ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

184 ಕರ್ಣಾಟಕ ಕವಿಚರಿತೆ. [16 ನೆಯ ಸ್ತ್ರೀಗರ್ಹಣ ಮೊಲದ ಮಂಡೆಯಮೇಲೆ ಮೊಳೆಯಿಸುವರು ಕೊಂಬ|ನಲರನಾಗಸದೊಳಾಗಿಪರು | ಹುಲಿಯ ಮೊಲೆಯ ಹಿಡಿದಾಹಾಲ ಕವರು | ಲಲನಾಜನಕದು ಸಹಜ || 4 ಸೂವಶಾಸ್ತ್ರ ಇದು ವಾರ್ಧಕಸಟ್ಯದಿಯಲ್ಲಿ ಬರೆದಿದೆ; ಅಧ್ಯಾಯ 6 : ಪದ್ಯ 356. ಇದರಲ್ಲಿ ಪ್ರತಿಪಾದಿತವಾದ ಅಂಶಗಳು___ಸಿಸ್ಪಿಪಾಕ, ಪಾನಕ, ಕಳಮಾ ನ್ನಪಾಕ, ಶಾಕಪಾಕ ಇತ್ಯಾದಿ, ಕವಿ “ ಸಡ್ರಸವಿಪಾಕಭೇದಮನೆನ್ನ ಬಲ್ಲಂ ದದಿಂ ಪೇನು, ಸಂಸ್ಕೃತಸೂಪಶಾಸ್ತ್ರದೊಳು ಎನಗೆ ಅವನಿತ ತೆಗೆ ದು ಕನ್ನಡದಿ ಬರೆದೆನು, ನಳಭೀಮಗೌರಿಮತದೊಳಾ ಪೇನು” ಎನ್ನು ತಾನೆ. ಈ ಗ್ರಂಥರಚನೆಗೆ ಕಾರಣವನ್ನು ಹೀಗೆ ಹೇಳುತ್ತಾನೆ___ ವಸುಧಾವಲಯದ ಜೀವಿಗಳ ತನುರಕ್ಷಣೆಗೆ| ರಸರೂಪಗಂಧಶಬ್ದಸ್ಪಶ೯ಭೋಗಂಗ | ಳೆಸಕವೇ ಮುಖ್ಯ ಮಾಪಂಚವಿಧವಿಷಯಗಳ ಭೋಗೋಪಭೋಗದೊಳಗೆ || ರಸನೇಂದ್ರಿಯಂ ತುಷ್ಟಿವಡೆಯಲಿಹಪರಸೌಖ್ಯ | ಮುಸುಕುವುದು ನಿಜಮದ ನಾಭೋಜ್ಯವಸ್ತುವಂ || ಹಸನಾಗಿ ಪಾಕಮಂ ಮಾ ವಿವರದ ಶಾಸ್ತ್ರಮಂ ಮನಂಗೊಂಡು ಪೇನ್ದಂ || ಈ ಗ್ರಂಥದ ಉತ್ಕೃಸ್ವತೆಯನ್ನು ಈ ಪದ್ಯದಲ್ಲಿ ತಿಳಿಸಿದ್ದಾನೆ- ಇದು ಹರುಷದಿಂದ ಲಾಲಿಸಿ ಕೇಳ್ವೆನೆಂದೆಂಬ | ಸುದತಿಯರ ಕಿವಿಗೆ ನವಮಾಣಿಕದ ಮಿಂಚೋಲೆ | ಯಿದು ಕಲಿವೆನೆಂದೋದುವಬಲೆಯರ ಬಾಯ್ದೆ ಗೆ ನವಸುಧಾರಸದ ಪಿಂಡ || ಇದು ಪಾಕವಂ ಮಾನೆಂದುಜ್ಜುಗಂಮಾ। ಚದುರೆಯರ ಕೈಗೆ ನವರತ್ನ ಮುದ್ರಿಕೆಯೆನಿಸಿತು | ಗ್ರಂಧಾವತಾರದಲ್ಲಿ ಜಿನಸ್ತುತಿಯೂ ಸರಸ್ವತೀಸ್ತುತಿಯೂ ಇವೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ___ ಘರಿವಿಳಂಗಾಯಿ ಹುರಿದ ತೆಂಗಾಯಿ ನಸುಬೆಂದ ಬೇಳೆಯ ಹೆಸರು | ಹುರಿದು ಬೇಯಿಸಿದ ಸೊಜ್ಜಿಗೆಯಿವನು ಕೂಡಿ ಸ | ಕ್ಕರೆಯಿಕ್ಕಿ ಕರ್ಪೂರವನು ತಳಿದು ಪಿಂಡಮಂ ಮಾಡಿಯೇ ಸಣ್ಣನಾಗಿ ||