386 ಕರ್ಣಾಟಕ ಕವಿಚರಿತೆ, [17 ನೆಯ ತನರ I ಮತ್ತು ನೂತನರ 2 ಹೆಸರುಗಳು ಹೇಳಿವೆ, ವೀರಶೈವಪಂಚಾ ಚಾರರಲ್ಲಿ ಕೊನೆಯವನಾದ ವಿಶ್ವೇಶ್ವರಾಚಾರನ ಶಿಷ್ಯ ಪರಂಪರೆಯನ್ನೂ ಅದಕ್ಕೆ ಸಂಬಂಧಪಟ್ಟ ಕೆಲವು ವಿಶೇಷ ಸಂಗತಿಗಳನ್ನೂ ಕವಿ ಆರೀತಿ ಯಾಗಿ ಹೇಳಿದ್ದಾನೆ:- - ಈಶ್ವರನೇ ಕಳಶದಾಚಾರ ವಿಶ್ವೇಶ್ವರನಾಗಿ ಧರೆಯಂ ಪಾಲಿಸಿದನು, ಅವನ ಶಿಷ್ಯ ಸದಾಶಿವಾಚಾರ: ಇವನಿಗೆ ಪಂಚ ವಣ್ಣಿಗೆಸ್ವಾಮಿ ಎಂಬ ಹೆಸರೂ ಉಂಟು. ಇವನ ಶಿಷ್ಯ ಬಯಲಪಂಚವಣ್ಣಿಗೆಯಾರ. ಇವನ ಶಿಷ್ಯ ಸತ್ಯಶಿವಯೋಗಿ; ಈತನಿಗೆ ಫೋರತರವಿಷವ ತಂದೆಯ ಯಲದನುಂಡು ತೇಗೆ' ಸಿದ್ಧನಂಜ ಎಂಬ ಹೆಸರು ಬಂದಿತು. ಇವರ ಶಿಷ್ಯ ಸಿದ್ದಮಲ್ಲೇಶ ; ಈ ತನು ಗಜಪತಿಮಹೇಂದ್ರರಾಜನಿಗೆ ಶೈವೋಸವೇಶವನಿತ್ತು ಶಿಷ್ಯನನ್ನು ಮಾಡಿಕೊಂಡನು, ಗೋಕೇಶ್ವರದಲ್ಲಿ ನೆಲಸಿ ಸಿಂಹಾಸ ನಾಧೀಶನೆನಿಸಿದನು ಪೊಡವಿಡಿ ಯಪುರದಲ್ಲಿ ಆಳುತ್ತಿದ್ದ ಹರಿರಾಯನೆಂಬ ವೈಷ್ಣವ ನರಸತಿ ಮಹೇಂದ್ರರಾಜನ ಮಗಳನ್ನು ಮದುವೆಯಾದನು, ಮಹೇಂದ್ರರಾಜನು ಮಗಳನ್ನು ಹರಿರಾ ಯನಲ್ಲಿ ಬಿತವುದಕ್ಕೆ ಬಂTಗೆ ತನ್ನ ಗುರು ಸಿದ್ಧ ಮಲ್ಲೇಶವನ್ನು _1, 382 ನೆಯ ಪುಟದಲ್ಲಿ ಇಲ್ಲದ ಹೆಸರುಗಳು ಶ್ರೀಪತಿಪುಡಿತ, ಮಾದಿ ರಾ, ಧೂರ್ಜಟಿಕೇಶಿ, ಚೆನ್ನ ಬಸವ, ಕೇಶಿರಾಜ, ವೀರನಾಯ್ಕ, ಉಟಯ್ಯ, ಚಾಕಿದೆವ, ಮನದಮಾರಯ್ಯ, ಅಮರಗುಂಡದ ಮಲ್ಲಿಕಾರ್ಜುನ, ಶಿವನಾಗಮಯ್ಯ, ಗುಂಡಬ್ರಹ ಹೈ, ಉರಿಲಿಂಗಪೆದ್ದಯ್ಯ, ಬೆಟ್ಟದೇವರಸ, ಗೋವಿಂದಭಟಾ ರ, ಗೌಳ ಭಟ್ಟಾರಕ, ಎಜಯಾಪುರದಸೋಮಿದೇವಯ್ಯ, ವೀರಸಂಗಯ್ಯ, ಸಿಂಗಿಸೊಪ್ಪಯ್ಯ, ಮೈದುನರಾವು, ಸಾಹಿತ್ಯ ಬ್ರಹ್ಮ, ಹಂಪಿದೇವಯ್ಯ, ವ ಪುರದ ಶಂಕರಗೇವೆ, ಭಾಸ್ಕರದೇವ, ಕೊಲ್ಲಿಪಾಕಿಯ ಮರಿತಂದೆ, ನಿಲವಿಗೆಯ ಶಾಂತಮಲ್ಲಯ್ಯ, ವೈದ್ಯ ಸಂಗಯ್ಯ, ಶಿವಲೆಂಕ ಮಂಚಣ್ಣ, ಹಡಪದ ಅಪ್ಪಣ್ಣ, ಎಡೆಮರದನಾಗಯ್ಯ, ನನ್ನ ಯ್ಯ, ಅಗ್ಗಣಿಯಹಂಪಯ್ಯ, ಮಲುಹಣಯ, ನಿಜಗುಣಯ, ಉರಿಲಿಂಗದೇವಯ್ಯ, ಮುಕ್ತಾಯಕ್ಕ, ಹೇರೂರುಹೆಣ್ಣು, ಮಲುಹಣಿ, ನಿಂಬಕ್ಕ. 2, ಭಂಡಾರಿಸೋವಣ್ಣ, ವರದಾನಿರಾಮಯ್ಯ, ಸಾಸಲಭೈರನ, ರಾಮ ಣಯ್ಯ, ನಾಗರಸ, ಸೊಪ್ಪಿನ ಬಸವಣ್ಣ, ಎಕ್ಕೊಬಾಹು, ಬಿಟ್ಟಮಂಡೆಯಪ್ರಭ., ಸೋಲೂರ ಚಿಕ್ಕ ಬಸವ, ಬಯಲಪ್ರಭುದೇವ, ಎಳಮಲೆಯಸಿದ್ದ ನಂಜೇಶ, ರಾಮಗಿರಿ ಪರ್ವತಯ್ಯ, ಚಂದ್ರಗುಂಡದ ವಿರೂಪಾಕ್ಷಯ್ಯ, ಮಾಗಡಿಯ ಕರಿಯಒಸವ, ಲಕ್ಷಾ ಭಕ್ತ, ತೋಂಟದಸಿದ್ದಲಿಂಗ, ಎಮ್ಮೆ ಬಸವರಾಜ, ದೇವಲಾಪುರದ ಸಪ್ಪೆಯಯ್ಯ, ಹುಚ್ಚರಾಚಯ್ಯ, ಒಸವಪುರಾಣದ ಸಿದ್ದಮಲ್ಲೇಶ, ಮಳೆಯುವಲ್ಲೇಶ, ಬಿಜ್ಜಾವರದ ಬೋಳಬಸವೇಶ, ಶ್ರೀರಂಗಪಟ್ಟಣದ ಹೂಳಿನ ದೊಡ್ಡ ಶಂಸಯ್ಯ ಇತ್ಯಾದಿ.
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೭೧
ಗೋಚರ