ಪುಟ:ಭವತೀ ಕಾತ್ಯಾಯನೀ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

18

ಳಿಕ ಕಾತ್ಯಾಯನಿಯ ಮನಸ್ಸನ್ನು ನೋಯಿಸಿ ಯಾಜ್ಞ್ಯವಲ್ಕರ ಪಾಣಿಗ್ರಹಣದಿಂದ ತನ್ನ ಹಿತವನ್ನು ಸಾಧಿಸಿಕೊಳ್ಳಲಿಕ್ಕೆ ಆಕೆಯು ಹ್ಯಾಗೆ ಇಚ್ಛಿಸುವಳು ? ಕಾತ್ಯಾಯ ನಿಯ ಸುಕುಮಾರಗುಣಗಳಿಗೆ ಮೈತ್ರೇಯಿಯು ಲುಬ್ಧಳಾಗಿರುವಂತೆ , ಮೈತ್ರೇಯಿಯ ಗಂಭೀರಗುಣಗಳಿಗೆ ಕಾತ್ಯಾಯನಿಯೂ ಲುಬ್ಧಳಾಗಿದ್ದದ್ದರಿಂದ ಅವರು ಒಬ್ಬರನ್ನೊಬ್ಬರು ಕಂಡರೆ ಬಿದ್ದು ಸಾಯುತ್ತಿದ್ದರು. ತನ್ನ ಪತಿಯ ಪಾಣಿಗ್ರಹಣಕ್ಕಾಗಿ ಕುಳಿತವಳೆಂದು ಕಾತ್ಯಾಯನಿಯಾಗಲಿ , ತನ್ನ ಪಾಣಿಗ್ರಹಣಕ್ಕೆ ಅಡ್ಡಬಂದು ಕುಳಿತವಳೆಂದು ಮೈತ್ರೇ ಯಿಯಾಗಲಿ ಪರಸ್ಪರರನ್ನು ಮತ್ಸರಿಸುವಹಾಗಿದ್ದಿಲ್ಲ! ಅಯೋಗ್ಯ ಕಾರ್ಯಕ್ಕೆ ಕೈಹಾ ಕತಕ್ಕವರಲ್ಲವೆಂಬದನ್ನು ಪರಸ್ಪರರು ಅರಿತುಕೊಂಡಿದ್ದರಾದ್ದರಿಂದ ಒಬ್ಬರ ವಿಷಯವಾಗಿ ಮತ್ತೊಬ್ಬರ ಅಪನಂಬಿಗೆಯು ಹುಟ್ಟುವಹಾಗಿದ್ದಿಲ್ಲ. ಮೈತ್ರೇಯಿಯು ಕಾತ್ಯಾಯ ನಿಗೆ ಅತ್ಯಂತ ಪ್ರಿಯಳಾಗುತ್ತನಡೆದದ್ದರಿಂದ, ಕಾತ್ಯಾಯನಿಯ ಸ್ವಭಾವಕ್ಕನುಸರಿಸಿ ಆಕೆಗೆ ಮೈತ್ರೇಯಿಯ ಹಂಬಲವು ವಿಶೇಷವಾಗಿ ಹತ್ತಿತು. ಆಕೆಯು ಮೈತ್ರೇಯಿ ಯನ್ನು ಒಂದು ಕ್ಷಣವಾದರೂ ಅಗಲಿ ಇರದಾದಳು! ಮೈತ್ರೇಯಿಯ ವಿಯೋಗದ ಕಲ್ಪನೆಯು ಸಹ ಆಕೆಗೆ ದುಸ್ಸಹದುಃಖವನ್ನು ಕೊಡಹತ್ತಿತು !! ನಿರ್ಮಲಾಂತಃಕರ ಣದ ಪ್ರಭಾವವನ್ನು ನಾವು ಇದಕ್ಕೂ ಹೆಚ್ಚಿಗೆ ಏನು ವರ್ಣಿಸೋಣ ?