ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

361. ಕರ್ಣಾಟಕ ಕುಚರಿತೆ. [16ನೆಯ

ಗುಮ್ಮಿಸೆಟ್ಟಿಯ ಮಗನು. ಈ ಗ್ರಂಥವನ್ನು ಶಕ 1500 ನೆಯ ಬಹುಧಾ ನ್ಯಸಂವತ್ಸರದಲ್ಲಿ-ಎಂದರೆ 1578 ರಲ್ಲಿ ಬರೆದಂತೆ ಅಂದವಡೆದ ಶಕಾಬ್ದ ಸಾವಿರ | ದಿಂದ ಮುಂದನ ಜಿನೆಯ ಸಲೆ | ಸಂದ ಬಹುಧಾನ್ಯಾಖ್ಯವತ್ಸಭಾದ್ರಪರಮಾಸ || ನಿಂದ ಶುದ್ಧ ಚತುರ್ದಶಿಯೊಳಾ | ಚಂದ್ರನಾಥನ ಕಥೆ ಸಮಾಪ್ತಿಗೆ | ಬಂದುದೆನಲಾಪುಣ್ಯದಿಂದ ನಿರಂತರವುಮಾಗೆ || ಎಂಬ ಪದ್ಯದಲ್ಲಿ ಹೇಳುತ್ತಾನೆ

   ಇವನ ಗ್ರಂಥ
               ಚಂದ್ರಪ್ರಭಪಟ್ಪದಿ 

ಇದು ಭಾಮಿನೀಷಟ್ಪದಿಯಲ್ಲಿ ಬರೆದಿದೆ. ಇದರಲ್ಲಿ 8 ನೆಯ ತೀರ್ಥಂ ಕರನಾದ ಚಂದ್ರಪ್ರಭನ ಚರಿತವು ಹೇಳಿದೆ

                 ___________
                ವರ್ವತದೇವ 1578 
   ಇವನು ನನ್ನಯ್ಯಗಳ್ ಚಾರಿತ್ರವನ್ನು ಬರೆದಿದ್ದಾನೆ. ಇತನು ವೀರಶೈವಕವಿ, ಉತ್ತರದೇಶದ ದಿವ್ಯನಗರದಲ್ಲಿರುವ ಒಂಟೆತ್ತಿನಮಠದ ಸ್ವಾಮಿಯಾದ ವಿರೂಪಾಕ್ಷನ ಶಿಷ್ಯನು ತನ್ನ ಗ್ರಂಥವನ್ನು ಶಕ 1499ನೆಯ ಈಶ್ವರಸಂವತ್ಸರದ ಫಾಲ್ಗುಣದಲ್ಲಿ, ಎಂದರೆ 1.78 ರಲ್ಲಿ, ಬರೆದಂತೆ ಹೇಳುತ್ತಾನೆ.

ಇವನ ಗ್ರಂಥ

              ನನ್ನಯ್ಯಗಳ ಚಾರಿತ್ರ 
   ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 13 ಪದ್ಯ 1550. ಇದರಲ್ಲಿ ಬಸವನ ಸಮಕಾಲದವನಾದ ನನ್ನಯ್ಯನೆಂಬ ಶಿವಭಕ್ತನ ಚರಿತವು ಹೇಳಿದೆ. ಈ ಗ್ರಂಥವು ಭಕ್ತಿಯಾಗರ, ಕೈಲಾಸಸೋಪಾನ, ಪುಣ್ಯಜ್ಞಾನದು ದಯ, ಮುಕ್ತಿಯ ಪದ ಎಂದು ಕವಿ ಹೇಳುತ್ತಾನೆ. ನಮಗೆ ದೊರೆತ ಪ್ರತಿಯಲ್ಲಿ ಮೊದಲೋಲೆ ಇರಲಿಲ್ಲ; 2 ನೆಯ ಓಲೆಯ ಆರಂಭದಲ್ಲಿ ಗಣಪತಿ ವೀರಭದ್ರ, ಪಾರ್ವತಿ, ಸರಸ್ವತಿ ಇವರುಗಳ ಸ್ತುತಿ ಇದೆ ಈ ಗ್ರಂಥ ದಿ೦ದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ---
                  ಸಮುದ್ರ 
ನೆಲೆಯ ನೋಡುವರಿಗಸಾಧ್ಯದ ಗುಣದಿಂದ | ಕುಲವ ನೋಡಲು ಕಾಣಗೊಡದೆ | ಬಲದಿಂದಲಗ್ನಿಯ ದರಿಸಿದಕಾರಣ | ಸಲೆಶಿವನನು ಪೋಲ್ವೆನೆಂದು ||