3
ಒಂದು ಜಟಾಯುದೇವಕಾ ನವೂ ಇದೆ, ಈಚೆಗೆ ಹೈದರಾಬಾದಸೀ ಮೆಗೆ ಸೇರಿದ ಮಾಸ್ಕಿ ಎಂಬ ಸ್ಥಳದಲ್ಲಿಯೂ ಒಂದು ಅಶೋಕಶಾಸನವು ಕಂಡುಹಿಡಿಯಲ್ಪಟ್ಟಿದೆ.ಇತರ ಕಾಸನಗಳಲ್ಲಿ ಅಶೋಕ ಎಂಬ ಅಶೋಕನ ಬಿರುದು ಮಾತ್ರ ಹೇಳಿದೆ. ಈ ಶಾಸನದಲ್ಲಿ ಅಶೋಕ ಎಂಬ ಹೆಸರೇ ಉಕ್ತವಾಗಿದೆ. ಅಶೋಕನು ಬನವಸೆಗೆ ಒಬ್ಬ ಬೌದ್ದ ಮತೋ ಹದೇಶಕನನ್ನೂ ಮಹಿಷಮಂಡಲಕ್ಕೆ ಮತ್ತೊಬ್ಬನನ್ನೂ ಕಳುಹಿಸಿದಂತೆ ಮಹಾವಂಶರೆಂಬ ಗ್ರಂಥದಲ್ಲಿ ಬರೆದಿದೆ. ಮಹಿಷಮಂಡಲವು ಮಹಿಶೂರ ದೇಶವಲ್ಲ, ನರ್ಮದಾ ನದಿಯ ಸಮಾಪದ ಪ್ರಾಂತವು ಎಂದು ಮೆ|| ಫೀಟ್ ಬರೆದಿದ್ದರು ಮೈಸೂರು ಸೀಮೆಗೆ ಮಹಿಷರಾಷ್ಟ್ರ ಅಥವಾ ಮೈಸನಾಡು ಎಂಬ ಹೆಸರು ಶಾಸನಗಳಲ್ಲಿಯ, ಪ್ರಾಚೀನಗ್ರಂಥಗಳ ಲ್ಲಿಯೂ ದೊರೆಯುತ್ತದೆ ಮೈನ ಎಂಬುದು ಮಹಿಷ ಎಂಬ ಶಬ್ದದ ತದ್ಬ ವವು. ಮೇಲೆ ಹೇಳಿದ ವಿಷಯಗಳಿಂದ ಮೌರ್ಯರಿಗೂ ಕನ್ನಡ ನಾಡಿಗ ಇದ್ದ ಸಂಬಂಧವು ವ್ಯಕ್ತವಾಗುತ್ತದೆ.
ಶಿಕಾರಿಪುರ ತಾಲ್ಲೂಕಿಗೆ ಸೇರಿದ ಮಳವಳ್ಳಿ ಎಂಬ ಗ್ರಾಮದಲ್ಲಿ
ರುವ ಸುಮಾರು ೨ನೆಯ ಶತಮಾನ ಮಧ್ಯಭಾಗದಲ್ಲಿ ಹುಟ್ಟಿದ ಒಂದು ಪ್ರಾಕೃತ ಶಾಸನದಲ್ಲಿ ಆ ಗ್ರಾಮದ ಈಶ್ಯರದೇವರೆಗೆ ಹಾರಿತೀಪುತ್ರ ಶಾ ತಕರ್ಣಿ ಎಂಬ ಆಂಧ್ರರಾಜನು ಭೂಮಿಯನ್ನು ಬಿಟ್ಟಂತೆ ಹೇಳಿದೆ. ಆದೇ ತಾಲ್ಲೂಕಿನಲ್ಲಿರುವ ತಾಳಗುಂದವೆಂಬ ಗ್ರಾಮದ ಪ್ರಣವೇಶ್ಯರ ದೇವಸ್ಥಾನಕ್ಕೆ ಇದಿರಿಗಿರುವ ಸುಮಾರು 5 ನೆಯ ಶತಮಾನದ ಆದಿಭಾ ಗದಲ್ಲಿ ಹುಟ್ಟಿದ ಒಂದು ಶಾಸನದಲ್ಲಿ ಪ್ರಣವೇಶ್ರ್ಯರನು ಶಾತಕರ್ಣಿ ಮುಂ ತಾದವರಿಂದ ಪೂಜಿತನಾಗಿದ್ದನು ಎಂದು ಬರೆದಿದೆ. ಇದರಿಂದ ಈ ಎರಡು ಗ್ರಾಮಗಳಲ್ಲಿರುವ ಈಶ್ಯರ ದೇವಸ್ಥಾನಗಳು ಬಹಳ ಪುರಾತನ ವಾದುವು ಎಂದು ತಿಳಿಯುತ್ತದೆ. ಚಿತ್ರದುರ್ಗದಲ್ಲಿ ಆಂದ್ರ ಭೃತ್ಯರ ಪ್ರತಿ ನಿಧಿಯೊಬ್ಬನು ನಿಂತು ಆಳುತ್ತಿದ್ದಂತೆ ಅಲ್ಲಿ ದೊರೆತ ನಾಣ್ಯಗಳಿಂದ ತಿಳಿ ಯುತ್ತದೆ. ಈ ನಾಣ್ಯಗಳು ಸೀಸದವು, ಇವುಗಳೊಳಗೆ ರಾಜರ ನಾಣ್ಯ ಗಳಲ್ಲಿ ಚೈತ್ಯವೂ ಬೋಧಿವೃಕ್ಷವೂ ಅಂಕಿತವಾಗಿರುವುದಲ್ಲದೆ ಮುಡಾ ನಂದ, ಚುಟುಕಡಾನಂದ ಎಂಬ ರಾಜನಾಮಗಳೂ ದೊರೆಯುತ್ತವೆ.