ಪುಟ:ಮಾತೃನಂದಿನಿ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

159 ಮಾತೃನ೦ದಿನಿ ಸಿದರೆ, ನನಗೆ ಸಾಕಾಗಿದೆ. ಸದ್ಯದಲ್ಲಿ ಮತ್ತೇನನ್ನೂ ಬರೆಯಲಾರೆನು. ಇಷ್ಟು ದೂರ ಸ್ವಾತಂತ್ರ್ಯವನ್ನು ವಹಿಸಿ ಬರೆದುದಕ್ಕಾಗಿ ಕ್ಷಮೆಯಿರಲಿ. ಇತಿ,- ಶ್ರೇಯೋಭಿಲಾಷಿ, . ನಾದಾನಂದ,” ನಂದಿನಿಯು ಪತ್ರವನ್ನು ಮೂರು-ನಾಲ್ಕು ಬಾರಿ ಓದಿ ನೋಡಿದಳು. ಮತ್ತೆ ಮತ್ತೆ ಯೋಚಿಸಿದಳು. ಬಹಳ ಹೊತ್ತು ಏನನ್ನೊ ಚಿಂತಿಸುತ್ತಿ ದ್ದಳು. ಕಡೆಗೆ ಬಳಿಯಲ್ಲಿದ್ದ ಲೇಖನ ಸಾಮಗ್ರಿಯನ್ನು ತೆಗೆದು ಕೈಕೊಂಡು ನಾದಾನಂದನಿಗೆ ಉತ್ತರವನ್ನು ಕೊಡಲು ಹೀಗೆ ಬರೆಯತೊಡಗಿದಳು:- || ಪ || (ವಿಶ್ವಸನೀಯನಾದ ನಾದಾನಂದ! ಪ್ರಜ್ಞಾವಂತನಾದ ನಿನಗೆ ನಾನು ಹೇಳಬೇಕಾದುದೇನಿದೆ ? ಮಕ್ಕಳು ತಾಯ್ತಂದೆಗಳ ಇಷ್ಟದಂತೆ ನಡೆಯಬೇಕೆಂಬುದೂ, ಅವರ ಶಾಸನವನ ಸ್ವಪ್ನದಲ್ಲಿಯೂ ಉಲ್ಲಂಘಿಸದೆ ಪರಿಶುದ್ಧಾಂತಃಕರಣದಿಂದ ನಡೆಯುತ್ತಿರ ಬೇಕೆಂಬುದೂ, ಸತ್ಪುತ್ರನಾದ ನಿನಗೆ ತಿಳಿದೇ ಇದೆ. ಹೀಗಿರುವಲ್ಲಿ, ಕೇವಲ ಏಕಮಾತ್ರಬಂಧುವಾಗಿರುವ-ತಂದೆಯೂ ಗುರುವೂ ಪೂಜ್ಯನೂ ಆಗಿರುವಆ ನನ್ನ ಪರಮಪೂಜ್ಯಪಾದರ ಆಜ್ಞೆಯಂತೆ ನಡೆಯುತ್ತಿರುವ ನನ್ನನ್ನು ಮತ್ತೆ ಮತ್ತೆಯ ಕೇಳಬೇಕಾದ ಶ್ರಮವೇಕೆ? ಈ ನಂದಿನಿಯು, ಗುರುಚಿತ್ರಕ್ಕೆ ಅವಿಧೇಯಳೆಂಬ ಭಾವನೆಯುಂಟಾಗಿದೆಯೇನು ? ಹಾಗಿದ್ದರೆ, ದಯೆ ಯಿಟ್ಟು ಅದನ್ನು ಬಿಟ್ಟು ಬಿಡು, ಅಜಲಚಂದ್ರನು ನನ್ನ ಪೂಜ್ಯಭ್ರಾತೃವು. ಆತನ ಸೂಚನೆಯಂತೆ ನಡೆಯುತ್ತಿರುವುದೇ ನನಗೆ ಸದ್ಯದ ಕರ್ತವ್ಯವು. ಅಷ್ಟಲ್ಲದೆ ಮತ್ತಾವುದನ್ನೂ ನಾನು ಹೇಳಲಾರೆನು. ನಾನಾನಂದ ! ಇಷ್ಟಕ್ಕೆ ನೀನು ಕಾತರನಾಗುವುದು ನನಗೆ ಸಮ್ಮತವಾಗಿಲ್ಲ. ಯಾರೂ ಹತಾಶರಾಗಿ ಪ್ರಯತ್ನವನ್ನು ಬಿಟ್ಟು ಜಡಭಾವದಲ್ಲಿ ಕುಳ್ಳಿರುವುದು ಸರಿಯಲ್ಲ.--ಎಂದ