ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ಅದೃಶ್ಯಕವಿ 306
ಹರಗೆಳವೆಚಯ ದೈತ್ಯರಿಗೆ ಸಿರಿಬಲವ| ಸುರರಿಗೆ ಸುಧೆಯನಿಂದ್ರಂಗೆ | ಪರಮೈಶ್ವರವನಿತ್ತು ವುದಾರಿಗೆ | ಳರಸನಂತೊಪ್ಪಿತು ಕಡಲು ||
ಉದ್ಯಾನ
ನುಡಿವರೆಗಿಳಿ ಕೂಗುವ ಸೊಕ್ಕುಕೋಗಿಲೆ | ಬಿಡದೆ ನಲಿವ ಸೋಗೆನವಿಲು | ಒಡನೊಡನುಲಿವ ಸರಸಮೃಗದಿಂದಲಿ | ಕಡುಚೆಲುವೆಸೆದುದು ಬನದ ||
ಸಂಗೀತ
ಹೆಂಗಳನಗಲಿದವಗೆ ಎರಹದಿಂದ | ಲಂಗಜಗೀಡಾದವಗೆ | ಸಂಗಡವಾಗಿ ದುಃಖವ ಮಾಣಿಸುವುದೊಂದು | ಸಂಗೀತರಸಕೆಣೆಯುಂಟೇ ||
ವೈರಾಗ್ಯ
ಜಲದೊಳಗಣ ಮೀನು ಬಾಯ ಸವಿಗೆ ಹೋಗಿ | ಬಲೆಗಾಜಿನ ಗಾಣದಲ್ಲಿ | ಸಿಲುಕಿದಂದದಿ ಹೊನ್ನು ಹೆಣ್ಣು ಮಣ್ಣಗೆ ಸಿಲುಕಿ | ಬಲುಕೇಡಕೆಡುವರು ನರರು||
ಅದೃಶ್ಯಕವಿ ಸು 1580. ಈತನು ಪ್ರೌಢರಾಯನಕಾವ್ಯವನ್ನು ಬರೆದಿದ್ದಾನೆ. ಇವನು ವೀರ ಶೈವಕವಿ, ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ—ಮಳೆಯ ಮಲ್ಲೇಶ, ಅವನ ಶಿಷ್ಯ ಬಿಜಾಪುರದಪ್ರಾಂತದಲ್ಲಿ ತೊರೆಸಾಲಪರಗಣೆಯ ಕೊಲ್ಲಾಪುರಕೆ ದೇಶಾಯಿ ನಾಡೆರೆಯ ಹಕ್ಕರಿಯಕುಲದಗ್ರಗೃಹವೆನಿಪ ಕಂ ಕರ , ಮಗ ಅಣ್ಣೇಂದ್ರ. ಮಗ ಅದೃಶ್ಯಕವಿ. ಗುಬ್ಬಿಯಮಲ್ಲಣಾರ್ಯನ ವೀರಶೈವಾಮೃತಪುರಾಣದಿಂದ(1530) ಮಳೆಯಮಲ್ಲೇಶನು ಮಲ್ಲಣಾರ್ಯನಿಗೆ ಸ್ವಲ್ಪ ಹಿಂದೆ ಇದ್ದಹಾಗೆ ತಿಳಿಯುತ್ತದೆ. ಇವನ ಕಾಲವು ಸುಮಾರು 1500 ಆಗಬಹುದು. ಇವನಿಂದ 3ನೆಯ ತಲೆಯವನಾದ ಕವಿಯ ಕಾಲವು ಸುಮಾರು 1580 ಆಗಬಹುದು. ಕವಿಗೆ ಅದ್ರೀಶಪ್ಪ ಎಂಬ ಹೆಸರೂ ಇದ್ದಂತೆ ತೋರುತ್ತದೆ. ಇವನ ಗ್ರಂಧ ಪ್ರೌಢರಾಯನಕಾವ್ಯ. ಇದು ವಾರ್ಧಕಷಟ್ಟದಿಯಲ್ಲಿ ಬರೆದಿದೆ ; ಸಂಧಿ 21, ಪದ್ಯ 1113. ವಿದ್ಯಾನಗರದಲ್ಲಿ ಆಳುತ್ತಿದ್ದ ಪ್ರೌಢರಾಯನಿಗೆ (1419-1446)ಅವನಮಂತ್ರಿಯಾದ ಜಕ್ಕಣಾಚಾರ್ಯನು ಹೇಳಿದ ಶಿವಶರಣರ ಕಥೆಯ ಸಾರವನ್ನು ತಾನು ಈಗ್ರಂಥರೂಪವಾಗಿ ಬರೆದಂತೆ ಕವಿ ಹೇಳುತ್ತಾನೆ. ಪ್ರೌಢರಾಯನ ಕಾಲದಲ್ಲಿ ನಡೆದುದಾಗಿ ಕವಿ ಹೇಳುವ ಕೆಲವು ಅಂಶಗಳನ್ನು ಕೆಳಗೆ ಬರೆಯುತ್ತೇವೆ; 39