ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ಸೋಮನಾಧ. 113
ಎಂದು ತನ್ನನ್ನು ವಿಶೇಷಿಸಿ ಹೇಳಿ ಕೊಂಡಿದ್ದಾನೆ. ಇವನ ಕಾಲವು ಸುಮಾರು 1650 ಆಗಿರಬಹುದೆಂದು ತೋರುತ್ತದೆ. ಇವನ ಗ್ರಂಥ,
ರುಕ್ಮಾಂಗದ ಚರಿತೆ. ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 9, ಪದ್ಯ 1154. ಇದರಲ್ಲಿ ಮಾಂಧಾತುವಿಗೆ ವಸಿಷ್ಠನು ಬೋಧಿಸಿದ ಹರಿವಾಸರದ ಮಾಹಾತ್ಯ ವನ್ನು ಕವಿ ಕನ್ನಡದಲ್ಲಿ ಹೇಳಿದ್ದಾನೆ. ಕಥಾಗರ್ಭವನ್ನು ರುಕ್ಮಾಂಗದನು
ಮಾಡುವ ಹರಿದಿನವ್ರತನಿಯಮವು ತಾ | ಖೋಡಿ ಹೊದ್ದದ ಮಾಳ್ಕೆಯಲಿ || ನಾಡಿಯಲು ಪೆತ್ತ ಮಗನ ಶಿರವ ಚೆ೦ | ಡಾಡಿದ ಕಥೆಯ ಬಣ್ಣಿಸುವೆ || ಎಂಬ ಭಾಗದಲ್ಲಿ ಸೂಚಿಸಿದ್ದಾನೆ. ಗ್ರಂಥಾರಂಭದಲ್ಲಿ ತೊರವೆಯ ನರಸಿಂಹನ ಸ್ತುತಿ ಇದೆ. ಬಳಿಕ ಕವಿ ಈಶ್ವರ, ಗಣೇಶ, ಸರಸ್ವತಿ, ರಾಮ,ಬಲರಾಮ, ಕೃಷ್ಣ, ಪರಶುರಾಮ, ವ್ಯಾಸ ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆ ಯುತ್ತೇವೆ:-
ಕೊಳ
ಉಲಿವ ಕೋಗಿಲೆಗಳೊಪ್ಪುವ ಗಿಳಿವಿಂಡುಗಳ್ | ಸುಳಿದಾಡುತಿಹ ಹಂಸೆಗಳು | ಒಲಿದು ನರ್ತಿಸ ಕೇಕಿ ಚಲಿಸದೊಪ್ಪುನ ಕೋಕ | ಕೊಳನ ಸಂಭ್ರಮವೊಪ್ಪು ತಿಹುದು ||
ಸೂಳಗೇರಿ
ದಾರಿಯೆಡಹುಗಲ್ಲು ನೀರೊಳಗಣ ನಕ್ರ | ವಾರವೆಗಳ ಮುಳ್ಳಿನಂತೆ | ವಾರಾಂಗನೆಯರ ಕೇರಿಕೇರಿಗಳು ಮ | ಹಾರಭಸದೊಳೆ ಪ್ಪುತಿಹುವು ||
ಕೈಲಾಸ ಸಿರದ ಜಡೆಯ ಶೋಭೆ ತರಣಿಸಸಿಯ ತೇಜ | ದರಹಾಸರುಚಿ ದೇಹಕಾಂತಿ | ಗಿರಿಜೆಯಪಾಂಗದೀಧಿತಿ ಗಿರಿಜೇಶನ | ಗಿರಿಯ ಮುಸುಕಿದಂತಿಹುದು |