ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

79 ಮಾತೃನ೦ದಿನಿ

  ವಿಶ್ವನಾಥ:- ಎದ್ದು ನಿಂತು ವಿನಯದಿಂದ ಕೈಜೋಡಿಸಿ,- 11ಜಗ ಗುರು ಸಾರಪೀಠದಲ್ಲಿ, ಇಲ್ಲಿ ಕರೆದಿರುವ ಪ್ರಜೆಗಳ ಪರವಾಗಿ ನನ್ನ ವಿನಂತಿಯೊಂದು:-
  'ನಗೇಶರಾಯನು ಶುದ್ಧ ಪಾಷಂಡಮತದವನಾಗಿರುತ್ತಾನೆ. ಆತನು ವಿವಾಹೋವನಯನಾದಿ ಸಂಸ್ಕಾರಗಳನ್ನು ( ಧರ್ಮ ) ನ್ಯಾಯಶಾಸ್ತ್ರಕ್ಕೆ ವಿರೋಧವಾಗಿ ನಡೆಸುವುದಲ್ಲದೆ, ಅನೇಕ ಅತ್ಯಾಚಾರಕ್ಕೂ ಕಾರಣನಾಗಿ ತಿರುಗಿದ್ದಾನೆ. ಮದುವೆಯ ಕಾಲವು ಮೀರಿದ್ದರೂ ಮಗಳನ್ನು ಹಾಗೆಯೇ ಬೆಳೆಸುತ್ತಿರುವನಲ್ಲದೆ,- -ಪ್ರಾಯಸಮರ್ಥನಾದ ಮಗನನ್ನೂ ಕೂಡ ಪ್ರಜಾಪತಿಯಾಗಿ ಮಾಡದೆ ಇನ್ನೂ ಬ್ರಹ್ಮಚಾರಿಯನ್ನಾಗಿ ಮಾಡಿಟ್ಟು, ಮನೆ ಬಾಗಿಲಿಗೆ ಬಂದು ಬೇಡುತ್ತಿರುವ ಕನ್ಯಾಪಿತೃಗಳೆಲ್ಲರನ್ನೂ ಅಪಮಾನಕ್ಕೆ ಗುರಿಪಡಿಸಿ ಕಳಿಸುತ್ತಿರುವನು. ಸಾಲದುದಕ್ಕೆ ಅವಳಾವಳಳೋ-ಅಜ್ಞಾತ ಗೋತ್ರದ ಭಿಕ್ಷುಕನ ಮಗಳು-ಅವಿವಾಹಿತೆಯಾದ ಷೋಡಶಿಯೊಬ್ಬಳನ್ನು ಬೇರೆ, ಮನೆಯಲ್ಲಿ ಕರೆತಂದಿಟ್ಟ; ಅವಳನ್ನು ಹುರಿದುಂಬಿ ಮುಂದೆ ನಿಲ್ಲಿಸಿ, ಅವಳ ಮೂಲಕ ಗುರು-ಹಿರಿಯರನ್ನೂ, ದೈವ-ಬ್ರಾಹ್ಮಣರನ್ನೂ ವಿಶೇಷವಾಗಿ ನಿಂದಿಸುತ್ತಿರುವನು. ಅಷ್ಟೇ ಅಲ್ಲ! ಇನ್ನೂ  ಅತಿಕ್ರ ಗಳಿಂದ ನಮ್ಮ ಜನಾಂಗಕ್ಕೂ ಈ ಮಟ್ಟಕ್ಕೂ ಮುಖ್ಯ ಶತ್ರುವಾದ ರಕ್ಕಸನ್ನಂತೆ ತಿರುಗಿ, ಹಣದ ಉಕ್ಕಿನಿಂದ ಸೊಕ್ಕಿ, ಯಾರ ಗಣನೆಯೂ ಇಲ್ಲದೆ ತಿರುಗುತ್ತಿರುವನು. ಅವನ ಹಣಕ್ಕೆ ಬೆರೆದ ಇತರ ನಾಸ್ತಿಕರೂ, ಈಗಿನ ನಾಗರಿಕರೆಂದು ಹೆಸರ್ರೊಂಡ ಅಧಿಕಾರಿಗಳೂ ಅವನಂತೆಯೇ ನಡೆಯುತ್ತಿ ರುವರು. ಹೀಗೆಯೇ ಬಿಟ್ಟರೆ, ಇನ್ನು ನಾಲ್ಕಾರು ತಿಂಗಳಲ್ಲಿಯೇ ಪಟ್ಟಣವೆಲ್ಲವೂ ನಾಸ್ತಿಕವಾದಿಗಳಿಂದ ಕಬಳಿಸಲ್ಪಡುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಎಷ್ಟೋ ಸೇವಾಕಾರ್ಯಗಳು ಸಲ್ಲಿಸಲ್ಪಟ್ಟಿವೆ. ಮತಕ್ಕೆ ಬರುತ್ತಿದ್ದ ವರಮಾನದಲ್ಲಿ ಈಗ ಅರೆಪಾಲು ಕಡಿಮೆಯಾಗಿದೆ. ಸೇವೆ ಸಂತರ್ಪಣೆ-ಸಂಭಾವನೆ ಪ್ರಾಯಶ್ಚಿತ್ತಗಳಿಗೆನಂದು ಬರುತ್ತಿದ್ದ ಆದಾಯದಲ್ಲಿ ಮೂರು ಪಾಲು ತಡೆಯಲ್ಪಟ್ಟು, ಅವೆಲ್ಲವೂ ಜಲಾಶಯ ನಿರ್ಮಾಣ-ಅನಾಧಾಲಯನ್ಧಾಪನೆ ಮೊದಲಾದವಕ್ಕೆಂದು ವಿನಿಯೋಗವಾಗುತ್ತಿವೆ. ಇನ್ನು ಳಿದಿರುವ ಅಲ್ಪಸ್ವಲ್ಪ ಭಾಗಕ್ಕಾದರೂ ಸೊನ್ನೆ ಸುತ್ತುವ ಏರ್ಪಾಟು ಹಗಲೂ