ಪುಟ:ಮಾತೃನಂದಿನಿ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮಾತೃನಂದಿನಿಯಲ್ಲಿ ಅಪಚಾರ ಕ್ಷಮಾಪಣೆಯನ್ನು ಕೋರಿ, ಆ ಬಳಿಕ ಪರಿಶುದ್ಧನಾಗಬೇಕೆಂದು ವಿಧಿಸಿರುವುದು ಅಲ್ಲದೆ, ಆತನು ಅಜ್ಞಾತಗೋತ್ರದವಳನ್ನು ಕೂಡಲೇ ಪರಿತ್ಯಾಗ ಮಾಡಬೇಕೆಂದೂ, ಮಗಳಿಗೆ ಈಗಲೇ ಶಾಸ್ತ್ರ್ ಸಮ್ಮತವಾಗಿ ವಿವಾಹ ಮಾಡಬೇಕೆಂದೂ ವಿಧಿಸಿರುವುದು. ಹೀಗೆ ಮಾಡುವುದು, ಇಲ್ಲವೆ ಮಾರುವೆನೆಂದು ಸಭಾಮಧ್ಯದಲ್ಲಿ ಪ್ರಮಾಣಪೂರ್ವಕವಾಗಿ ಹೇಳುವುದು; ಇವೆರಡರಲ್ಲಿ ಯಾವುದನ್ನಾದರೂ ಮಾಡಬೇಕು. ಇದನ್ನು ಮಾಡುವವರೆಗೂ ಅವರೊಡನೆಯಾಗಲೀ, ಅವರ ಹೆಂಡತಿ-ಮಕ್ಕಳು-ಪರಿವಾರದವರೊಡನೆಯಾಗಲೀ ಮತ್ತು ಆಚಲಕಂದ್ರ-ಶರಚ್ಚಂದ್ರರೇ ಮೊದಲಾದವರೂಡನೆಯಾಗಲೀ ಯಾರೂ-ಹೇಗೂ (ಸಹವಾಸ-ಸಂಸರ್ಗ) ಕಲೆಯಬಾರದೆಂದು ವಿಧಿಸಲ್ಪಟ್ಟಿದೆ. ಇದನ್ನು ಮಾರಿ ನಡೆದವರಿಗೂ ಇದೇ ಪ್ರಾಯಶ್ಚಿತ್ತವಾಗ ತಕ್ಕುದೆಂದು ಪುನಃ ಪುನಃ ಎಚ್ಚರಿಸಿದೆ.........'

    ಸ್ವಾಮಿಗಳ ಬಾಯಿಂದ ಇನ್ನೂ ಆವಾವ ನಿರೂಪಗಳು ಹೊರಡುತ್ತಿದ್ದವೊ ತಿಳಿಯದು. ಆದರೆ, ಅಷ್ಟರಲ್ಲಿ ಅದೆಲ್ಲವನ್ನೂ ಕೇಳಿ ತಿಳಿವಷ್ಟರ ತಾಳ್ಮೆಯು ಸಭಿಕರಲ್ಲಿರಲಿಲ್ಲ. ನಾಗೇಶ ಮತ್ತು ಆತನ ಅನುಗಾಮಿಗಳಿಗಾದ ಶಾಸನಗಳಿಂದ ಅಲ್ಲಿದ್ದವರೆಲ್ಲರೂ ಹಬ್ಬದ ಹೋಳಿಗೆ-ಚಿತ್ರಾನ್ನದೂಟಗಳನ್ನು ತಿಂದುದಕ್ಕೂ ಹೆಚ್ಚಾದ ಸಡಗರದಿಂದ ಉತ್ತರೀಯಗಳನ್ನು ಹಾರಿಸುತ್ತಲೂ, ಕೈ ತಟ್ಟುತ್ತಲು, ಬಳಿಯಲ್ಲಿರುವವರ ಬೆನ್ನ ಮೇಲೆ ಹೊಡೆಯುತ್ತಲೂ ಇನ್ನೂ ಬಗೆಬಗೆಯ ಉತ್ಸಾಹಪ್ರದರ್ಶನಗಳಿಂದ ಸಮ್ಮತವೋ ಸಮ್ಮತವು; ನಮ್ಮೆಲ್ಲರಿಗೂ ಇದು ಸಮ್ಮತವು. ನಿರೂಪವನ್ನು ಶಿರಸಾವಹಿಸಿ ನಡೆಯುವೆವು; ನಮ್ಮಲ್ಲಿ ಯಾರೂ ಅವರೊಡನೆ ವ್ಯವಹರಿಸುವುದಿಲ್ಲ. ಅವರು ಪ್ರಾಣಬಿಡುತ್ತಿದ್ದರೂ ನಮ್ಮವರು ಅವರಿಗೆ ಸಹಾಯವನ್ನೂ ಮಾಡುವುದಿಲ್ಲ.' ಎಂದೀ ಬಗೆಯಿಂದ ಕೂಗಿ ಕೂಗಿ ಹೇಳುತ್ತ ದೊಡ್ಡ ಸಂತೆಯ ಕೋಲಾಹಲವನ್ನು ಎಬ್ಬಿಸಿಬಿಟ್ಟರು.ಸ್ವಾಮಿಗಳಿಗೆ ಪಾಪ ಮುಂದೆ ಕ್ಷಣವೂ ತಡೆಯಲಾಗಲಿಲ್ಲ. ಕೋಲಾಹಲದ ಮಧ್ಯದಲ್ಲಿ ಇನ್ನು ಕುಳಿತಿರಲಾರದೆ, ಬೆವತು ಬೆವತು ಬೀಸತ್ತ ದೇಹಕ್ಕೆ ವಿಶ್ರಾಂತಿಯನ್ನುಂಟುಮಾಡಲು ಬೇರೆ ಕಡೆಗೆ ಸದ್ದಾಗದಂತೆ ಎದ್ದು ಹೊರಟು ಹೋದರು. ಸ್ವಾಮಿಯವರ ಅದೃಶ್ಯದಿಂದ ಅಲ್ಲಿದ್ದವರೆಲ್ಲರ