ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ರ ಶ್ರೀಮದಾನಂದ ರಾಮಾಯಣ, ದರು. ಶ್ರೀರಾಮನು ಸೀತಾದೇವಿಯ ಇಚ್ಛೆಯಂತ ಆಕೆಯಾಡನ ಸಿಬಿಕಯನ್ನೇರಿ ಹೊರಟಿದ್ದನು. ಸೀತಾ-ರಾಮರು ಕುಳಿತಿರುವ ಆ ವಾಹನದ ಎರಡೂ ಪಕ್ಷಗಳ ೪ ದಾಸಿಯರು ಚಾಮರಗಳನ್ನು ಬೀಸುತ್ತಿದ್ದರು. ಬಂದಿಗಳು ಜಯ ಜಯಕಾರ ಮೂಡುತ್ತಿದ್ದರು. ಈ ರೀತಿ ಅವರು ರಾಜವೈಭವದಿಂದ ನಗರವನ್ನು ದಾಟಿ, ಉಪ ವನದ ಹಾದಿಯನ್ನು ಹಿಡಿದರು, ಅನಂತರ ಸ್ವಲ್ಪಕಾಲದೊಳಗೆ ನಾನಾ ತರದ ವೃಕ್ಷಗಳಿಂದ ಕಾಡಿದ ಉಪನ ನರನ್ನು ಅವರು ಸೇರಿದರು. ಅಷ್ಟರಲ್ಲಿ ಸೀತಾ-ರಾಮರ ವನವಿಹಾರದ ಸಲುವ ಗಿ ಮಡತಕ್ಕ ಏರ್ಪಾಡುಗಳನ್ನೆಲ್ಲಾ ನಡೆಸಿದ್ದರು. ಆ ಉಪವನದಲ್ಲಿ ನಾನಾತರದ ಪಕ್ಷಿಗಳು, ವೃಕ್ಷಗಳು ಅಲ್ಲಲ್ಲಿಯ ಜಲಾಶಯಗಳು ಇವುಗಳನ್ನು ನೋಡಿ, ಸೀತಿದೇ ನಿಗೆ ಬಹಳ ಹರ್ಷವಾಯಿತು. ನಾಗಸಂಪಿಗೆ, ಕೇತಕಿ, ಬಕುಳ, ಜಾಜಿ, ಕುಂದ, ಸೇವಂತಿಕಾ, ಸುರಂಗ, ಮಲ್ಲಿಕಾ ಇವೇ ಮೊದಲಾದ ಹೂವಿನ ಗಿಡಗಳನ್ನೂ, ಬ ಳ್ಳಿಗಳನ್ನೂ, ದೂವು, ಹಲಸು, ಕಿತ್ತಳೆ, ನಿಂಬೆ, ನೇರಳೆ, ತಂಗು, ಅಡಿಕೆ ಇವೇ ಮೊದಲಾದ ಫಲವೃಕ್ಷಗಳನ್ನೂ, ನೋಡುತ್ತಾ ಅಲ್ಲಲ್ಲಿ ನಾನಾ ವಿಧವಾದ ವಿಲ್ಲ ಸಗಳಿಂದ ಸಂತೋಷಹಂದಿ, ಸೀತಾರಾದರು ಅಯೋಧ್ಯೆಗೆ ಹಿಂತಿರುಗಿ ಬಂದ ರು. ಆಗಲೂ ಪಟ್ಟಣವು ಎಲ್ಲಿ ನೋಡಿದರೂ ಮನೋರಂಜಕವಾದ ಅಲಂಕಾರ ಗಳಿಂದ ಪ್ರಕಾಶಮನವಾಗಿತ್ತು. ಅನಂತರ ಸೀತೆಯ ಗರ್ಭಕ್ಕೆ ಏಳುತಿಂಗಳುತುಂಬ ಲು, ಶ್ರೀ ರಾಮನು ಸೀಮಂತೋನ್ನಯನ ಸಂಸ್ಕಾರವನ್ನು ವಿಧಿಪೂರ್ವಕ ನೆರವೇರಿ ಸಿದನು, ಆಗ ಜನಕ ಮಹಾರಾಜನು ಬಂದಿದ್ದನು. ಪೌರಜನರೂ ಶ್ರೀ ರಾಮನ ಬಂಧುಗಳಾ ಯೋಗ್ಯ ಸತ್ಕಾರಗಳಿಂದ ಸೀತಾರಾಮರನ್ನು ಸಂತೋಷಗೊಳಿಸಿ ದರು. - ಇದೇ ಮೇರೆಗೆ ಇನ್ನೂ ಕೆಲವು ದಿವಸಗಳು ಕಳೆಯಲು, ಶ್ರೀರಾಮನು ಜನ ಕಮಹಾರಾಜನನ್ನು ಕುರಿತು- ಮಿ, ನನ್ನ ಮನಸ್ಸಿನಲ್ಲಿ ಏನೋ ಒಂದು ವಿಚಾ ರವು ಉಂಟಾಗಿದೆ, ಅದಕ್ಕೆ ಸರಿಯಾದ ಉತ್ತರವೇ ತಿಳಿಯದು. ಶಿವು ಹಿರಿಯ ರೂ ಅನುಭವಜ್ಞರೂ ಇರುವದರಿಂದ ತನ್ನಲ್ಲಿ ನಾನು ಸಂಕೋಚವಿಲ್ಲದೆ ಈ ಳುವೆನು ಸೀತಾದೇವಿಯನ್ನು ಬಿಟ್ಟು ನಾನು ಒಂದು ಕ್ಷಣವಾದರೂ ಇರಲಾರೆ ನು ಐದನೇತಿಂಗಳಿನಿಂದ ಬೇರೆ ಶಯ್ಕೆಯಲ್ಲಿ ಶಯನಗೂಡಬೇಕೆಂದು ಶಿಕ್ಷ ನಿಯಮವಿರುವದು, ಸೀತೆಯು ಇಲ್ಲೆ ಇದ್ದಳೆಂದರೆ ಒಂದುವೇಳೆ ನನಗೆ ವಿಹಾರ ಜ್ಞೆಯು ಹುಟ್ಟಬಹುದು, ಸೀತೆಯಾದರೂ ನನಗೆ ಪ್ರತಿಬಂಧನೂಡಲಾರಳು, ಶಾಸ್ತ್ರ