ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ದೊಡ್ಡಣಾಂಕ. 303 ನಾನು ಪತಕಹೀನ ಜೀವನು ಪಾಪಭರಿತನಲೈ || ನಾನು ಜನ್ಮವಿದೂರ ನಾನಾ | ಯೋನಿಯಲಿ ಜನಿಸುವನು ಜೀವನು | ಮಾಣು ಚಲವನು ನಿನ್ನ ಜನಕನ ಹೆಸರ ಹೇಟನ್ನು ||

               3.ಲಕ್ಷ್ಮಿಯ ಶೋಭಾನೆ.  

ಇದರಲ್ಲಿ 112 ಪದಗಳಿವೆ; ಒಂದೆರಡನ್ನು ಉದಾಹರಿಸುತ್ತೇವೆ--- ಪೊಳೆವ ಕಾಂಚೀದಾಮ ಉಲಿವ ಕಿಂಕಿಣಿಗಳು | ನಲಿವ ಕಾಲಂದಿಗೆ ಗಲುಕೆನಲು | ನಳನಳಿಸುವ ಮುದ್ದು ಮುಖದ ಚುಲುವ ಲಕ್ಷ್ಮಿ| ಸಲಹಲಿ ನಮ್ಮ ವಧೂವರರ|| ಆನೆಯ ಮಾನದಲಿ ಅಡಗಿಸಿಕೊಂಬರುಂಟೆ | ಅನೇಕಕೋಟಿಯಜಾಂಡವ | ಅಣುರೋಮಕೂಪದಲಿ ಆಳಿದ ಶ್ರೀಹರಿಯ | ಜನನೀಜರರವು ಒಳಗೊಂಬುದೇ ||

           4. ಭಾರತತಾತ್ಪರ್ಯನಿರ್ಣಯಟೀಕ 
     ಇದು ಮಧ್ವಗುರುರಚಿತವಾದ ಭಾರತತಾತ್ಪರ್ಯನಿರ್ಣಯಕ್ಕೆ ಕನ್ನಡ ವ್ಯಾಖ್ಯಾನ.
              5. ಕೀರ್ತನೆಗಳು 
     ಇವು ವಿಷ್ಣು ಸ್ತುತಿರೂಪವಾಗಿಯೂ ವೇದಾಂತಬೋಧಕವಾಗಿಯಾ ಇವೆ, ಒಂದನ್ನು ತೆಗೆದು ಬರೆಯುತ್ತೇವೆ—-
           ರಾಗ ಮೋಹನ, ಚಾಪುತಾಳ.
ಪಲ್ಲವಿ|| ಹಣವೇ ನಿನ್ನಯ ಗುಣ ಏನು ಬಣ್ಣಿಪೆನೋ || 

ಅನುಪಲ್ಲವಿ || ಹಣವಿಲ್ಲದವನೊಬ್ಬ ಹೆಣವೆ ಸರಿ ಕಂಡೆಯಾ || ಬೆಲೆಯಾಗದನೆಲ್ಲ ಬೆಲೆಯ ಮಾಡಿಸುವೆ | ಎಲ್ಲಾ ವಸ್ತುಗಳನಿದ್ದಲ್ಲೆ ತರಿಸುವೆ | ಕುಲಕೆಟ್ಟವರ ಸತ್ತುಲಕೆಸೇರಿಸುವೆ(ಹೊಲೆಯನಾದರುತಂದು ಒಳಗೆ ಕೂರಿಸುವೆ||1|| ಅಂಗನೆಯರ ಸಂಗತಿಯ ಮಾಡಿಸುವೆ | ಶೃಂಗಾರಾಭರಣಂಗಳ ಬೇಗ ತರಿಸುವೆ | ಮಂಗನಾದರು ಅನಂಗನೆಂದೆನಿಸುವೆ | ಕಂಗಳಿಲ್ಲದವನಿಗೆ ಮಗಳ ಕೊರಿಸುವ ||2|| ಚರಣಕ್ಕೆ ಬಂದಂಧ ದುರಿತಬಿಡಿಸುವೆ | ಸರ್ವರಿಗೆ ಶ್ರೇಷ್ಠ ನರನ ಮಾಡಿಸುವೆ | ಅಲ ಯದ ಶುಂರನ ಅತನೆನಿಸುವೆ | ಸಿರಿಹಯವದನನ ಸ್ಮರಣೆಮತಿಸುವ ||3||

               ____________
              ದೊಡ್ಡಣಾಂಕ 1578 
    ಈತನು ಚಂದ್ರಪ್ರಭಷಟ್ಟದಿಯನ್ನು ಬರೆದಿದ್ದಾನೆ, ಇವನು ಜೈನ ಕವಿ; ಹೊಯಿಸಳದೇಶದಲ್ಲಿಯ ನಿಟ್ಟೂರ ಆದಿಸೆಟ್ಟಿಯ ಮಗನಾದ ಬೆಟ್ಟದ