ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

486 ಶತಮಾನ

                                                    ತಿರುಮಲಾರ್ಯ
                                                     ವಿಷ್ಣು ಸ್ತುತಿ 

ಕಡುನೇಹದ ಮೂಜಗಮಂ | ವೊಡೆಯೆಡೆಯೋಳ್ ಪೊತ್ತು ಪೊರೆವ ಪೊಸಬಗೆಯೆರಿಯಾ | ತಡೆದೆಮ್ಮನೇಕುಪೇಕ್ಷಿಸೆ | ಕುಡು ಕೂರ್ಪರ ಕೂರ್ಸ ನಿನ್ನ ಚೆನ್ನಡಿಯೊಲವಂ || ನಿಟ್ಟಿಸದಿರೆ ನೀಂ ದಯೆಯಿಂ | ಪಟ್ಟಿದು ಜಗಮೆಂತುಟೇಳ್ಗೆ ವೆತ್ಯ ಪುದದರಿಂ ! ಕಟ್ಟೆ ರಕದಿಂದಮೆಮ್ಮಂ | ದಿಟ್ಟಿಸಿ ಕಾಪಿಟ್ಟು, ಮೆರೆವುದೊಡೆತನದಧಟಂ ||

                                          ವಿಜಯನಗರದ ಚರಿತ್ರೆ 
    ಅತ್ತಲುತ್ತರದೇಶದೊಳ್ ತುಂಗಭದ್ರಾತೀರದೊಳ್ ವಿದ್ಯಾನಗರಿಯನಾಳ್ದ ಹರಿಹ ರಬುಕ್ಕರ್‌ ಮೊದಲಾದ ಕುರುಂಬರಾಯರ ಅನಂತರದೊಳರಸುಗೆಯ್ದ ತುಳವಕುಳದೀಶ್ವ ರನರಸವೀರನರಸಿಂಗಕೃಷ್ಣಾಚ್ಯುತರೆಂಬ ರಾಯರೈವರ ತರುವಾಯಿಂ ಮುದದೊಳಿಳೆಯಂ ಪೊರೆದ ಸದಾಶಿವರಾಯಂಗೆ ಸೇನಾನಿಯೆನಿಸಿದ ಆಂಧ್ರ ಕುಲದ ರಾಮರಾಜಂ ನಿಜರಾಜಂಗೆ ದ್ರವಿಡಾಂಧ್ರ    ಕರ್ಣಾಟಸಾಮ್ರಾಜ್ಯಮಂ ಸಾರ್ಚಿ ಪತಿಕಾರ್ಯದೊಳರ್ಪಿ ತಪ್ರಾಣನೆನಿಸಿ ಒರ್ಮೆಯುತ್ತರದಿಗ್ವಿಜಯದೊಳುದ್ವೃತ್ತ ಯವನಸೇನಾಚಕ್ರಮನೊಕ್ಕ ಲಿಕ್ಕಿ ಯಶಶೈಷನಪ್ಪಿನಂ, ಅವನನುಜಂ ಎರೆದಿಮ್ಮರಾಜಂ ಅಂದಿನಾಜೆಯೊಳಳಿದು ಳುದರನೊಡಗೊಂಡು ಊರ್ಗೆ ನಡೆತಂದಾಳ್ದನ ಸಿರಿಗೆಳಸಿಯವನಂಭಂಗಿಸಿ ತಾನೆ ರಾಯನೆನಿಸಿರ್ದ ಳುಗಜ್ಜ ದಂದಾವಿದ್ಯಾನಗರಂ ಕಿಳಿದುಂದಿನಕ್ಕೆ ತುರುಷ್ಕರಿಂದಳಿಯ ಲೊಡಂ ಅಲ್ಲಿಂ ಪೆನಗೊಂಡೆಗೆಯ್ತಂದು ಒಂದೆರರ್ಪಿರಿಸಿಮಿರ್ದು ಪೊಂದಿಪೋಪಗಳ್ ತನ್ನ ಮೂವರ್‌ ಕುವರರೊಳ್ ಮೊದಲಿಗನಾದ ಶ್ರೀರಂಗರಾಜನಂ ಪೆನಗೊಂಡೆಯೊಳಿಟ್ಟಾತಂಗೆ ತೆಲುಂಗನಾಡೊಡೆತನ ಮಂ ಎರಡನೆಯ ರಾಮರಾಯನಂ ಶ್ರೀರಂಗಪಟ್ಟಣ ರೊಳಿರಿಸಿಯ ವಂಗೆ ಕರ್ಣಾಟದೇಶಾಧಿಪತ್ಯಮಂ ಮೂರನೆಯ ವೆಂಕಟಪತಿರಾಯನಂ ಚಂದ್ರಗಿರಿಯೊ ಳಿಟ್ಟು ಆತಂಗೆ ತುಂಡೀರಜೋಳಪಾಂಡ್ಯ ಮಂಡಲೇಶ್ವರ್ವ ಮನಿತ್ಯಂ.
                                  3 ಅಪ್ರತಿಮವೀರಚರಿತ.
          ಇದು ಅಲಂಕಾರಗ್ರಂಥ, 4 ಪ್ರಕರಣಗಳಾಗಿ ಭಾಗಿಸ್ಪಟ್ಟಿದೆ. ಒಂದನೆಯ ಪ್ರಕರಣದಲ್ಲಿ ಕಾವ್ಯಲಕ್ಷಣ, ಶಬ್ದ ಗುಣ, ಅರ್ಧಗುಣ ಇವುಗ ಳನ್ನೂ, ಎರಡನೆಯದರಲ್ಲಿ ರೀತಿ, ಶಯ್ಯ, ಪಾಕ, ವೃತ್ತಿ, ಅನುಪ್ರಾಸವೇ ಮೊದಲಾದ ಶಬ್ದಾಲಂಕಾರ ಇವುಗಳನ್ನೂ, ಮೂರನೆಯದರಲ್ಲಿ ಉಪಮೆಯೇ ಮೊದಲಾದ ನೂರು ಅರ್ಧಾಲಂಕಾರಗಳನ್ನೂ, ನಾಲ್ಕನೆಯದರಲ್ಲಿ ರಸಾ ಲಂಕಾರಗಳನ್ನೂ ನಿರೂಪಿಸಿದ್ದಾನೆ. ಈ ಗ್ರಂಧವನ್ನು ಚಿಕ ದೇವರಾಜನ

58