ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ ಮಂಗರಸ III 183 ಪೊಳೆಪ್ರದೋವ ಪೊಡೆಮಗುಚುವ ಸುಗೊಂಡು |ಸುವ ತೇಲ್ಯ..ಮಡುಗೆ ಇವ ಮೇಲಕೆ ಪುಟನೆಗೆವ ಹಲವು ಮೀಂ | ಗಳಿನೊಪ್ಪಿತಾತಿಳಿಗೊಳನು || ಯವ್ವನಮದ ತಾವೆಧರ್ಮಗಳಿಲ್ಲ ಮೊಲಗಲೆಯಲ್ಲ | ದವೆಂಬುದೊಂದಿನಿತಿಲ್ಲ || ದುದುಂಬಿತನವಲ್ಲದೆ ಜವ್ವನದೊಳ | ಗನೆಂಬುದೆಳ್ಳ ನಿತಿಲ್ಲ || ವೈರಾಗ್ಯ ಮಕ್ಕಳ ನೆರವಿ ಮಂಜಿನ ಪುಂಜವಾಹೆ | ಮ್ಮಕ್ಕಳೆಲ್ಲರು ಮಲೇರಿ ! ಮಿಕ್ಕ ನಂಟರು ಮುಗಿಲೊಡ್ಡು ವೈಭವ ಶಬ | ಕಿಕ್ಕಿದ ಸಕಲಶೃಂಗಾರ || - 3 ಪ್ರಭಂಜನ ಚರಿತೆ | ಇದೂ ಸಾಂಗತ್ಯದಲ್ಲಿ ಬರೆದಿದೆ; ನಮಗೆ ದೊರೆತ ಪ್ರತಿ ಅಸಮಗ್ರ. ಇದರಲ್ಲಿ ಶುಂಭಗೇಶದ ಭಂಭಾಪುರದ ರಾಜನಾದ ದೇವಸೇನನ ಮಗ ಪ್ರ ಭಂಜನನ ಕಥೆ ಹೇಳಿದೆ. ಗ್ರಂಥಾವತಾರದಲ್ಲಿ ಜಿನಸ್ತುತಿ ಇದೆ. ಬಳಿಕ ಕವಿ ಮಧ್ಯವಗುರು, ಉಪಾಧ್ಯಾಯರು, ಸಾಧುಗಳು, ಸರಸ್ವತಿ, ಯಕ್ಷರು, ನವಕೋಟಮುನಿಗಳು, ಸ್ವಗುರು ಚಿಕ್ಕಪ್ರಭೇಂದು ಇವರುಗಳನ್ನು ಸ್ತುತಿಸಿದ್ದಾನೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ - ಮೇರು ಅಂಬರವೆಸರ ಸುದತಿ ನರಲೋಕವೆಂ | ದೆಂಬ ಹಂಚಿನೊಳಂಜನವನು | ಇಂಬಿನೊಳಿಡಲೆಂದಿಟ್ಟ ಹೆಜ್ಜೊಡರೆಂ | ದೆಂಬಂತೆ ಮೇರುವೊಪ್ಪಿದುದು || ದೇಶವರ್ಣನೆ ಸಿರಿಯಿಕ್ಕೆದಾಣ ಸಿಂಗರಕೆ ತವರ್ಮನೆ | ಸುರಭಿಶರನ ಬೀಡುದಾಣ | ಗರುವಿಕೆಯೆಂಬ ಗಾಡಿಯ ಭಾಂಡಾಗಾರ | ದಿರವಾದುದಾಜನಪದವು || ಚಂಡಾಳಿಗಳ ಚೆಲ್ಲಾಟದೇ ಖರ | ದಂಡಜಡಾಶ್ರಯದೇ | ಬಂಡೆಂಬುದಾನಾಡ ಕಾಸಾರಮಧ್ಯದ | ಪುಂಡರೀಕದೊಳಲ್ಲದಿಲ್ಲ | ದುರ್ಜನ ಉಂಟಾಗಿ ನೀರೆದೋವಿದವರ ಕಾಲ | ಕುಂಟುಮಾಡುವ ಬೇಲದಂತೆ | ಕಂಟಕವನು ಕಾಣಿಪರು ಕೆಲಂಬರು | ನಂಟುಮಾಡುವ ಮಾನ್ಯರಿಗೆ ||