ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

332 ಕರ್ಣಾಟಕ ಕವಿಚರಿತೆ, [16 ನೆಯ ಮತ್ತು ಸರಸ್ವತಿಯ ಅಪರಾವತಾರವೆಂದು ಸ್ತುತಿಸಿರುವುದರಿಂದ ಇವನು ಪ್ರಸಿದ್ಧ ಕವಿಯಾಗಿದ್ದಂತೆ ತೋರುತ್ತದೆ. ಇನ್ನಾವ ಗ್ರಂಧಗಳನ್ನು ಬರೆ ದಿದ್ದಾನೆಯೋ ತಿಳಿಯದು. ಈತನ ಅಮರಕೋಶಟೀಕೆಯನ್ನು ಶಾಲ್ಯದ ಕೃಷ್ಣ ರಾಜನು (1769) 1775 ರಲ್ಲಿ ಪ್ರತಿಮಾಡಿದಂತೆ ಆ ಟೀಕೆಯ ಒಂದುಪ್ರತಿಯ ಕೊನೆ ಯಲ್ಲಿರುವ - ಎಟ ಲವಿದ್ವನ್ನಿರ್ಮಿತಟೀಕಾ ಲಿಖಿತಾಮರಾಖ್ಯ ಕೋಶಸ್ಯ | - ಕೃಷ್ಣ ಕ್ಷಿತಿಪತಿನೇಯಂ ಮನ್ಮಧಸಂವತ್ಸರೇ ಶಿವಂ ನಭಸಿ || ಎಂಬ ಪದ್ಯದಿಂದ ತಿಳಿವುದರಿಂದ ಇವನು ಶಾಲ್ಯದ ಕೃಷ ರಾಜನಿಗಿಂತ ಹಿಂದೆ ಇದ್ದವನೆಂಬುದು ವ್ಯಕ್ತವಾಗುತ್ತದೆ; ಸುಮಾರು 1600ರಲ್ಲಿ ಇದಿ ರಬಹು ದೆಂದು ತೋರುತ್ತದೆ. ಪಾಯಣ್ಣವ್ರತಿ, ಸು. 1600 ಇವನು ಸಂಯಕ್ಕೌಮುದಿಯನ್ನು ಬರೆದಿದ್ದಾನೆ, ಈತನು ಜೈ ನಕವಿ; ಇವನ ಸ್ಥಳ ಪೆನಗೊಂಡೆದೇಶದಲ್ಲಿಯ ನಂದಿಯಪುರ, ತಂದೆ ಗುಣ ಮಣಮ್ಮ ಬಣಜಿಗಸಟ್ಟ, ತಾಯಿ ಕೆಂಚಮ. ಇವನು ಭವ್ಯರಿಗೆ ಧರ್ಮ ಕಥೆಯನ್ನು ಓದಿ ಹೇಳುವ ಉಪಾಧ್ಯಾಯನಾಗಿದ್ದನು. ಬಾಲ್ಯದಲ್ಲಿಯೇ ಭಾರತಿಯ ವರದಿಂದ ಕವಿಯಾಗಿ ಹೆಂಗಳ ಮೋಹದ ಜಾಲಕ್ಕೆ ನಿಲ್ಕದೆ 55 ವರ್ಷವಿದ್ದು ಆ ಮೇಲೆ ಸೇನಗಣದ ಲಕ್ಷ್ಮೀಸನಮುನಿಯಿಂದ ದೀಕ್ಷೆಯನ್ನು ಪಡೆಡಂತೆಯೂ ಪಾರ್ಶ್ವನಾಥನ ಬದಿಯಲ್ಲಿ ದೀಕ್ಷೆಯನ್ನು ಪಡೆದುದರಿಂದ ಪಾರ್ಶ್ವವರ್ಣಿ ಎಂಬ ಹೆಸರಾದಂತೆಯೂ ಹೇಳುತ್ತಾನೆ. ಇತನಿಗೆ ಪಾ ಯಣ್ಣವ್ರತಿ ಎಂಬ ಹೆಸರೂ ಉಂಟು. ಒಬ್ಬ ಪಾಯಣಮುನಿ ಸನತ್ತು ಮಾರಚರಿತೆಯನ್ನು 1606 ರಲ್ಲಿ ಬರೆದಿದ್ದಾನೆ, ಆದರೆ ಅವನು ಶ್ರೀರಂಗ 1 ಜಿಹ್ವಾ ಪಲ್ಲವಸಂಸ್ಕರೇಷು ಸುಧಿಯಾಂ ದಂತಪ್ರಭಾಚಂದನೈ | ಬಿಂಬೋಷ್ಠ ವ್ಯಜನೇನ ಚೋಪಚರಿತೋ ಯದ್ವಿಪ್ರಲಂಭಜ್ವರಃ || ಜಾನೀಮೋಮರಸಿಂಹಮೇವ ತಮಿಮಂ ? ಸಂಯಾಂಜತೀ ಸಾಂದ್ರತಂ | ವಾಣೀ ಸಂದತಿ ಎಟ್ಟ ಲಸ್ಯ ವಪುಷಾ ಭೂಯೋವತೀರ್ಣಾ ಭುವಿ ||