ಪುಟ:ಮಾತೃನಂದಿನಿ.djvu/೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


D

            ಸತೀಹಿತೈಷಿಣೀ

ಇರುಳು ನಡೆಯುತ್ತಿದೆ. ಹೆಚ್ಚೇಕೆ? ಒಟ್ಟಿನಲ್ಲಿ ನಾಗೇಶರಾಯನ ಪುಂಡಾಟದಿಂದ ಈ ಮಠಕ್ಕೂ, ಸಮಾಜಕ್ಕೂ ಸಾವಿರಗಟ್ಲೆ ರೂಪಾಯಿಗಳವರೆಗೂ ನಷ್ಟವಾಗಿರುವುದಲ್ಲದೆ, ಇನ್ನೂ ಸರ್ವನಾಶವಾಗುವಂತೆ ಮಾಡುವ ಸೂಚನೆಯೂ ಇದೆಯೆಂದರೆ ಸಾಕು. ಇದೆಲ್ಲವೂ ಸುಳ್ಳೋ-ನಿಜವೋ, ನನ್ನ ಒಬ್ಬನ ಅಭಿಪ್ರಾಯ ಮಾತ್ರವೋ-ಎಲ್ಲರ ಅಭಿಪ್ರಾಯವೂ ಅಹುದೋ-ಎಂಬುದನ್ನು ಇಲ್ಲಿರುವವರ ಬಾಯಿಂದ ಕೇಳಬಹುದು.'

 ಸ್ವಾಮಿಗಳು ಮತ್ತೊಮ್ಮೆ ಕುತೂಹಲದಿಂದ ಸಭೆಯನ್ನು ನೋಡಿದರು. ಎಲ್ಲರೂ ಏಕಕಂಠದಿಂದ,-“ನಿಜ ! ಭಟ್ಟಾಚಾರ್ಯರ ವಿನಂತಿಯೆಲ್ಲವೂ ನಿಜ! ಇದಕ್ಕೆ ನಾವೆಲ್ಲರೂ ಒಪ್ಪಿದ್ದೇವೆ. ಇವರ ವಿನಂತಿಯನ್ನು ಮಾನ್ಯಮಾಡದಿದ್ದರೆ ಧರ್ಮಚ್ಯುತಿಯಾಗದೆ ಬಿಡುವುದಿಲ್ಲವೆಂಬುದೇ ನಮ್ಮ ವಿನಂತಿಯೂ ಆಗಿರುವುದು" ಎಂದು ಕೂಗಿ ಹೇಳಿದರು. ಆ ಬಳಿಕ ಕೇಳಬೇಕೆ ಸ್ವಾಮಿಗಳ ಸಂಭ್ರಮವನ್ನು ! ಅವರ ಅಮುಪ್ಪಿನಲ್ಲಿಯೂ ಉತ್ಸಾಹ ಶಕ್ತಿಯುಕ್ಕೇರಿ ಬರುತ್ತಿದ್ದುದರಿಂದ ಘನಗಂಭೀರಸ್ವರದಲ್ಲಿ ಹೀಗೆ ನಿರೂಪಿಸಿದರು:- 

ಪ್ರಿಯಶಿಷ್ಯರೇ!

  ಈವರೆಗೆ ನಡೆದ ವಿಚಾರಗಳಿಂದ ಧರ್ಮವು ಶಿಥಿಲಸ್ಥಿತಿಗೆ ಬರುತ್ತಿರುವುದೆಂದೂ, ಅದಕ್ಕೆ ವಿದ್ಯಾಬುದ್ಧಿಗಳನ್ನು ಚೆನ್ನಾಗಿ ಕಲಿತು ಸಂಪನ್ನರೆನ್ನಿಸಿರುವವರೇ ಮುಂದಾಳುಗಳಾಗಿ ನಿಂತಿರುವರೆಂದೂ ತಿಳಿದು ವಿಚಾರಿಸಬೇಕಾಗಿರುವುದು. ಇದಕ್ಕಾಗಿ, ಪ್ರಜೆಗಳ ಕ್ಷೇಮಾಭ್ಯುದಯಕ್ಕಾಗಿ, ನಾಗೇಶರಾಯ ಮತ್ತು ಆತನ ಅನುಗಾಮಿಗಳಾಗಿರುವವರನ್ನೂ ಸರಿಯಾದ ಪ್ರಾಯಶ್ಚಿತ್ತಕ್ಕೆ ಗುರಿಮಾಡಬೇಕೆಂಬ ನಿಮ್ಮ ವಿನಂತಿಯನ್ನು ಮಾನ್ಯಮಾಡಿರುತ್ತೇವೆ. ಅದರಂತೆಯೇ ಈಗ ಉಂಟಾಗಿರುವ ಸಮಾಜದ ಶಾಂತಿಭಂಗ, ಮಠದ ಆದಾಯದ ನಿರೋಧ, ಇವುಗಳಿಗೆ ಪ್ರತಿಫಲವಾಗಿಯೂ, ಮತ್ತ ಮತಾಚಾರಗಳನ್ನು ಅತಿಕ್ರಮಿಸಿ, ವಿಧಮಿಯಾರ್ಗಿ ಬ್ರಹ್ಮತೇಜೋವಧೆಯೇ ಮೊದಲಾದ ಅನುಚಿತ ವ್ಯಾಪಾರಗಳಿಂದ ಇತರರನ್ನೂ ಕುಮಾರ್ಗದಲ್ಲೆಳೆಯುತ್ತಿರುವುದರ ಪ್ರತಿಫಲವಾಗಿಯೂ, ಆತನು ಗುರುಪೀಠಕ್ಕೆ ಐದುನಾವಿರ ರೂಪಾಯಿ ಗಳನ್ನು ಒಪ್ಪಿಸಿ, ಅದರಿಂದ ಶಾಂತಿಕ್ರಿಯೆಗಳೆಲ್ಲವನ್ನೂ ನಡೆಯಿಸಿ, ಸನ್ನಿಧಿ