ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



 130                       ಕರ್ಣಾಟಕ ಕವಿಚರಿತೆ.                           [15 ನೆಯ

ಹೆಟ್ಟಿ ದಂತಕ್ಕೆ ಸೂಸಂಗಿಗಳ ನೆಡೆವಿಡದೆ|

ಕಟ್ಟಿ ಮೊಗರಂಬಬಾಸಿಗತಿಲಕರಜೆಗಳ | 

ಲಿಟ್ಟು ಹೊರಜೆಯ ಬಲಿದು ಸುಂಟಿಚಮರಿಗಳಿಟ್ಟು ನಿಂದ ಮದಗಜಮೊಪ್ಪಿತು ||

               ಕೊಂಡೆಯರ ಪರಿಭವ. 

ಕೊ೦ಡೆಯದ ಕೋಂಟೆ ನಿಂದಕದಗರೆ ನೆಡೆಗೆದೆಗೆ |

ತೊಂಡಿನಟ್ಟಳೆ ಕುಚಿದತ್ತದ ಕೊತ್ತಳಂ ಸಟೆಯೊ |
ಳಂಡಿದಾಳ್ವೇರಿ ಕುಹಕದ ತೆನೆಗಳಟಮಟದ ಡೆಂಕಣಿಗಳಿಂದೊಪ್ಪುವ ||
ಲೆಂಡದುರ್ಮಾರ್ಗದುರ್ಗವ ಬಸವರಾಜೇಂದ್ರ |
ಕೊಂಡು ಖಳರಾಜನಂ ಕೊಲಲವನ ಹೇಡಿಸತಿ 

ಮುಂಡೆಮುಸುಕಿಕ್ಕಿ ಗೂಳೆಯನೆತ್ತಿದಂತೆ ಕೊಂಡೆಯರ ಮುಖರಸವರತುದು ||

ಕುಲದೆದೆ ಬಿರಿಯಿತು ಕುಗ್ಗಿದುವೆತ್ತಿದ | 

ತಲೆಗಳು ನಿಂದೆಯ ಮಂದಿರ ಬೆಂದುವು | ಚಲದೊಡಲೊಡೆದುವು ತರ್ಕದ ಬಾಯ್ಗಳಿಗಿಕ್ಕಿದುವಗ.ರುಗಳು ||

ಒಳಗೊಡೆದುವು ಕರ್ಮದ ಕರು ಬಲ್ಮೆಗ | 

ಳರುದುವು ಕೊಂಡೆಯರಂಡಲೆಗರ್ಭಗ | ಳಿರಿದುವು ಬಸವನ ಭಕ್ತಿಯ ಭಾವದ ಭಾಸುರತೆಯ ಕಂಡು |


                           ಈಶ್ವರಕವಿ | ಸು 1500
ಈತನು ಕವಿಜಿಹ್ವಾಬಂಧನವನ್ನು ಬರೆದಿದ್ದಾನೆ. ಇವನು ಬ್ರಾಹ್ಮ
ಣಕವಿಯೆಂದು ತೋರುತ್ತದೆ. ಇವನ ತಂದೆ ಕಚ್ಚುಟೇಶ ಇವನಿಗೆ 

ಅಭಿನವಕೇಶಿರಾಜ ಅಥವಾ ಅಭಿನವಕೇಶವ ಎಂಬ ಬಿರುದಿದ್ದಂತೆ ತಿಳಿಯು ತ್ತದೆ. ನವಜನರ ಕುರಿತು ಛಂದೋ | ರ್ಣವದೊಳ್ ಕನ್ನಡದ ಪ್ರಾಸುವಡಿಭೇದಗಳಂ |

ವಿವರವಿಡಿದಷ್ಟ ಭಾಷಾ | ಕವಿವರಬಾಣಾಖ್ಖನೊಲಿದು ಪೇರಿಂ ಮುದದಿಂ |
ಶ್ರೀಕಾರಗಳಿಲ್ಲದ ಪದ | ಲೋಕದೊಳಂ ಸಲ್ಲದೆಂದ ಕವಿಫಣಿವರ್ಮo |
 1 ನನಗೆ ಇವನ ಗ್ರಂಥವು ಪೂರ್ತಿಯಾಗಿ ದೊರೆಯಲಿಲ್ಲ ' 2ನೆಯ ಪರಿಚ್ಛೇದವು
ಮಾತ್ರ ದೊರೆಯಿತು, ಇದರಲ್ಲಿ ಹೇಳಿರುವ ವಿಷಯಗಳು ಹೊರತು ಉಳಿದ ಅಂಶಗಳ 

ನ್ನೆಲ್ಲಾ ಮೆ|| ಕಿಟ್ಟಲ್ ನಾಗವರ್ಮನ ಛಂದೋಂಬುಧಿಗೆ ಬರೆದಿರುವ ಉಪೋದ್ಘಾತದಿಂದ (ಪುಟ 61) ತೆಗೆದುಕೊಂಡಿದ್ದೇವೆ.