ಪುಟ:ಮಾತೃನಂದಿನಿ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ೦ದಿ ನಿ 83 ಎಂದು ಹಲವು ತರದಿಂದ ಯಾರನ್ನು ಕೂಗಿ ನಲಿಯಬೇಕು? ನಮ್ಮನ್ನು Dತಿ-ನೀತಿಗಳಿಂದಲೂ, ಸರಸ ಪ್ರಸಂಗದಿಂದಲೂ ಪ್ರೋತ್ಸಾಹಿಸುವ ರಾರು ?........ .. ಅದೇಕೆ, ಸುರಸೆ ? ನಾನಿಲ್ಲದ ಮಾತ್ರಕ್ಕೆ ನಿಮಗೆ ಅದೆಂದೂ ಇಲ್ಲ ದೆಯೇ ಹೋಗುವುದೇನು? ನಿಮ್ಮ ನಿಮ್ಮ ಪತಿರಾಜರು, ಒಡಹುಟ್ಟಿದವರು, ಇತರ ಒಡನಾಡಿಯರು, ಇವರೆಲ್ಲರೂ ಬಳಿಯಲ್ಲಿಯೇ ಇರುತ್ತಾರಷ್ಟೆ ? ” ಈಬಗೆಯ ಕಾತರೋಕ್ತಿ-ಪ್ರತ್ಯುಗಳು, ನರೇಶರಾಯನ ಮನೆಯ ಮುಂಗಡೆಯ ತೋಟದಲ್ಲಿ, ಕಲ್ಲು ಜಗಲಿಯ ಮೇಲೆ ಕುಳಿತಿದ್ದ ನಂದಿನಿ ಮತ್ತು ೧೪-೧೫ ವರ್ಷದ ಮತ್ತೋರ್ವ ತಾರುಣ್ಯವತಿಗೂ ನಡೆಯುತ್ತಿ ದ್ದುವು. ಈ ತರುಣಿಯ ಚಂದ್ರವದನೆಯ ಬಕುಮಾರಿಯೂ, ಅಚಲ ಚಂದ್ರನ ತಂಗಿಯೂ, ಸ್ವರ್ಣಕುಮಾರಿಯ ನಚ್ಚಿನ ಗೆಳತಿಯೂ ಆದ ಸುರ ಸೆಯು, ನಂದಿನಿಯೂ ಸುರಸೆಯ ಅಬ್ದ ರಲ್ಲದೆ ಮತ್ತಾರೂ ಅಲ್ಲಿರಲಿಲ್ಲ. ಇಬ್ಬರ ಮುಖದಲ್ಲಿಯೂ ಒಂದೊಂದು ಬಗೆಯ ಕೌತುಕವೂ, ಕೌತುಕದ ಹಿಂದೆಯೇ ಮುಂದಿನ ವಿರಹವನ್ನು ಕುರಿತ ಕಾತರವೂ ತೋರಿಬರುತ್ತಿವೆ. ಇದರ ಕಾರಣವೇನೋ, ಇವರಿಬ್ದ ರೂ ಇಲ್ಲಿ ಕುಳಿತು ಹೀಗೆ ಮಾತನಾಡು ವುದರ ಉದ್ದೇಶವೆಂತಹದೋ,ನಮಗಂತೂ ಈಗಲೇ ನಿರ್ಧರಿಸಿ ಹೇಳಲು ವಲ್ಲವಾಗಿದೆ. ಇರಲಿ; ತಾಳ್ಮೆಯೊಂದಿದ್ದರೆ, ಹೊ೦ಚಿ ನಿಂತು, ಅವರ ಸಂಭಾಷಣೆಯಿಂದಲಾದರೂ ತಿಳಿದುಕೊಳ್ಳಬಹುದಲ್ಲವೆ? ( ಆಗಲಿ. ) - ನಂದಿನಿ:-ಮತ್ತೊಮ್ಮೆ ಸುರಸೆಯ ಮುಖವನ್ನು ನೋಡಿ-ಸುರಸೆ! ಏಕೆ ಮಾತಿಲ್ಲ? ಹೇಳು, ಕೇಳುವ? ಒಂದುವೇಳೆ ನಾನಿಲ್ಲವೆಂದೇ ಭಾವಿಸುವ ಪಕ್ಷದಲ್ಲಿಯೂ, ನಿನಗೆ ಸರಸ ಪ್ರಸಂಗಕ್ಕಾಗಲಿ, ಕಾಲೋಚಿತಸೂತನೆಗಳಿ ಗಾಗಲೀ, ಜನರಿಲ್ಲವೆಂದಿರುವೆಯೋ, ಏನು ?” - ಸುರಸೆ:-ಜನರೂ ಇರುವರು; ಪ್ರಸಂಗವೂ ನಡೆಯುವುದು. ಆದರೆ,... ನಂದಿನಿ:-ಅದರೆ......ಏನು? ಅಷ್ಟಕ್ಕೇ ತತೆಯೇಕೆ ? ಮಾತನ್ನು ನುಂಗಿ ನುಂಗಿ ಹೇಳುತ್ತಿರುವ ಕಾರಣವೇನು ? ಹೇಳಬಾರದೆ, ತಂಗಿ? ಸುರಸೆ:-ನಂದಿನಿಗೆ ನಾನು ಏನನ್ನೂ ವಿವರಿಸಿ ಹೇಳಲಾರೆನು, ಏಕೆಂ ದರೆ, ನಿನ್ನಲ್ಲಿ ನಾನು ಈವರೆಗೆ ಒಂದು ಅಲ್ಪಾಂಶವನ್ನೂ ಬಿಡದೆ, ಎಂತಹ