ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯ ಕಾಂಡ ಉತ್ತರಾರ್ಧ. SBN ರದಲ್ಲಿ ಶಂಖನೆಂಬ ಒಬ್ಬ ಬ್ರಾಹ್ಮಣನಿದ್ದನು. ಆತನು ಗುರುಗಳಿಂದ ಸಿದ್ದಿಯನ್ನು ಹೊಂದಿ, ಒಂದುದಿನ ಗೋದಾವರೀ ತೀರಕ್ಕೆ ಹೊರಟಿದ್ದನು. ಭೀಮರಥಿ ನದಿಯನ್ನು ದಾಟಿ, ಮುಳ್ಳುಗಳಿಂದ ಕೂಡಿದ ಸಿಜಿ ಸಪಾದ ವನದಲ್ಲಿ ಪ್ರಯಾಣ ಮೂಡುತ್ತಾ, ಆತನು ಒಬ್ಬ ವ್ಯಾಧನನ್ನು ಕಂಡು ಅವನ ಕೈಯಲ್ಲಿ ಧನಸ್ಸು ಇನ್ನು, ಅವನ ಆಕಾರವು ಭಯಂಕರವಾಗಿತ್ತು. ಬ್ರಾಹ್ಮಣನ ಕಿವಿಯೊಳಗೆ ಕಾಣುವ ಕುಂಡಲಗಳನ್ನು ನೋಡಿ, ಆ ವ್ಯಾಧನ ಆಶೆಯಿಂದ ಆ ಬ್ರಾಹ್ಮಣನನ್ನು ತನ್ನ ಕ್ರೂರ ಕೃತ್ಯದಿಂದ ಹೆದರಿಸಿ, ಆ ಕುಂಡಲಗಳನ್ನು ತೆಗೆದುಕೊಂಡು, ಹೆಚ್ಚು ಹೇಳುವದೇನು? ಆತನ ಛತ್ರಿ, ( ಜೋಡು) ಮಣ್ಣಿ, ವಸ್ತ್ರ ಇವುಗಳನ್ನೆಲ್ಲಾ ಸ.ಲಿವು ಕೊಂಡು, ಆ ವ್ಯಾಧು 'ನಿನಗೆ ಬೇಕಾದ ಮೊರ್ಗದಲ್ಲಿ ಹೊರಟುಹೋಗ ಎಂದು ಹೇಳಿದನು. ಆ ಬ್ರಾಹ್ಮಣನಿಗೆ ಸೂರ್ಯನ ಕಿರಣಗಳಿಂದ ಬಹಳ ತಾಪ ದಾಯಿತು, ಪಾದಗಳು ಭೂಮಿಯ ಮೇಲೆ ನಿಲ್ಲದಾದವು. ಆಗ ಬ್ರಾಹ್ಮಣನು ಹಯ, ಹಾಯ್ ಎಂದು ನಿಟ್ಟುಸಿರು ಬಿಡುತ್ತಾ ತನ್ನ ಕಾಲುಗಳ ಕೆಳಗೆ ಸಣ್ಣ ವಸ್ತ್ರವನ್ನು ಹಾಕಿಕೊಂಡು ಕುಳಿತನು. ಆ ವ್ಯಾಧನು ಬ್ರಾಹ್ಮಣನ ದೀನತನವನ್ನು ನೋಡಿ ಆತನಿಗೆ ಜೋಡುಗಳನ್ನು ಕೊಡಬೇಕೆಂದು ಯೋಚಿಸಿದನು, ಮುತ್ತು, “ಎಲೈ ಬ್ರಾಹ್ಮಣನೇ, ಈ ಕಾನೂನುಗಳೆಲ್ಲಾ ಈಗ ನನ್ನ ವಷ್ಟೆ? ಕಳವುಮಾಡಿದ ಪದಾರ್ಥಗಳು ಕಳ್ಳನಿಗೆ ಸೇರಿದವುಗಳೆಂದು ಒಂದು ನ್ಯಾಯವಿರವದು. ಈ ಕಾಲ ದಲ್ಲಿ ನಾನು ನಿನಗೆ ಈ ಮಜ್ಜೆಗಳನ್ನು ಕೊಟ್ಟರೆ, ನನಗೆ ಬಹಳ ಪುಣ್ಯ ಬರಬಹುದು ಎಂದು ಹೇಳಿ ಮಜ್ಜೆಗಳನ್ನು ಆ ಬ್ರಾಹ್ಮಣನಿಗೆ ಕೊಟ್ಟನು. ಅದರಿಂದ ಬ್ರಾಹ್ಮಣ ನಿಗೆ ಬಹಳ ಸುಖವಾಯಿತು ಮತ್ತು ಆತನು ಎಲೈ ವ್ಯಾಧನೆ, ನಿನ್ನ ಪೂರ್ವ ಪುಣ್ಯದಿಂದ ಇಂಥ ಒಳ್ಳೆ ಬುದ್ದಿಯು ಹುಟ್ಟಿರುವದು' ಎಂದನು. ಆಗ ವ್ಯಧನು ಇದು ನನ್ನ ಪೂರ್ವಸುಕೃತವು ಹ್ಯಾಗೆ?' ಎಂದು ಪ್ರಶ್ನೆ ಮೂಡಿದನು ಆಗ ಬ್ರಾಹ್ಮಣನು ಇಲ್ಲಿ ಬಹಳ ಬಿಸಿಲು ಕಾಯುತ್ತಿರುವದು, ಸ್ವಲ್ಪ ನೆರಳು ನೀರು, ಇರುವ ಸ್ಥಳಕ್ಕೆ ಹೋಗಿ, ಸ್ವಲ್ಪ ಜಲಪಾನಮಾಡಿ, ನೆರಳಿನಲ್ಲಿ ಕುಳಿತು ವಿಸ್ತಾರವಾಗಿ ಹೇಳುವೆನು ಎಂದನು ವ್ಯಾಧನ ನೆರಳು ನೀರು ಇವುಗಳಿಂದ ಪ್ರಶಸ್ತವಾದ ಸ್ಥಳವನ್ನು ಆ ಬ್ರಾಹ್ಮಣನಿಗೆ ತೋರಿಸಿದನು: ಆ ವಿಪ್ರನು ಬ್ಯಾಧ ಸರಸಿ ಅಲ್ಲಿಗೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು, ವ್ಯಾಧನನ್ನು ಕುರಿತು ಮತ ನಾಡುತ್ತಾನೆ-ಎಲೈ ವ್ಯಾಧನೇ, ನೀನು ಮೊದಲು ಶಿಳಲನಗರದಲ್ಲಿ ವಾಸವಾಗಿ ... ನೀನು ಆ ಜನ್ಮನದಲ್ಲಿ ಬ್ರಾಹ್ಮಣಜಾತಿಯಲ್ಲಿ ಹುಟ್ಟಿದ್ದೆ. ವೇದವಿದ್ಯಾನಿರಂ