ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

161 || ಶ್ರೀಃ || ಪಂಚದಶ ಪರಿಚ್ಛೇದ. -ಕೆ . ಮಾತೃಸಮ್ಮುಖದಲ್ಲಿ ( ಅನಂದ-ಸಂಭ್ರಮ:-- ಧನ್ಯವಾದ ) « ಸರ್ವಂಸಹೇತಿ ವಸುಧೇತ್ಯಚಲೇತಿ ಮಾತರ್ನಿಶ್ವಂಭ ರೇತಿ ವಿಪುಲೇತಿ ವಸುಂಧರೇತಿ |ಅನ್ಯಾನಿ ಯಾ ನ್ಯಾಭಿಮುಖಾನ್ಯಭಿಧಾನ ನೃತ್ಯಾ ನಾಮಾನ್ಯಮೂನಿ ಕಥಯನ್ತಿ ತವಾನುದಾನಮ್ || ಆನಂದವನದ ಮಾತೃಮಂದಿರದ ಆನಂದವೇ ಆನಂದ! ಸತ್ಯಾನಂದ ಬ್ರಹ್ಮಚಾರಿಯ ಆನಂದವೇ ಬ್ರಹ್ಮಾನಂದ!! ಆನಂದಮೂರ್ತಿಯ ಇಂದಿನ ಆನಂದೋತ್ಸವವನ್ನು ನೋಡುವರೆಲ್ಲರಿಗೂ ಆಗುವ ಆನಂವನೇ ನಿಜವಾದ ಆತ್ಮಾನಂದ!!! ಮಾತೃಮಂದಿರದ ಶೃಂಗಾರವನ್ನು ವಿವರಿಸಲು ಈ ಲೇಖನಿಗಳವಲ್ಲ. ಅನಂದವನದ ಇಂದಿನ ನವೀನಾನಂದ ಸ್ವರೂಪವನ್ನು ಯಾಥಾವತ್ತಾಗಿ ವಿವರಿಸಲು ಅವಕಾಶವೂ ಇಲ್ಲ. ಒಂದೆರಡು-ನಾಲ್ಕಾರು ಮಾತುಗಳಿಂದ ಸಂಗ್ರಹವಾಗಿ ಹೇಳಿದರೆ, ಮುಂದಿನ ವಿದ್ಯಮಾನವನ್ನು ಮನನಮಾಡಿ ಕೊಳ್ಳುವುದು ವಾಚಕರನ್ನೇ ಸೇರಿರಬೇಕಲ್ಲದೆ ಬೇರಿಲ್ಲ. ಮಾತೃಮಂದಿರವು ಇಂದು ಹೇಗೆ ಪರಿಶೋಭಿಸುತ್ತಿದೆಯೆಂದು ತಿಳಿ ದಿರುವಿರಿ ? ಬೆಳಬೆಳಗುವ ನೆಲದಲ್ಲಿಯಾಗಲೀ, ತೊಳಗುವ ಗೋಡೆಗಳಲ್ಲಿ