ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತಿಹಿತ್ಯೆಶಿಣಿ ಖತಿಗೊಂಡು ಸುಮ್ಮನಾಗಿ,ತೀರ್ಥಪ್ರಸಾದಗಳನ್ನು ಕೈಗೊಂಡು, ಸಮಾಜ ಶಾಸನದಪರವಾಗಿಯೂ, ಜಗದ್ಗುರು ಪೀಠದಿಂದ ಕೊಡಲ್ಪಟ್ಟ ನಿರೂಪದ ಪರವಾಗಿಯೂ ಬಗೆಬಗೆಯಾಗಿ ತಮ್ಮತಮ್ಮ ಬಗೆಗೊಳ್ಳುವಂತೆ ಆಯ್ಕೆಗಳನ್ನು ಮಾಡುತ್ತ ನಿಜಗೃಹಗಳಿಗೆ ಅಭಿಮುಖವಾಗಿ ನಡೆದರು.

                       ___________

ಸಹೃದಯರೇ!

    ಇಂದಿನ ಸಮಾಜಶಾಸನವೆಂಬ ಪರಿಚ್ಛೇದವನ್ನು ವಿಲಿಖಿಸಿದುದಕ್ಕಾಗಿ, ನಿಮ್ಮಲ್ಲಿ ಅನೇಕರು ಆಗ್ರಹಯುಕ್ತರಾಗುವರಲ್ಲವೆ? ಆದರೆ, ನಾವು ಮಾಡತಕ್ಕುದೇನು? 'ಇದ್ದ ಸಂಗತಿಯನ್ನು ಇದ್ದಂತೆ, ಕಂಡಂತೆ, ವಿವರಿಸಬೇಕೆಂದು ಭಗವಂತನ ರೂಪವಾದುದರಿಂದ ಇದರಲ್ಲಿ ಸ್ವಲ್ಪವೂ ಹಿಂದೆಗೆಯದೆ ಬೀಳಿಸಿ ಬಿಟ್ಟೆವು. ಆಗ್ರಹಪಡುವವರು ನೀವಾದರೆ, ದಯವಿಟ್ಟು ಸ್ವಲ್ಪಮಟ್ಟಿಗೆ ನಿಮ್ಮ ತಿಳಿಗಣ್ಣುಗಳನ್ನು ತೆರೆದು, ಸಮಾಜಗಳ ಮತ್ತು ಪೀಠಾಧಿಪತಿಗಳೆಂದು ಹೇಳಿಕೊಳ್ಳುತ್ತಿರುವವರ ಕಡೆಗೆ ನೋಡಿದರೆ, ಆಗಲಾದರೂ ಅಲ್ಲಿಯ ಅವಿಚಾರಗಳನ್ನು ತಿಳಿದು, ಶಾಂತರಾಗುವಿರೆಂದು ಧೈರ್ಯವಾಗಿ ಹೇಳುವೆವು.
                        __________
                         || ಶ್ರೀ || 
                       ನವನ ಪರಿಚ್ಛೇದ. 
                      (ಗೃಹಿಣೀ ಧರ್ಮ) 
              "ಅಕ್ಕ' ನಿನ್ನನ್ನು ಬಿಟ್ಟಕೊಳ್ಳುವುದು ಹೇಗೆ?"
              "ಇದೇಕೆ? ಸುರಸೆ! ನಿನಗಿಷ್ಟೇಕೆ ಕಳವಳವು? "
              "ಅಲ್ಲ; ನಂದನಕ್ಕ! ನನಗೆ ಮತ್ತೇನೂ ಕಳವಳವಿಲ್ಲ. ಪ್ರಾಣಕ್ಕಿಂತಲೂ
          ಹೆಚ್ಚಿನ ಪ್ರಿಯಭಗಿನಿಯಾಗಿರುವ ನೀನು ಹೊರಟುಹೋದರೆ, ನಾವು ಮತ್ತಾರಲ್ಲಿ ಸರಸವಾಡುವುದು? ಮತ್ತು 'ಅಕ್ಕ, ಅಮ್ಮ, ತಾಯಿ, ನಂದಿನಿ, ನಂದಾ'