ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೫ ಅಧ್ಯಾ, ೬೮.] ದಶಮಸ್ಕಂಥವು. ಸಮಾಧಾನವನ್ನು ಹೇಳಿ, ಈ ಕಲಹವನ್ನಡಗಿಸಬೇಕೆಂಬ ಉದ್ದೇಶ ದಿಂದ, ಕೆಲವು ಬ್ರಾಹ್ಮಣರನ್ನೂ , ಕುಲವೃದ್ಧರನ್ನೂ, ತನ್ನೊಡನೆ ಕರೆದು ಕೊಂಡು, ಅನೇಕಗ್ರಹಗಳೊಡಗೂಡಿದ ಚಂದ್ರನಂತೆ ರಥಾರೂಢನಾಗಿ ಹಸ್ತಿನಾಪುರಕ್ಕೆ ಹೊರಟನು. ತಾನು ಆ ಹಸ್ತಿನಾಪುರದ ಹೊರಗಿನ ತೋಟದಲ್ಲಿಯೆ ಇದ್ದುಕೊಂಡು, 'ಆ ಕೌರವರ ಉದ್ದೇಶವೇನೆಂಬುದನ್ನು ತಿಳಿದು ಬರುವುದಕ್ಕಾಗಿ ಮೊದಲು ಉದ್ದವನನ್ನು ಕಳುಹಿಸಿದನು. ಉದ್ದ ವನು ಪಟ್ಟಣದೊಳಗೆ ಪ್ರವೇಶಿಸಿ, ಭೀಷ್ಮ, ದ್ರೋಣ, ಬಾಹ್ಲಿಕ ದುರೊಧನನೇ ಮೊದಲಾದ ಕೌರವಪ್ರಧಾನರನ್ನು ಕಂಡು, ಯಥಾವಿಧಿ ಯಾಗಿ ನಮಸ್ಕರಿಸಿ, ಬಲರಾಮನು ಬಂದಿರುವ ವೃತ್ತಾಂತವನ್ನು ತಿಳಿಸಿ ದನು. ಆಗ ದುಧನಾದಿಗಳೆಲ್ಲರೂ, ತಮಗೆ ಪರಮಪ್ರಿಯನಾದ ಬಲ ರಾಮನು ಬಂದ ಸಂಗತಿಯನ್ನು ಕೇಳಿ ದೊಡನೆ, ಬಹಳ ಸಂತೋಷಗೊಂಡವ ರಾಗಿ, ಈ ಸಂತೋಷವೃತ್ತಾಂತವನ್ನು ತಂದ ಉದ್ದವನನ್ನು ವಿಶೇಷವಾಗಿ ಗೌರ ಸಿ, ಬಲರಾಮನನ್ನು ಇದಿರುಗೊಂಡು ಕರೆತರುವುದಕ್ಕಾಗಿ, ತಾವೇ ಕೈ ಕಾಣಿಕೆಗಳನ್ನು ತೆಗೆದುಕೊಂಡು ಹೊರಟರು. ಹೊರಗಿನ!ತೋಟದಲ್ಲಿದ್ದ ಬಲರಾಮನನ್ನು ಕಂಡು, ಅವನಿಗೆ ಯಥೋಚಿತವಾಗಿ ಅರ್ಭ್ಯಪಾದ್ಯಾದಿಗ ಇನ್ನು ಕೊಟ್ಟುಸತಕ್ಕರಿಸಿದರು. ಉತ್ತಮವಾದ ಅನೇಕಗೋವುಗಳನ್ನು ಅವ ಸಿಗೆ `ಕೈಗೆ : ಣಿಕೆಯಾಗಿ ಒಪ್ಪಿಸಿದರು. ಒಲರಾಮನು ಭಗವದಂಶಭೂತನೆಂಬ ನಿಜಸ್ಥಿತಿಯನ್ನು ತಿಳಿದವರು, ಅವನಿಗೆ ಭಕ್ತಿಯಿಂದ ತಲೆಬಗ್ಗಿ ನಮಸ್ಕರಿಸಿ ದರು. ಒಬ್ಬರಿಗೊಬ್ಬರಿಗೆ ಕುಶಲಪ್ರಶ್ನಾ ಹಿಗಳೆಲ್ಲವೂ ನಡೆದುವು. ಆಮೇಲೆ ಬಲರಾಮನು ಆ ದಕ್ಟೋಧನಾದಿಗಳನ್ನು ಕುರಿತು, ತಮ್ಮ ಯಾದವರಾಜರ ಗೌರವಕ ಲೋಪವಿಲ್ಲ೮ಂತೆ ಹೀಗೆಂದು ಹೇಳುವನು. < ಎಲೈ . ಕುರುಪೀರರೇ : ನಮ್ಮ ಪ್ರಭುವಾದ ಉಗ್ರಸೇನನು, ನಿಮಗೆ ಕಳುಹಿಸಿರುವ ರಾಜಶಾಸನವನ್ನು ತಿಳಿಸುವೆನು. ಆ ವಿಷಯದಲ್ಲಿ ನೀವು ಜಾಗರೂಕ ರಾಗಿದ್ದು, ಅವನು ಹೇಳಿದಂತೆ ನಡೆಸುವುದು ಮೇಲು! ಈ ವಿಚಾರದಲ್ಲಿ ಮಾತ್ರ ನೀವು ವಿಳಂಬಮಾಡಬಾರದು, ಏನೆಂದರೆ ! ಈಗಲಾದರೂ ನೀವು ಬಹು ಜನಗಳು ಒಂದಾಗಿ ಸೇರಿ, ಅಧರ್ಮದಿಂದ ನಮ್ಮ ಕುಮಾರನಾದ ಮತ್ತು