ಪುಟ:ಪ್ರಬಂಧಮಂಜರಿ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ೧೧೨ ಪ್ರಬಂಧಮಂಜರಿ-ಎರಡನೆಯ ಭಾಗ ವುದು ಸರಿಯಲ್ಲ. ಕ್ಷಾಮವು ಪದೇ ಪದೇ ಬರುತ್ತಿದೆ. ಇದು ಸಂಪೂರ್ಣವಾಗಿ ಬಾರದಂತೆ ಮಾಡಲು ತಕ್ಕ ಏರ್ಪಾಡುಗಳನ್ನು ಸರ್ಕಾರದವರು ಕೈಕೊಂಡಿಲ್ಲ.ಬಗೆಬಗೆಯ ತೆರಿಗೆಗಳನ್ನು ಹಾಕಿದುದರಿಂದ ಜನರಿಗೆ ಬಾಧೆಯಾhದೆ. ಕತ್ತಿ,ತುಬಾಕಿ ಮುಂತಾದ ಆಯುಧಗಳನ್ನು ಧಾರಾಳವಾಗಿ ಉಪಯೋಗಿಸುವುದಕ್ಕಿಲ್ಲ. ಈ ಪ್ರಭುತ್ವವು ಮೊದಲಾದಂದಿನಿಂದ ನನ್ನ ಕಾಯ ಶಕ್ತಿ ಕುಂದುತ್ತ ಬಂದಿದೆ. ಆದುದರಿಂದ ಇಂಗ್ಲಿಷರು ನಮ್ಮ ದೇಶವನ್ನು ಬಿಟ್ಟು ಹೋಗಬೇಕಾಗಿ ಬಂದಾಗ, ಶತ್ರುಗಳು ನಮ್ಮ ಮೇಲೆ ಬಂದುಬಿದ್ದರೆ, ಅವರನ್ನು ಪೂರ್ವದಂತೆ ಪ್ರತಿಭಟಿಸುವ ಸಾಮರ್ಥವಿಲ್ಲದೆ, ನಾವು ಅವರ ವಶರಾಗಿ, ಅವರು ನಮಗುಂಟುಮಾಡುವ ತೊಂದರೆಗಳಿಗೆಲ್ಲಗುರಿಯಾಗಬೇಕಾಗುವುದು. ಹೀಗೆ ಇಂಗ್ಲಿಷರು ನಮ್ಮ ದೇಶಕ್ಕೆ ಮಾಡಬೇಕಾಗಿರುವ ಕೆಲಸಗಳು ಇನ್ನೂ ಹಲವಿದ್ದರೂ, ಅವರ ಆಳಿಕೆಯಿಂದ ನಮ್ಮ ಸೀಮೆಗೆ ಬಲು ಒಳ್ಳೆಯದು ಆಗಿದೆಯೆಂಬುದರಲ್ಲಿ ಸಂಶಯವಿಲ್ಲ. 35. ಒಳ್ಳೆಯ ನಡತೆ, ಪ್ರಪಂಚದಲ್ಲಿ ಒಳ್ಳೆಯ ನಡತೆಯೆಂತಲೂ, ಕೆಟ್ಟ ನಡತೆಯೆಂತಲೂ ಪ್ರತ್ಯೇಕ ಲಕ್ಷಣಗಳುಳ್ಳ ಎರಡು ನಡತೆಗಳು ಎಲ್ಲರಿಗೂ ತಿಳಿದೇ ಇವೆ, ಒಳ್ಳೆಯನಡೆತೆ ಅಥವಾ ಸನ್ಮಾರ್ಗವೆಂದರೆ ಪರರಿಗೆ ಹಿತಕರವಾಗಿ, ನಮಗೂ ಸುಖ ಮತ್ತು ಶ್ರೇಯಸ್ಸು ಗಳುಂಟುಮಾಡುವ ಬಹಿಶ್ಚರ್ಯೆ, ಪರರಿಗೆ ಹಿಂಸಾಕರವಾಗಿಯೂ, ನಮಗೆ ಕೆಟ್ಟುದನ್ನು ಮಾಡಿ ನಮ್ಮ ನ್ನು ಜನರ ಹಗೆಗೆ ಗುರಿಮಾಡುವುದಾಗಿಯೂ ಇರುವ ಬಹಿಶ್ಚರ್ಯೆಯು ಕೆಟ್ಟ ನಡತೆ ಅಥವಾ ದುರ್ಮಾರ್ಗವೆನಿಸಿಕೊಳ್ಳುವದು. ಈ ಶಬ್ದಾರ್ಥಗಳಿಂದಲೇ ಮನುಷ್ಯನು ಕೆಟ್ಟ ನಡತೆಯನ್ನು ಬಿಟ್ಟು ಒಳ್ಳೆಯ ನಡತೆಯನ್ನು ಹೊಂದಬೇಕೆಂಬುದುಸ್ಪಷ್ಟವಾಗಿದೆ. ಪ್ರಪಂಚವ್ಯವಹಾರವನ್ನು ಪರೀಕ್ಷಿಸಿನೋಡಿದರೂ, ಇದೇ ಗೊತ್ತಾಗುವುದು, ಕೆಟ್ಟ ನಡತೆಯವನು ಲೋಕಕಂಟಕನೂ, ಸೌಖ್ಯರಹಿತನೂ, ಪಾಪಿಯೂ ಆಗಿ ತನಗೆ ಮೊದಲಿದ್ದ ಮರಾದೆಯನ್ನು ಹಾಳು ಮಾಡಿಕೊಳ್ಳುವನು. ಒಳ್ಳೆಯನಡತೆಯವನು ಹೆಚ್ಚು ಮರಾದೆಯನ್ನೂ ಸಂಪಾದಿಸಿ, ಕ್ರಮೇಣ ಅಧಿಕವಾಗಿ ಸುಖಪಟ್ಟು,