ಈ ಪುಟವನ್ನು ಪರಿಶೀಲಿಸಲಾಗಿದೆ
182 ಕರ್ಣಾಟಕ ಕವಿಚರಿತೆ. [16 ನೆಯ
ಇದು ಭಾವಕಜನಕರ್ಣವಿಭೂಷಣ | ಮಿದು ರಸಿಕರ ಚಿತ್ರದೆಲಿಕ |
ಇದು ವಾಣೀಮುಖಮಾಣಿಕ್ಯಮುಕುರ ಮ | ತ್ರಿದು ಶೃಂಗಾರಸುಧಾಬ್ಲಿ ||
ಗ್ರಂಥಾವತಾರದಲ್ಲಿ ಕವಿ ವೀರನಾಥನನ್ನು ಸ್ತುತಿಸಿದ್ದಾನೆ. ಬಳಿಕ ಸಿದ್ಧಾದಿಗಳು, ನವಕೋಟತಪಸಿಗಳು, ಸರಸ್ವತಿ ಇವರುಗಳನ್ನು ಸ್ತುತಿ
ಸಿ ಅನಂತರ ಸುಭದ್ರ ಪೂಜ್ಯಪಾದ ಭದ್ರಬಾಹು ಬಾಹುಬಲಿ ಗೌತಮ
ಗುಣಭದ್ರ ಕವಿಪರಮೇಷ್ಠಿಗಳನ್ನು ಹೊಗಳಿದ್ದಾನೆ. ಈ ಗ್ರಂಥದಿಂದ ಕೆಲ
ವು ಪದ್ಯಗಳನ್ನು ತೆಗೆದು ಬರೆಯುತ್ತೇವೆ.__
ಗದ್ದೆ
ಕವಿಮೆಯ ಕದಿರ ಮೀಸಲ ಕಂಪನುಣಲೆಂ | ದಳಿಸಿಸುಗಳು ಕೊನೆಯೇಲಿ|
ಪೊಳೆದುವು ಪೂಗಣೆಯನ ಪಸುರ್ಗಾವಿನ | ತೊಳಪ ನೀಲದ ಮಿಂಟೆಯಂತೆ ||
ಚಂದ್ರಗ್ರಹಣ
ನವಮುಕುರವನೊಳಗಿಟ್ಟ ಕರ್ವಟ್ಟೆಯ | ಗವಸಣಿಗೆಯೊ ಎಂಬಂತೆ |
ತವಕದೊಳಿಂದುಬಿಂಬವ ರಾಹುಮಂಡಲ | ತವೆ ನುಂಗಿ ಕರಾಜಿಸಿತು ||
ಚಂದ್ರಾಸ್ತ್ರ
ಚರಿಸಿದೆನಿರುಳು ರಕ್ಕಸನಂತೆ ದೋಷಾ | ಕರನಾದೆನೀಪಾಪವನು |
ಪರಿಹರಿಸುವೆನೆಂಸ್ಟಾದ್ರಿರಿಯೇಆ ಕ | ಮ್ಮರಿವೊಲು ಬಿದ್ದ ನಿಂದು ||
ಕತ್ತಲೆ
ಪೊಡವಿವೆಣ್ಣಾದಿತ್ಯ ಮಂಡಲವೆಂದೆಂಬ | ಸೊಡರ್ಗುಡಿಯಿಂ ಕಚ್ಚಳವನು |
ಹಿಡಿವ ಹಂಚಿನ ತೆನೆಂದೆನೆ ಕಾವಳ | ವಡಸಿ ಕಪ್ಪಾದುದಾಗಸವು ||
ಸ್ತ್ರೀವರ್ಣನೆ
ಜಲಜದ ಸಿರಿ ಕುರುವಿಂದದ ಕಡುಗೆಂಪು | ತಳಿರ ಮಾರ್ದವವಲತಿಗೆಯ | ತಿಳಿರಸದೊಬ್ಬುಳಿಗೊಂಡಂದದೊಳು ಪ | ಜ್ಜ ಳಿಸಿದುವವಳ ಪಜ್ಜೆಗಳು ||
ಕುರುಳಿ೦ದ್ರನೀಲ ಕುಲಿಶ ದಂತ ಚೆಂದುಟಿ | ಕುರುವಿಂದ ಮೈ ಪುಷ್ಯರಾಗ |
ಚರಣ ವಿದ್ರುಮ ನಖ ವೈಡೂರಮೆನೆ ರನ್ನ | ಗರುವಿನಂತೆಸೆದಳಾರಮಣಿ ||
ಕೊಳ
ಅಳಿಯೂಟಕೆ ವನದೊಡತಿ ಹೇಮಾಂಬುಜ | ದಲರ್ಗಳ ಕೆಲದಟ್ಟಿ ಸಹಿತ |
ಒಲಿದಿಟ್ಟ ಬೆಳ್ಳಿಯ ಪರಿಯಾಣದಂತೆ ಪ |ಜ್ಜ ಳಿಸಿದುದಾಕಾಸಾರ ||