ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ 393 ತಿರುಮಲೆವೈದ್ಯ ತಿರುವಲೆವೈದ್ಯ ಸು. 1650 ಈತನು ಉತ್ತರರಾಮಾಯಣವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ; ಗವಿಯಣನ ಮಗನು, ರಾಮಾಯಣದ ಉತ್ತರಕಾಂಡವನ್ನು ಮಾತ್ರ ಕನ್ನಡಿಸಿರುವುದರಿಂದ ತೊರವೆಯರಾಮಾಯಣವನ್ನು ರಚಿಸಿದ ಕುಮಾರವಾಲ್ಮೀಕಿ (ಸು. 1500) ಕನ್ನಡಿಸದೆ ಬಿಟ್ಟ ಈ ಕಾಂಡವನ್ನು ಅವನ ಕಾಲಕ್ಕೆ ಈಚೆ ಈತನು ಬರೆದಿರಬಹುದು ಎಂದು ತೋರುತ್ತದೆ. ಇವನ ಕಾಲವು ಸುಮಾರು 165 ) ಆಗಿರಬಹುದು. ಪೂರ್ವಕವಿಗಳಲ್ಲಿ ಆದಿಕವಿ ವಾಲ್ಮೀಕಿಯನ್ನು ಸ್ತುತಿಸಿದ್ದಾನೆ. ಇವನ ಗ್ರಂಥ ಉತ್ತರ ರಾಮಾಯಣ

ಇದು ಭಾಮಿನೀಷಟ್ಪದಿಯಲ್ಲಿ ಬರೆದಿದೆ;ಸಂಧಿ 20, ಪದ್ಯ 1019. ಇದು ವಾಲ್ಮೀಕಿರಾಮಾಯಣದ ಉತ್ತರಕಾಂಡದ ಭಾಷಾಂತರವು, ಗ್ರಂಥಾವತಾರದಲ್ಲಿ ರಾಮನ ಸ್ತುತಿ ಇದೆ. ಬಳಿಕ ಕವಿ ಶಿವ, ಗಣಪತಿ, ಸರಸ್ವತಿ ಇವರುಗಳನ್ನು ಹೊಗಳಿದ್ದಾನೆ. ಈ ಗ್ರಂಧದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ

ವಸಂತ ಸುತ್ತಿ ಮಲಯಾಚಲನಿತಂಬದೊ | ಳುತ್ತಮದ ಚಂದನವನ ಱೆನು | ಗ್ಗೊತ್ತಿ ಕಪ್ಪುರವಾಱೆಗಳ ಧೂಳಿಗಳ ತನಿಗೆದಱು || ಕತ್ತುರಿಯ ಕೆಸಿಱಿಡಿದ ಜೋಳೀ | ವೃತ್ತ ಕುಚಗಳೊಳದ್ದು ಮನಸಿಜ | ಮತ್ತವಾರಣದಂತೆ ತೆಂಕಣಗಾಳಿ ತೀಡಿದುದು || ಜಾತಿಗಳು ಮಧುಪಪ್ರಸಂಗದ | ಭೀತಿಗೊಲ್ಲದೆ ಬೀತುವಂದು ಕು | ಜಾತಿಗಳು ಪಲ್ಲವಿಸಿದುವು ಮಧುಸಂಗಸೌಖ್ಯದಲಿ || ಪೂತೊಱಗಿದುವು ವಕುಳವಬಲಾ | ಜಾತವೆಂಜಲಿಸಿದ ಮದದ್ರವ | ಘಾತದಲಿ ಮನಗುಡದ ಮಾನವರಾರು ಹೆಂಗಳಿಗೆ || ಚಂದ್ರೋದಯ

ಮತ್ತೆ ಕತ್ತಲೆಯೆಂಬ ದಂತಿಯ |  ನೆತ್ತಿಯೊಡನೊಡೆದುಚ್ಚಳಿಸ ಪೆ | ರ್ಮುತ್ತೊ  ತಾಗಾಮೌಕ್ತಿಕವ್ರಜಜನ್ಮಶುಕ್ತಿಕೆಯೋ ||

50