ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

892. ಕರ್ಣಾಟಕ ಕವಿಚರಿತೆ. [37 ನೆಯ

ಪೂರ್ವಕವಿಗಳಲ್ಲಿ ಭಟ್ಟಾಕಳಂಕನನ್ನು (1604) ಸ್ಮರಿಸುವುದರಿಂದ ಕವಿ ಅವನಿಗಿಂತ ಈಚೆಯವನೆಂಬುದು ಸ್ಪಷ್ಟವಾಗಿದೆ. ಎಷ್ಟು ಈಚೆಯವನೋ ತಿಳಿಯದು; ಸುಮಾರು 1650 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ.
         ಪೂರ್ವಕವಿಗಳಲ್ಲಿ ಪೂಜ್ಯಪಾದ, ಗುಣಭದ್ರ, ವಿಜಯ, ಅಕಳಂಕ' ನಾಗಚಂದ್ರ, ಅಗ್ಗಳ, ಕಾಮ, ಭಟ್ಟಾಕಳಂಕ, ಶಾಂತಿವರ್ಮ ಇವರುಗಳನ್ನು ಸ್ಮರಿಸಿದ್ದಾನೆ. 
ಇವನ ಗ್ರಂಥ
                      ಗುರುದತ್ತಚರಿತೆ.
ಇದು ಸಾಂಗತ್ಯದಲ್ಲಿ ಬರೆದಿದೆ; ಪದ್ಯ 8[3, ಆರಂಭದಲ್ಲಿ ಕವಿ ಚತುರ್ವಿಂಶತಿಜಿನರನ್ನು ಸ್ತುತಿಸಿ, ಬಳಿಕ ಸಿದ್ಧಾದಿಗಳು, ಸರಸ್ವತಿ, ಸರ್ವಾ ಹಯಕ್ಷ, ಕೂಷ್ಮಾಂಡಿನಿ ಇವರುಗಳನ್ನು ಸ್ಮರಿಸಿ ಅನಂತರ

ಉತ್ತುಂಗಗುಣಗಣಾಭರಣನೆನಿಪ ಗುರು | ದತ್ತನಮಲಚರಿತೆಯನು | - ಚಿತ್ತಶುದ್ದಿಯೊಳು ಬಿತ್ತರಿಸೆನು.

ಎಂದು ಕಥೆಯನ್ನು ಆರಂಭಿಸಿದ್ದಾನೆ. ಈ ಗ್ರಂಥದಿಂದ ಕೆಲವುಪದ್ಯಗ ಳನ್ನು ತೆಗೆದು ಬರೆಯುತ್ತೇವೆ
                        ದೇಶವರ್ಣನೆ 

ಸಿರಿಯರಮನೆ ಭಾರತಿಯ ನೆಲೆವೀಡರ | ತರಸೌಖ್ಯದ ಜನ್ಮಭೂಮಿ | ಪರಮಸುಧರ್ಮದ ಪೇಟೆಯೆಂದೆನೆ ಕಣ್ಗ್ | ಕರನೊಪ್ಪಿದುದಾದೇಶ |

                         ಕಾಲಿವನ
ಶಾಲಿಯ ತನಿಗಂಪನುಣಲೆಯ್ದಿದ ಭೃಂಗ | ಜಾಲಶಿಶುಗಳಾತನೆಯ || ಮೇಲೊಪ್ಪಿದುವನಂಗನ ಪಸುರ್ಗಾವಿನ | ನೀಲದ ಮಿಂಟೆಯೆಂಬಂತೆ |
                        ಉದ್ಯಾನ
ಅಲರುಣಿಗಳ ಭೋಜನಶಾಲೆ ಗಿಳಿಯೋದು | ಗಲಿವ ಮಂಟಪ 
 ಪಿಕತತಿಯ | ಸಲೆ ಜನ್ಮಭೂಮಿಯೆಂದೆನೆ ಕಣ್ಗ್ ರಂಜನೆ | ದಳೆದೊಪ್ಪಿತಾಬಹಿರ್ವನವು || ತಂಗಾಳಿಯೊಲಿದಾಡುವಂಗಳ ನವಿಲ್ಗಳ | ಜಂಗುಳಿಗಳ ನಾಟ್ಯಶಾಲೆ | ಅಂಗಚಾತನ ವನದುರ್ಗವೆಂದೆನಲಾ | ಸಿಂಗರದೊಂಟವೊಪ್ಪಿದುದು |

1. ಮತ್ತೊಂದು ಪ್ರತಿಯಲ್ಲಿ ಹೊನ್ನ, ಪಂಪ, ನೇವಿ, ಗುಣವರ್ಮ, ಮಧುರ ಇವರ ಹೆಸರುಗಳೂ ಹೇಳಿವೆ.