂಶ ಪವೇ ನಂದಿನಿ: ಅವಳ ಸಂದರ್ಶನ-ಸಂಭಾಷಣ-ಸಹವಾಸಗಳೇ ಸಾಕ್ಷಾತ್ ಜಗನ್ಮಾತೆಯ ಅನುಗ್ರಹಕ್ಕೆ ಸಾಧನಗಳು. ಅವಳ ಸಹಚರ್ಯೆಯೇ ನಮ್ಮ ಸೋದರಿಯರ ಜ್ಞಾನಸಂಪಾದನೆಗೆ ಮುಖ್ಯಮಾರ್ಗವು, ಅವಳ ಉಪದೇಶ ತನ್ನ ಸಾವಧಾನದಿಂದ ಸಂಗ್ರಹಿಸಿ, ಅದರಂತೆ ನಡೆವುದೇ ಗೃಹಿಣಿಯರ ಅಭ್ಯುದಯಕ್ಕೆ ಮೂಲಮಂತ್ರ...... ಅಷ್ಟೆ ಅಲ್ಲ! ನಂದಿನಿಯು ನಮ್ಮೆಲ್ಲರಿಗೂ ನಂದಿನಿ:-ಸುರಸೆಯ ಮುಖವನ್ನು ನೋಡಿ, ದರ್ಪಿತಸ್ವರದಿಂದ `ಬರಸೆ! ಸಾಕು, ನಿಲ್ಲಿಸು! ಈ ಹೊಗಳಿಕೆಯನ್ನು ವಿವರಿಸೆಂದು ನಿನಗೆ ಹೇಳಲಿಲ್ಲ. ನಾನು ನಿಮ್ಮೆಲ್ಲರನ್ನೂ ಬಿಟ್ಟು ಹೋಗುವ ವಿಚಾರದಲ್ಲಿ ಆತನೇನು ಹೇಳುವನೋ, ಅದನ್ನು ಹೇಳೆಂದೆನಲ್ಲದೆ, ಇದನ್ನು ಕೇಳಲಿಲ್ಲ.' - ಸುರಸೆ:-ಹಾಗೋ ? ನನಗದು ಚೆನ್ನಾಗಿ ಹೊಳೆಯಲಿಲ್ಲವಾದುದರಿಂದ ಇದನ್ನು ಹೇಳಿದೆನು. ಇದರಲ್ಲಿ ತಪ್ಪೇನು ? ನನ್ನನ್ನು ಮಂದಪ್ರಜ್ಞೆಯೆಂದು ನೀನು ತಿಳಿದೇ ಇರುವೆ! - ನಂದಿನಿ:-ಬಲ್ಲೆ: ಸುರಸೆ! ನೀನು ಮಾತಿನಮಲ್ಲೆಯೆಂಬುದನ್ನು ನಾನು ಮೊದಲಿಂದಲೂ ಚೆನ್ನಾಗಿ ಬಲ್ಲೆನು. ಅಚಲಚಂದ್ರನಿಗೆ ತಂಗಿಯಾಗಿರುವವಳನ್ನು ಮಾತಿನಲ್ಲಿ ಕೇಳಬೇಕೆ ? ಅದಿರಲಿ; ಮತ್ತೆಮತ್ತೆಯೂ ಇದೇಕಣಿಯನ್ನೇ ತೆಗೆದು ತೆಗೆದು ಕಾಲಹರಣಮಾಡಬೇಡ! ಮೊದಲು ನಾನು ಕೇಳಿದ ಮಾತಿಗೆ ಉತ್ತರವು ಬರಲಿ.