84 ಸತೀ ಹಿತೈಷಿಣಿ ರಹಸ್ಯವಿಷಯವನ್ನಾಗಲೀ ತಿಳಿಸುತ್ತಿದ್ದೆನು. ಎಷ್ಟೋ ದಿನ, ನಮ್ಮ ಸತಿ-ಪತಿ ಯರ ಸಂವಾದವನ್ನು ಕೂಡ ಯಥಾವತ್ತಾಗಿ ತಿಳಿಸಿರುವೆನು. ಅದಕ್ಕೆ ತಕ್ಕಂತೆ ಮುಂದೆ ನಾನು ವರ್ತಿಸಬೇಕಾದ ಕ್ರಮವೆಂತಹದೆಂಬುದನ್ನು ನಿನ್ನಂದ ಕೇಳಿ ತಿಳಿದುಕೊಂಡೂ ಹೋಗಿರುವೆನು. ಹೆಚ್ಚೇಕೆ, ನಾನು ನನ್ನ ತಾಯಿಯ ಬಳಿಯಲ್ಲಿಯೂ ನಿನ್ನಲ್ಲಿಟ್ಟಿರುವ ಸಲಿಗೆಯನ್ನು ತೋರಿಸುತ್ತಿಲ್ಲ. ಅವರ ಹಿತ ಬೋಧೆಗಳನ್ನು ಮಾತ್ರವೇ ಕೇಳುತ್ತಿರುವೆನಲ್ಲದೆ, ಅವರಲ್ಲಿ ಅತಿಯಾಗಿ ಪ್ರಸಂಗಿಸುವುದಕ್ಕೂ ನನ್ನ ಮನಸ್ಸು ಮುಂದೋಡುತ್ತಿಲ್ಲ. ಇನ್ನು ತಂದೆಯ ಬಳಿಯಲ್ಲಿ ಹೇಗಿರುವೆನೆಂದು ಬೇರೆ ಹೇಳಬೇಕೆ? ನಂದಿನಿ:- ಅದೆಲ್ಲವೂ ಸಹಜವೇ! ಸಹಚಾರಿಣಿಯರೂ, ಸಮಾನ ವಯಸ್ಯೆಯರೂ, ಅಕೃತ್ರಿಮ ಸ್ನೇಹಾನುಬಂಧಿಗಳೂ ಆದ ಸಖೇಜನರಲ್ಲಿ, ತಮ್ಮ ಅಂತರಂಗವೆಳ್ಳಷ್ಟನ್ನೂ ಮುಚ್ಚಿಡದೆ ಹೇಳುವುದೂ, ಅದಕ್ಕಾಗಿ ಬೇಕಾದ ಹಿತಸೂಚನೆಗಳನ್ನೂ ಸಹಾಯಸಾಧನೆಗಳನ್ನೂ ಅವರಿಂದ ಹೊಂದುವುದೂ ಲೋಕದ ಸ್ವಭಾವವೇ ಆಗಿದೆ. ಇದು ನಿನಗೆ ಮಾತ್ರ ವಲ್ಲ. ಅದೆಲ್ಲಾ ಹಾಗಿರಲಿ, ನಾನು ನಿನಗೆ ಸಖೆಯಾದುದು ಈಗ ಎರಡು ವರ್ಷಗಳಿಂದೀಚೆಗೆ; ಅದಕ್ಕೂ ಮೊದಲಿಂದಲೇ ನಮ್ಮ ಸ್ವರ್ಣಯು ನಿತ್ಯ ಸಖೆಯಾಗಿರುವಳಷ್ಟೆ ! ಅವಳಿಲ್ಲಿ ಇರುವಾಗ ನಿನಗೇನು ಕೊರತೆ ? ಸುರಸೆ: ನಂದಿನಿ! ಹೊತ್ತು ಹೋಗದ ಕೊರತೆಯಲ್ಲ! ನಿಜವಾಗಿಯ ದೇಶದ ಮತ್ತು ದೇಶಭಗಿನಿಯರ ಹಿತಕ್ಕಾಗಿಯೇ ತಪಃಕ್ಲೇಶವನ್ನು ಸಹಿಸಿ, ಚಿರಬ್ರಹ್ಮಚಾರಿಣಿಯಾಗಿರುವ ನಿನ್ನಲ್ಲಿ, ಈಗ ಎರಡು ವರ್ಷಗಳಿಂದಲೂ, ಒಡನಾಡಿ, ಒಡನಿದ್ದು, ಬಗೆಬಗೆಯಾಗಿ ಕಾಡಿ ಬೀಡಿ, ಸಾಕು ಮಾಡುತ್ತ, ನಿನ್ನ ಅಕ್ಷಯವಾದ, ಅಮೃತತುಲ್ಯವಾದ, ಸುಬೋಧವಾದ ದಿವ್ಯವಾಣಿಯನ್ನು ಕೇಳಿ-ಕೇಳಿ ನಲಿದಾಡುತ್ತಿದ್ದೆವು. ನಿನ್ನೊಡಗೂಡಿ ಅಡಿಪಾಡಿ ಕಳೆದ ಈ ಎರಡು ವರ್ಷಗಳೂ ನಮಗೆ ಎರಡು ಗಳಿಗೆಯಂತೆಯೇ ತೋರಿ-ತೋರುತ್ತಿವೆ. ಆದರೆ, ಈ ಊರ ಪಾಪಿ-ಚಂಡಾಲಜನರ ಕಿರುಕುಳದಿಂದ ಈಗ ನಮ್ಮೆಲ್ಲರಿಗೂ ನಿನ್ನ ವಿರಹವ್ಯಥೆಯುಂಟಾಗುವಂತೆ ತಿಳಿದು, ಈಬಗೆಯ ಕಳವಳಕ್ಕೆ ಕಾರಣವಾಗಿದೆ. ನಾನು ಒಬ್ಬಳು ಹೇಳುವ ಮಾತಲ್ಲ. ನನ್ನ ನಾದಿನಿ ಪರಿಮಳೆ ಮೊದಲ್ಗೊಂಡು ನಮ್ಮ ಒಡನಾಡಿಯ
ಪುಟ:ಮಾತೃನಂದಿನಿ.djvu/೯೮
ಗೋಚರ