ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಳೆಯ ಗಿಡ ೬೧ ಕೆಲವು ದಿನಗಳು ಇಟ್ಟಿದ್ದರೆ ಹಣ್ಣಿಗೆ ಹಳದಿ ಬಣ್ಣವೂ ಸುವಾಸನೆಯ ರುಚಿಯೂ ಹುಟ್ಟುವುವು. ಕಾಯನ್ನು ಹಣ್ಣಾಗುವ ವರೆಗೆ ಮರದ ಮೇಲೆ ಬಿಟ್ಟಿರುವುದೂ ಉಂಟು, - ಬಂಗಾಳದಲ್ಲಿ ಮಾವಿನ ಎಲೆ ತೊಗಟೆಗಳಿಂದ ಒಂದುಬಗೆಯ ರಂಗನ್ನು ತೆಗೆವರು, ಡಕ್ಕಾ, ಬಾಂಕೂರ ಈ ಸ್ಥಳಗಳಲ್ಲಿ ಚರ್ಮವನ್ನು ಹದ ಮಾಡುವೆ ವುದರಲ್ಲಿ ಮಾವಿನ ತೊಗಟೆಯನ್ನು ಉಪಯೋಗಿಸುವರು. ತೊಗಟೆಯಿಂದ ಒಂದು ತರದ ಗೊಂದೂ ಸಿಕ್ಕು ಇದೆ. ಮದುವೆ ಮುಂತಾದ ಉತ್ಸವಕಾಲಗಳಲ್ಲಿ ಹಿಂದೂಜನರು ಮಾವಿನೆಲೆಗಳನ್ನು ಮನೆಯ ಬಾಗಲಿಗೆ ತೋರಣವಾಗಿ ಕಟ್ಟುತ್ತಾರೆ. ಎಲೆಗಳಿಂದಲೂ ಕಡ್ಡಿಗಳಿಂದಲೂ ಹಲ್ಲುಜ್ಜುವರು. ಹೂವನ್ನು ಭೇದಿ ಆಮಶಂಕೆಗಳಿಗೆ ಔಷಧವಾಗಿ ಉಪಯೋಗಿಸುವರು. ಎಳಗಾಯನ್ನು ಹೆಚ್ಚಿ ಉಪ್ಪು ಕಾರದ ಪುಡಿಗಳೊಂದಿಗೆ ತಿನ್ನು ವರು, ಕಾ ಯಿಂದ ಉಪ್ಪಿನ ಕಾಯಿಯಲ್ಲದೆ ಬಗೆಬಗೆಯ ವ್ಯಂಜನಗಳನ್ನು ಮಾಡುವರು. ಕಾಯನ್ನು ಹೆಚ್ಚಿ ಒಣಗಿಸಿ ಹುಣಸೆಹಣ್ಣಿಗೆ ಬದಲಾಗಿ ಬಳಸುವುದುಂಟು. ಹಣ್ಣು ತಿನ್ನುವುದಕ್ಕೆ ಮಧುರವು ಹೆಚ್ಚಾಗಿ ತಿಂದರೆ ಆಮಶಂಕೆಯ ಕಣ್ಣು ನೋವೂ ಬರುತ್ತವೆ. ಬೀಜವು ಕ್ರಿಮಿರೋಗಕ್ಕೂ ಮೂಲವ್ಯಾಧಿಗೂ ಭೇದಿಗೂ ಆಮಶಂಕೆಗೂ ಒಳ್ಳೆಯದು. ಮರವನ್ನು ಹಲಗೆಗಳಾಗಿ ಕೊಯ್ದು ಪೆಟ್ಟಿಗೆ ಕದ ಮೊದಲಾದುವನ್ನು ಮಾಡುವರು. ಮರವನ್ನು ಕಡಿದು ಸೌದೆಯಾಗಿಯೂ ಬಳಸುವುದುಂಟು. “ 9. ಬಾಳೆಯ ಗಿಡ, ಬಾಳೆಯ ಗಿಡವು ಇಂಡಿಯಾ, ಪಸಿಫಿಕ್ ದ್ವೀಪಗಳು, ಬ್ರೆಜಿಲ್, ಗಿನಿ ಈ ದೇಶಗಳಲ್ಲಿ ಬೆಳೆಯುತ್ತದೆ. - ಈ ಗಿಡವು ಎಂಟರಿಂದ ಹದಿನೈದು ಅಡಿಗಳ ಎತ್ತರ ಬೆಳೆವುದು, ಕೆಲವು ಜಾತಿ ನಾಲ್ಕಡಿಗಿಂತ ಉದ್ದವಾಗುವುದಿಲ್ಲ. ಇದರ ತಾಳಿನ ಸುತ್ತಳತೆ ಒಂದೂವರೆ ಅಡಿ. ಮಧ್ಯದಲ್ಲಿ ಬೆಳ್ಳಗೆ ಮೃದುವಾಗಿರುವ ತಾಳಿನ ಭಾಗಕ್ಕೆ ದಿಂಡೆಂದು ಹೆಸರು, ಬಾಳೆಗಿಡಕ್ಕೆ ಕೊಂಬೆಗಳಿಲ್ಲ. ಎಲೆಗಳು ಸುಮಾರು ಆರಡಿ ಉದ್ದವೂ ಎರಡಡಿ ಅಗಲವೂ ಇರುತ್ತವೆ. ಬಹಳ ಎಳದಾಗಿರುವಾಗ ಎಲೆ