ಪುಟ:ಮಾತೃನಂದಿನಿ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

78 ಸತೀ ಹಿತೈಷಿಣೀ ವಿನಯದಿಂದ ಕೇಳಿಡಾರು:- ಸಾರಪೀಠದಲ್ಲಿ ಅಪರಾಧವೇನಾದರೂ ನಡೆದಿರುವುದೇನು?'

  ಸ್ವಾಮಿಗಳು:-- ಎಲ್ಲಿ? ನಗೇಶರಾಯನ ಮತ್ತೂ ಆತನ ಅನುಗಾಮಿಗಳ ಸುಳಿವೇ ಇಲ್ಲ? ನಿರೂಪವು ಹೋಗಿದ್ದಿತೋ ಇಲ್ಲವೋ??
  ಗಣೇಶ:-ಅವರಿಗೆ ನಿರೂಪವು ಹೋಗದಿದ್ದಿತೇ? ಅವರಿಗಾಗಿಯೇ ಏರ್ಪಟ್ಟ ಇಂದಿನ ಪರಿಷತ್ತಿಗೆ ನಿರೂಪವೂ ಹೋಗಿದ್ದಿತು; ಜನರನ್ನೂ ಎರಡುಬಾರಿ ಕಳುಹಿದ್ದಿತು. ಆದರೂ ಅವರಾಗಲೀ, ಅವರ ಮನೆಯವರಾಗಲೀ ಮತ್ತು ಅವರ ಅನುಗಾಮಿಗಳಾಗಿರುವ ಅಚಲಚಂದ್ರ, ಅವನ ತಂದೆ ಶರಚ್ಚಂದ್ರ, ಅವನ ಪರಿವಾರದವರು, ಕಲೆಕ್ಟರ್ ಜ್ಞಾನಸಾರ ಚಕ್ರವರ್ತಿಗಳು ಇವರಲ್ಲಿ ಒಬ್ಬರಾಗಲೀ ಬಂದಿಲ್ಲ.
  ಸ್ವಾಮಿ:-ಏನು? ಬಂದಿಲ್ಲವೆ? ಎಷ್ಟು ಧೈರ್ಯ? ಏನು-ಸಾಹಸ? ಎಂತಹ ವ್ಯಾಪಾರ? ಆಗಲಿ;- ಹೋಗಿದ್ದವರಾರು ? ಏನುತ್ತರಕೊಟ್ಟರು?
  ಪರಿಚಾರಕ:- ಮಹಾಸ್ವಾಮಿ! ಪಾದಸೇವಕನು ನಾನೇ ಹೋಗಿ, ಕರೆದೆನು. ನಗೇಶರಾಯನು. ತಾನು ಯಾವ ಅಧರ್ಮವನ್ನೂ, ಆಚರಿಸಿಲ್ಲವಾದುದರಿಂದ ಪ್ರಾಯಶ್ಚಿತ್ತಕ್ಕೆ ಬರತಕ್ಕವನಾಗಿಲ್ಲವೆಂದೂ, ಮನೆಯವರನ್ನೂ ಕಳುಹುವಂತಿಲ್ಲವೆಂದೂ ಹೇಳಿದನು. ಆದರೆ ಆತನ ಮಗನೊಬ್ಬನು ಮಾತ್ರ ಬಂದು, ಮಠದೊಳಕ್ಕೆ ಬಾರದೆ ಹೊರಗೆ ನಿಂತಿರುವನು. ಶರಚ್ಚಂದ್ರನು ವಾರಕ್ಕೆ ಮೊದಲು ಯಾತ್ರಾರ್ಥಿಯಾಗಿ ಹೋದವನು ಇನ್ನೂ ಊರಿಗೆ ಬಂದಿಲ್ಲ. ಆತನ ಮನೆಯ ಹೆಂಗಸರು-ಮಕ್ಕಳು ಮಾತ್ರ ಬಂದು ಹೊರವಳಯದಲ್ಲಿ ಕುಳಿತು ನೋಡುತ್ತಿರುವರು; ಅವರೂ ಗಂಡಸರ ಸಮ್ಮತಿಯಿಲ್ಲದೆ ಮತ್ತಾವ ಕೆಲಸವನ್ನೂ ಮಾಡುವರಲ್ಲವಂತೆ? ಕಲೆಕ್ಟರರು ಅಗತ್ಯವಾದ ರಾಜ ಕಾರ್ಯದಲ್ಲಿ ತೊಡಕಿಕೊಂಡಿರುವುದರಿಂದ ಬರುವಂತಿಲ್ಲವೆಂದೂ, ಇದಕ್ಕಾಗಿ ಸನ್ನಿಧಿಯಲ್ಲಿ ಕ್ಷಮೆಯನ್ನು ಕೋರುವೆನೆಂದೂ ಕೇಳಿಕೊಂಡರು. ಅಚಲ ಚಂದ್ರನೊಬ್ಬನು ಮಾತ್ರ ಯಾವಾಗಲೂ ಗುರುಪೀಠಕ್ಕೆ ವಿರುದ್ಧಾಚಾರಿಯ ಗಿಯೇ ಇರುವುದರಿಂದ ಆತನನ್ನು ಕರೆಯಲು ಹಿಂದೆಗೆದೆನು.
  ಸ್ವಾಮಿಗಳು ನಿರುತ್ತರರಾಗಿ ವಿಶ್ವನಾಥಭಟ್ಟಾಚಾರ್ಯರನ್ನು ನೋಡಿದರು.