ಈ ಪುಟವನ್ನು ಪರಿಶೀಲಿಸಲಾಗಿಲ್ಲ.
346 ಕರ್ಣಾಟಕ ಕವಿಚರಿತೆ [16 ನೆಯ
ಸಲಿಬಹುದು; ನೀರಿನೊಳು ಚರಿಸುವ ಹಡಗನು ಭೂಮಿಯಮೇಲೆ ಚರಿಸುವ ಅಂದವನು ಮಾಡಲಿಬಹುದು; ಅಂತರದಲಿ ಸುವ ಸೂರ್ಯನು ಭೂಮಿಯಮೇಲೆ ಚರಿಸುವ ಅಂ ದವನು ಕಾಣಲಿಬಹುದು; ಅವಧೂಮ್ರಪುಷ್ಟನನು ಅಳಿಸಿ ಕಾಣಬಹುದು; ಜೀವ ನಿಲ್ಲದ ಹೆಣವ ಮಾತನಾಡಿಸಬಹುದು; ಜಪವ ಮಾಡುವುದು ಮಹಾಕಷ್ಟವಣ್ಣಾ ಗುಹೇಶ್ವರಾ.
ಓಪದಮಾಡಿದಬಳಿಕ ಹುಸಿಯದಿರಬೇಕು; ಕಳವು ಕನ್ನವ ಒಡಬೇಕು; ಪರ ಸ್ತ್ರೀಯರ ಪ್ರತ್ಯಕ್ಷಮಾತೃಸ್ಥಾನವೆನ್ನಲಿಬೇಕು; ಕುಟಿಲಕುಹಕ ಅಟಮಟವ್ಯಾಪಾರಂ
ಗಳ ಬಿಡಬೇಕ; ಮೂಲ್ಯವ ಹೇಳು ಲಾಭಕ್ಕೆ ತಪ್ಪದಿರಬೇಕು,
---- ಗಣದಾಸಿವೀರಣ್ಣ ಸು. 1600 ಈತನು ವಚನಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ. ಇವನ ಕಾಲವು ಸುಮಾರು 1600 ಆಗಿರಬಹುದೆಂದು ಊಹಿಸುತ್ತೇವೆ, ಇವನ ವಚನಗಳಲ್ಲಿ ನಮ್ಮ ತಾಂತಕೂಡಲಸಂಗಮದೇವ ಎಂಬ ಅಂಕಿತ ವಿದೆ, ಒಂದು ವಚನದ ಭಾಗವನ್ನು ಉದಾಹರಿಸುತ್ತೇವೆ___ ತಮಂಧಕಾರತೊಡವಿಲ್ಲದ ನಿರ್ಮಲದ ಆಕಾಶದಂತೆ ಎಲೆಯಿಲ್ಲದ ವೃಕ್ಷದಂತೆ ಳೆಕ್ಕೆಯ್ಲಿಂದ ಪಕ್ಷಿಯಂತೆ ಗಾಳಿಯಿಲ್ಲದ ದೀಪದಂತೆ ನೊರೆತೆರೆಬಾದ್ಭುದಾಕಾರವಿಲ್ಲದ ಸಮುದ್ರದಂತೆ ಸಹಜಜ್ಞಾನವು ಇದೆಂದು ಎನ್ನೊ ಳಗೆ ತೋಳುದ ನಮ್ಮ ಶಾಂತ ಕೂಡಲಸಂಗಮದೇವ. --- ಚೆನ್ನಕವಿ ಸು. [600 ಈತನು ನಾನಾರ್ಥಕಂದವನ್ನು ' ಬರೆದಿದ್ದಾನೆ. ಇವನು ಬ್ರಾಹ್ಮಣ ಕವಿ; ಭಾರದ್ವಾಜಗೋತ್ರದವನು; ದ್ರಾವಿಡನು. ಈತನು ಸುಮಾರು 1600 ರಲ್ಲಿ, ಇದ್ದಿರಬಹುದೆಂದು ತೋರುತ್ತದೆ. 1. ಅಚ್ಚಾಗಿರುವ ಪುಸ್ತಕದಲ್ಲಿ “ರಾಮಚರಿತ್ರಂಗಳನೀಧಾರಿಣಿಗೆ ತೋರ್ಪ" ಎಂದಿರುವುದರಿಂದ ಈ ಕವಿ ಒಂದು ರಾಮಚರಿತೆಯನ್ನು ಬರೆದಿರುವಂತೆ ತೋರಬಹುದು. ಆದರೆ ನಾವು ನೋಡಿದ ಓಲೆಯ ಪ್ರತಿಯಲ್ಲಿ “ನಾಮಚಾರಿತ್ರ" ಎಂಬ ಪಾಠವೂ ವ್ಯಾಖ್ಯಾನದಲ್ಲ 'ನಾಮ' ಎಂಬುದಕ್ಕೆ 'ಶಬ್ದ' ಎಂಬ ಅರ್ಧವೂ ಇವೆ. ಇದೇ ಸರಿ ಎಂದು ತೋರುತ್ತದೆ,