ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೧ ಹಿಂದೂದೇಶದಲ್ಲಿ ಇಂಗ್ಲೀಷರ ಆಳಿಕೆ, ದಿಂದ ಈ ದೇಶದಲ್ಲಿ ನಡೆವ ಸಕಲಕಾರ್ಯಗಳೂ ನ್ಯಾಯವನ್ನನುಸರಿಸಿವೆ. ದೇಶಕ್ಕೆ ಅಪಾಯವುಂಟಾದಾಗ, ಇಂಡಿಯಾದವೈಸರಾಯಿಗೆಮೇಲ್ಪಟ್ಟವರು ಕೊಟ್ಟಿರುವಧಿಕಾರವನ್ನು ಮೀರಿ ನಡೆವ ಶಕ್ತಿಯುಂಟು, ಈ ಶಕ್ತಿ ಹೊರತು, ವೈಸರಾಯಿಯೂ ಒಬ್ಬ ಬಡ ರೈತನೂ ಇಂಗ್ಲಿಷ್ ನ್ಯಾಯದ ಕಟ್ಟಳೆಗಳಿಗೆ ಒಂದೇ ರೀತಿಯಲ್ಲಿದ್ದರು. ನ್ಯಾಯಸ್ಥಾನಗಳು ಸರ್ಕಾರಕ್ಕೆ ಅಧೀನವಾಗದೆ ಯುಕ್ತವಾಗಿ ತೋರಿದಂತೆ ತೀರ್ಪು ಮಾಡಬಹುದು. ಜಾತಿಗಳಲ್ಲಿ ಇದು ಕೀಳು, ಇದು ಮೇಲು ಎಂಬ ಭೇದವಿಲ್ಲದೆ, ಎಲ್ಲಾ ಜಾತಿಯವರಿಗೂ ನಿಷ್ಪಕ್ಷಪಾತವಾಗಿಶಿಕ್ಷೆಯನ್ನು ನ್ಯಾಯಾಧಿಪತಿಗಳುವಿಧಿಸುತ್ತಿದ್ದಾರೆ.ಇ೦ಗ್ಲಿಷರ ಆಳಿಕೆಯಲ್ಲಿ ನಮಗೆ ಏನೇನೂ ಸ್ವಾತಂತ್ರ್ಯವಿಲ್ಲವೆಂದು ಕೆಲವರುಹೇಳಬಹುದು. ಎಷ್ಟೋ ಪ್ರಾಣಗಳನ್ನು ಬಲಿಗೊಟ್ಟು ,ಬಗೆಬಗೆಯ ಕಷ್ಟಗಳನ್ನೆಲ್ಲಾ ಅನುಭವಿಸಿ, ಇಂಗ್ಲಿಷರು ತಮ್ಮ ದೇಶದಲ್ಲಿ ಸಂಪಾದಿಸಿಕೊಂಡಿರುವ ಬೆಲೆಯಿಲ್ಲದ ಸ್ವಾತಂತ್ರ್ಯವನ್ನು ಪರಾಜಿತರಾದ ನಮಗೆ ಹೇಗೆ ತಾನೆ ಒಡನೆಕೊಟ್ಟು ಬಿಡುವುದಕ್ಕೆ ಮನಸ್ಸು ಬಂದೀತು? ಸ್ವಾತಂತ್ರ್ಯವಿಲ್ಲವೆಂದು ಪೇಚಾಡುವುದಕ್ಕೂ ಕಾರಣಗಳು ಈಚೆಗೆ ಕಡಿಮೆಯಾಗುತ್ತಾ ಬರುತ್ತಿವೆ. ಹೇಗೆಂದರೆ, ರಾಜ್ಯಭಾರದ ವಿಚಾರದಲ್ಲಿ ನಮ್ಮ ಭಿಪ್ರಾಯಗಳನ್ನೂ ವೃತ್ತಾಂತಪತ್ರಿಕೆಗಳ ಮೂಲಕ ತಿಳಿಯಪಡಿಸಲು ಅಪ್ಪಣೆ ಕೊಟ್ಟಿದ್ದಾರೆ. ಇಂಗ್ಲಿಷರ ಒತ್ತಾಸಯಿಂದಲೇ (ಇಂಡಿಯನ್ ನ್ಯಾಷನಲ್ ಕಾನ್ಗ್ರೆಸ್ ' ಎಂಬೊಂದುಮಹಾಸಭೆ ಇಪ್ಪತ್ತು ಮೂರು ವರ್ಷಗಳಿಂದ ಏರ್ಪಟ್ಟಿದೆ. ಇದು ಪ್ರತಿ ವರ್ಷವೂ ಒಂದೊಂದು ದೊಡ್ಡ ಪಟ್ಟಣದಲ್ಲಿಸೇರುತ್ತದೆ. ಇದಕ್ಕೆ ಇಂಡಿಯಾದನಾನಾ ಭಾಗಗಳಿಂದಲೂ ಸಾಮಾಜಿಕರು ಬಂದು ಸೇರಿ,ದೇಶದ ಕ್ಷೇಮಾಭಿವೃದ್ಧಿಗೆ ಮಾಡಬೇಕಾದ ಏರ್ಪಾಡುಗಳನ್ನು ಚರ್ಚಿಸಿ ಸರ್ಕಾರದವರಿಗೆ ತಿಳಿಸುತ್ತಿ ದ್ದಾರೆ. ವಿದ್ಯಾಭ್ಯಾಸವು ಹೆಚ್ಚಿತು. ಇದರೊಡನೆ ನಾಗರಿಕತೆಯ ಏಳಿಗೆಗೆ ಬಂದಿತು, ರೈಲು, ಟೆಲಿಗ್ರಾಫ್, ಪೋಸ್ಟಾಫೀಸು, ಅಚ್ಚು ಹಾಕುವದು ಮುಂತಾದುವು ಬಂದು ಜನರಿಗೆಲ್ಲ ಅಪಾರವಾದ ಉಪಕಾರಗಳಾಗಿವೆ, ಪ್ರಪಂಚದಲ್ಲಿ ದೋಷಗಳಿಲ್ಲದಿರುವ ವಸ್ತುವೇ ಇಲ್ಲವಷ್ಟೆ: ಇಂಗ್ಲಿಷರ ಆಳಿಕೆಯಲ್ಲಿಯೂ ದೋಷವಿಲ್ಲದಿಲ್ಲ. ಆ ದೋಷಗಳನ್ನೂ ಇಲ್ಲಿ ತಿಳಿಸದಿರು (*