ಈ ಪುಟವನ್ನು ಪರಿಶೀಲಿಸಲಾಗಿಲ್ಲ.
413 ಕರ್ಣಾಟಕ ಕವಿಚರಿತೆ [17ನೆಯ ಇವನ ಗ್ರಂಥ
ತುಲಸೀಮಾಹಾತ್ಮ ಇದು ಭಾಮಿನೀಷಟ್ಪದಿಯಲ್ಲಿ ಬರೆದಿದೆ. ನಮಗೆ ದೊರೆತ ಅಸಮ ಗ್ರಪ್ರತಿಯಲ್ಲಿ 66 ಪದ್ಯಗಳಿವೆ ಈ ಗ್ರಂಥದಿಂದ ಒಂದು ಪದ್ಯವನ್ನುದ್ಧರಿಸಿ ಒರೆಯುತ್ತೇವೆ
ಕೇಳಿದಳು ಬಿನ್ನಹವನಾಸಿರಿ | ಲೋಲಮಾಧವರಾಣಿ ಸಭೆಯಲಿ | ಸಳುಗಂಕಣಕಡಗಹಸ್ತದಲಭಯವನು ಕೊಡುತ || ಮೇಲೆ ನಾನವತರಿಸಿ ಭಜಿಸುವ | ಲೋಲಮತಿಗಳ ಲೋಚೆನಾಗ್ರಕೆ | ಸಾಲುಗಿಡುವಾಗಿಹೆನು ಪೂಜಿಪುದೆಂದಳಾತುಳಸಿ ||
-- - - - ಯೋಗೀಂದ್ರ, ಸು, 1650
ಈತನು ಉತ್ತರರಾಮಾಯಣವನ್ನು ಬರೆದಿದ್ದಾನೆ ಇವನು ಬ್ರಾ ಹ್ಮಣಕವಿ; ಸುಮಾರು 1650 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಥ
ಉತ್ತರರಾಮಾಯಣ
ಇದು ಕುಸುಮಷಟ್ಪದಿಯಲ್ಲಿ ಬರೆದಿದೆ :;ಸಂಧಿ 43, ಇದರಿಂದ ಒಂ ದು ಪದ್ಯವನ್ನು ತೆಗೆದು ಬರೆಯುತ್ತೇವೆ.. ಉತ್ತಮವೆನಿಪ್ಪುದಿಂ | ತುತ್ತಮಶ್ಲೋಕಚಾ | ರಿತ್ರವಿದು ವಾಲ್ಮೀಕಿಮುನಿಪನಿಂದ || ವಿಸ್ತೀರ್ಣವಾಯ್ತದನೆ | ಮತ್ತೆ ಯೋಗೀಂದ್ರಾಖ್ಯ | ನುತ್ತ ಮರು ಮೆಚ್ಚೆ ಕನ್ನಡದಲೊರೆದ ||
- - - - ಸೋಮನಾಥ, ಸು, 1650
ಈತನು ರುಕ್ಮಾಂಗದಚರಿತೆಯನ್ನು ಬರೆದಿದ್ದಾನೆ. ಇವನು ಬ್ರಾಹ್ಮಕವಿ;' ಮಧ್ವ ವಂದಿಸುವೆ ; ಎಂಬುದರಿಂದ ಮಾಧ್ವನಾಗಿರ ಬಹುದು. “ಕನ್ನಡಕವಿಕುಮುದವನುಶುಭೋದಯ ಪೂರ್ಣಸೋಮ”