ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಮಾತೃನಂದಿನಿ 95 ರೆಲ್ಲರ ಬಾಯಿಂದಲೂ ಅದೇ ಮಾತೇ! ಕಡೆಗೆ ನನ್ನ ಸ್ವಾಮಿಯ ಬಾಯಿಂದ ಕೂಡ ಈಮಾತೇ ಹೊರಬೀಳುತ್ತಿದೆ. ನಂದಿನಿ:-ಸುರಸೆ! ನನ್ನ ತಲೆಯ ಮೇಲೆ ಅಂತಹ ಮಹಿಮಾಪ್ರಕಾ ಶಕವಾದ ಕಿರೀಟವೇನೂ ಇರುವುದಿಲ್ಲ. ನಾನೂ ಎಲ್ಲರಂತೆಯೇ ಒಬ್ಬ ಮೂಢ ಹೆಂಗಸು ಮಾತ್ರವಾಗಿರುತ್ತೇನೆ. ಅಲ್ಲದೆ, ಕಾಡಿನಲ್ಲಿಹುಟ್ಟಿ, ಕಾಡಿನಲ್ಲಿಯೇ ಬೆಳೆದು, ಕಾಡಿನಲ್ಲಿಯೇ ಅಲೆದಲೆಯುತ್ತಿದ್ದ ನನಗೆ, ಕಷ್ಟಕ್ಲೇಶಗಳು ಹೇಗೆ ಹೊಳೆಯಬೇಕು? ಯಾವಕಾಲಕ್ಕೆ ಯಾವಬಗೆಯ ಅನುಭವವು ಮುಂದಾ ಗುವುದೋ, ಅದರಲ್ಲಿಯೇ ಪೂರ್ಣ ಸಮಾಧಾನದಿಂದ ಗಮನವಿಡುವೆನಲ್ಲದೆ, ಅದನ್ನು ದ್ವೇಷಿಸುವುದು ನನ್ನ ಶೀಲವಾಗಿಲ್ಲ. ಹಾಗೆ ದ್ವೇಷಿಸುವ ಪಕ್ಷದಲ್ಲಿ ನನಗೆ ಪ್ರತಿಯೊಂದು ವಿಚಾರವೂ, ಆತಂಕವನ್ನೇ ಹೆಚ್ಚಿಸುತ್ತ ಬರುವುದಲ್ಲದೆ, ಸುಖ-ಸಮಾಧಾನಗಳನ್ನು ಕೊಡಲಾರವು. ಸುರಸೆ:- ನಿನ್ನ ತಲೆಯ ಮೇಲೆ ಕಿರೀಟವಿದೆಯೋ ಇಲ್ಲವೋ, ನನಗೆ ತಿಳಿಯದು. ಹೇಗೂ ಕೀರೀಟಕ್ಕೆ ಪ್ರತಿಯಾಗಿ ಅದ್ಭುತವಾದ ಆಕರ್ಷಣಾ ಶಕ್ತಿಯೊಂದು ನಿನ್ನಲ್ಲಿ ಅದೃಶ್ಯರೂಪದಿಂದ ಸಾಕ್ಷಾತ್ಕರಿಸಿರುವುದೆಂದು ಮಾತ್ರ ಧೈರ್ಯವಾಗಿ ಹೇಳಬಲ್ಲೆನು. ಇಲ್ಲದಿದ್ದರೆ ನೀನು ಇಲ್ಲಿಗೆ ಬಂದು ಎರಡು ವರ್ಷದೊಳಗಾಗಿ ನಿನ್ನ ಪ್ರಭಾವವು ಇಷ್ಟು ದೂರ ಪ್ರಸಾರವಾಗುತ್ತಿರಲಿಲ್ಲ. ನೀನು ಕಾಡುಹೆಂಗಸಿನಂತಿದ್ದರೇನು? ನವನಾಗರಿಕತೆಯ ಬೆಡಗನ್ನು ಸರಸವಾಗಿ ವರ್ಣಿಸುವೆಯಲ್ಲ! ಅದೊಂದೇ ನಿನ್ನ ಪ್ರಜ್ಞಾವಿಶೇಷಣದ ಹೆಗ್ಗುರುತಲ್ಲವೋ? ಅದೂ ಹಾಗಿರಲಿ; ಎಂತಹ ಕಠಿಣ ಪ್ರಸಂಗದಲ್ಲಿಯು ನೀನು ಎದೆ ಗೆಡದೆ, ಸ್ಥಿರತೆಯಿಂದಲೂ, ಆಮೋದದಿಂದಲೂ ಹೇಳುತ್ತಿರುವ ವ್ಯಂಗೊ. ಕ್ಲಿಷ್, ಅನ್ಯಾಪದೇಶಸ್ತುತಿ, ವ್ಯಾಜಸ್ತುತಿ ಮೊದಲಾದ ಬಹ್ವರ್ಥ ದ್ಯೋತಕ ಪದಗಳನ್ನು ಸರಸವಾಗಿ ಜೋಡಿಸಿ ಹೇಳುವ ಚತುರತೆಯನ್ನು ತೋರಿಸಿ, ಎಂತಹ ಪಂಡಿತರನ್ನಾಗಲೀ ಕ್ಷಣಮಾತ್ರದಲ್ಲಿ ಅಪ್ರತಿಭರಾಗುವಂತೆ ಮಾಡುತ್ತಿರುವೆಯೋ, ಅಂತಹ ಚಾತುರ್ಯವನ್ನು, ಮತ್ತಾರಲ್ಲಿಯಾದರೂ ತೋರಿಸಿಕೊಟ್ಟರೆ, ಆಗಲೀಗ ನೀನೂ ಸ್ತ್ರೀಸಾಮಾನ್ಯದಲ್ಲಿ ಒಬ್ಬಳಾಗಿರುತ್ತೀಯೆಂದೂ, ನೀನೂ ಒಬ್ಬ ಒರಟುತನದ ಕಾಡುಹೆಂಗಸೇ ಸರಿಯೆಂದೂ ಹೇಳಿಕೊಳ್ಳಬಹುದು. ಆ ವರೆಗೆ ಮಾತ್ರ, ನೀನು ಇಂತಹ ಆತ್ಮನಿಂದೆಯನ್ನು