ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

160 ಸತೀ ಹಿತೈಷಿ ಅನೇ ಒಳಿಕ, ಮುಂದೆ ದೇಶಸೇವೆಗೆ ಮುಖ್ಯ ಪಾತ್ರವಾಗಿ ನಿಲ್ಲಬೇಕಾದ ನೀನೇ ಹೀಗೆ ಅಧೈರ್ಯಪಡುವುದು ನ್ಯಾಯವೇ?-ನೀತಿಸಮ್ಮತವೇ? ಬಿಡು; ಯಾವ ಸಂಶಯವಿದ್ದರೂ ದೂರದಲ್ಲಿ ಬಿಟ್ಟು ಬಿಡು. ನನ್ನನ್ನು ಅವಿಶ್ವಾಸಿಯೆಂದು ಭಾವಿಸಿ, ಶಂಕಿಸಬೇಡ. ನನ್ನನ್ನು, ನಿನ್ನ ನಿರಂತರದ ಶ್ರೇಯೋಭಿವೃದ್ಧಿ ಯನ್ನೇ ಮುಖ್ಯ ಗುರಿಯಾಗಿಟ್ಟು ಚಿಂತಿಸುತ್ತಿರುವ ಆಪ್ತರ್ಗದಲ್ಲಿ ಪರಿಗಣಿಸಿ ಸಮಾಧಾನ ಹೊಂದು. ಭವಿಷ್ಯವನ್ನು ಕುರಿತು, ಈಗಲೇ ಹೀಗೆಂದು ನಿರ್ಧರಿಸಿ ಹೇಳಲು ನನಗಳವಲ್ಲ. ಆದರೆ, ನೀನು ಅಚಲಚಂದ್ರನಾಥನ ಅಭಿಪ್ರಾಯಕ್ಕೆ ವಿರೋಧವಾಗಿ ನಡೆಯಬಾರದೆಂದು ಮಾತ್ರ ಮತ್ತೊಂದು ಬಾರಿ ಎಚ್ಚರಿಸುತ್ತಿರುವೆನು. ಹೀಗೆ ಬರೆದೆನೆಂದು ಆಗ್ರಹಿಸಬಾರದಾಗಿ ಕೋರುವೆನು. ಹೆಚ್ಚು ಬರೆಯಲಾರೆನು. ಇತಿ,- ಶ್ರೇಯಃಕಾಂಕ್ಷಿಣಿ, ನಂದಿನಿ.” ಎಂದು ಪತ್ರವನ್ನು ಮುಗಿಸಿ, ಅಂಟು ಹಾಕಿ, ಪುಸ್ತಕದಲ್ಲಿಟ್ಟು, ("ಭಗವತಿ ! ನಿನಗೆ ನನ್ನ ಇಂದಿನ ಕ್ರಿಯಾಕಲಾಪವೆಲ್ಲವೂ ಸಮರ್ಪಕವಾಗಿದೆ ಯಷ್ಟೆ ? ಕಾಪಾಡು.” ಎಂದು ಹೇಳುತ್ತ ಹೇಳುತ್ತ ನಿದ್ರಾಂಗನೆಯನ್ನು ಉಪಾಸಿಸಲು ಮೊದಲುಮಾಡಿದಳು.