ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಶತಮಾನ] ಮಂಗರಸ III. 181

ಇವನ ಬಂಧವು ಲಲಿತವಾಗಿದೆ ; ಸ್ವಭಾವೋಕ್ತಿ ಹೃದಯಂಗಮವಾ ಗಿದೆ.
ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ
                                                    ವಸಂತ
ಮೊತ್ತ ಮೊದಲ್ ಮೊಗಗೆಡಿಸಿದ ಹಿಮರುಜೆ|ಯೊತ್ತಂಬವನಳ್ಗೆ ಸುತಂ ಮೆಯ್ಯೋಳ| 

ಪತಿದ ದರ್ದುರಮಂ ಪವಡಿಸುತ್ತುದಿರ್ದೆಲೆದಲೆಗಳೊಳು || ಮತ್ತೆ ಚಿಗುರನಿರದೊದವಿಸುತೂದುವ| ಮೆತ್ತನೆಲರನಮರದೊತ್ತಿ ವನೌಷಧಿ |

ಗುತ್ತಮವೈದ್ಯಂ ಬರ್ಪಂದದಿ ಬಂದೆಸೆದುದು ನವಚೈತ್ರಂ ||
                                             ಚಂದ್ರೋದಯ
ಸ್ಮರಮೋಹನಶಸ್ತ್ರoಮಾಡಲ್ ಸುರ|ವರನೆಂಬೋವಜನುದಯರಾಗದ ಕೇ |
ಸುರಿಯಿಂ ಕಾಸಿ ಬಳಿಕ ಸಂಧ್ಯಾಸಂದಂಶದೆ ಪಿಡಿದೆತ್ತಿ || 

ಭರದಿನುದಯಗಿರಿಯೆಂಬಡೆಗಲ್ಲೊಳ|ಗಿರಿಸಿ ಪೊಳೆವ ಪೊಸಲೋಹದುರುಳಿಯಂ | ಸಿರಿದುಂ ಪೋಲ್ಟುದು ಮುಂದೆಸೆಯೊಳ್ ಮೂಡುವ ಹಿಮಕರಬಿಂಬಂ ||

                                                  ಕಾಡು 

ಎರಲೆಯ ಬೀಡೆಕ್ಕಲನ ಕೊಟಾರಂ | ಕರಡಿಯ ಹಟ್ಟಿ ಕಡವೆಯೂರ್‌ ಚಮರಿಯ |

ಹುರಮೆಂಟಡಿಯ ಹೊಟಲ್ ಕಾಟೆಯ ಕೊಟ್ಟo  ಖಚ್ಚು ಯ ಪಳ್ಳಿ ||
ಅರಸುಮಿಗದ ಪಟ್ಟಣಮಾನೆಯ ಮಟ | ಮೆರಲುಣಿಗಳ ನೆಲೆವನೆಯೆನಲತಿಬಂ |
ಧುರವಾದುದು ಭೀಮಾರಣ್ಯಮಗಣ್ಯಮೃಗಾಳಿ ಶರಣ್ಯಂ ||
                                                ಕೊಲೆ            
ಕೊಲೆಯಿಂ ಸಾವೆಡೆಯೊಳಗಾಜೀವಕೆ | ಸಲೆ ದುಃಖಂ ಜನಿಯಿಪುದಾದುಃಖದ |

ಫಲಮಾಕೊಂದವನಂ ನರಕಾವನಿಯೊಳಗುದಯಿಸಿ ಬಳಕ ||

ಪಲವಗಲಗಪ್ಪಾನ್ನವರಂ ದುಃಖದ | ಜಲನಿಧಿಯೊಳ್ ತೇಂಕಾಡಿಪುದದಯಂ |
ಕೊಲೆಯಂ ಮಣಿವುದು ಸದ್ಧರ್ಮ ಕಣಾ ಭವ್ಯ ಜನೋತ್ತಂಸಾ ||
                                           2 ಶ್ರೀಪಾಲಚರಿತೆ 
  ಇದು ಸಾಂಗತ್ಯರೂಪವಾಗಿದೆ ; ಸಂಧಿ 14, ಪದ್ಯ 1527, ಇದ ರಲ್ಲಿ
ಪುಂಡರೀಕಿಸೀಪುರದ ದೊರೆಯಾದ ಗುಣಪಾಲನ ಮಗ ಶ್ರೀಪಾಲನ
ಕಥೆ ವರ್ಣಿತವಾಗಿದೆ. ಈ ಗ್ರಂಥದ ಉತ್ಕೃಷ್ಟತೆಯನ್ನು ಕವಿ ಈ ಪದ್ಯಲ್ಲಿ ಹೇಳಿದ್ದಾನೆ.