10 ದೇವಾಲಯಗಳೂ ಕೆತ್ತಿರುವ ವಿಗ್ರಹಗಳು ವಿದೇಶೀಯರಾದ ಶಿಲ್ಪಶಾಸ್ತ್ರಜ್ಞರನ್ನು ಆಶ್ಚರ್ಯರಸದಲ್ಲಿ ಮುಳುಗಿಸಿವೆ. ಈ ಶಿಲ್ಪಿಗಳಲ್ಲಿ ಹಲವರು ತಾವು ಕೆತ್ತಿದ ವಿಗ್ರಹಗಳ ಬುಡದಲ್ಲಿ ತಮ್ಮ ಹೆಸರುಗಳನ್ನು ಬರೆದುಕೊಂಡಿದ್ದಾರೆ; ಈ ಪದ್ಧತಿ ಮೈಸೂರು ದೇಶದಲ್ಲಿ ಮಾತ್ರ ಇದ್ದಂತ ತಿಳಿಯುತ್ತದೆ. ಶೃಂಗೇರಿಯಲ್ಲಿ ಸುಮಾರು 1357 ರಲ್ಲಿ ಕಟ್ಟದ ವಿದ್ಯಾಶಂಕರ ದೇವಸ್ಥಾನವೆಂಬ ಬಂದು ಕಟ್ಟಡದ ವೈಚಿತ್ರವನ್ನು ಮಾತ್ರ ಸ್ವಲ್ಪಮಟ್ಟಿಗೆ ಸೂಚಿಸುತ್ತೇನೆ, ಇದರ ಸಂವಿಧಾನದಂತಹ ಸಂವಿಧಾನವು (plan) ಭರತವರ್ಷದಲ್ಲಿ ಎಲ್ಲಿಯೂ ಇಲ್ಲ. ಈ ಕಟ್ಟಡವ ಸೌತೆಯಕಾಯ೦ತೆ ಎರಡುತುದಿಗಳಲ್ಲಿಯೂ ವರ್ತುಲವಾಗಿದೆ (apsidal at loth ends), ಇಂತಹ ಕಟ್ಟಡಕ್ಕೆ ಬಸಿಲಿಕಾ (Bisilica) ಎಂದು ಸಂಜ್ಞೆ, ಇದನ್ನು ನೋಡ ಬೇಕಾದರೆ ರೋಂ ಪಟ್ಟಣಕ್ಕೆ ಹೋಗಬೇಕು ಭರತವರ್ಷದಲ್ಲಿ ಎಲ್ಲಿಯೂ ದೃಗ್ಗೋಚರವಾಗದ ಇಂತಹ ಸಂವಿಧಾನವನ್ನು ಏರ್ಪಡಿಸಿ ಈ ಕಟ್ಟಡವನ್ನು ಕಟ್ಟಿದ ಶಿಲ್ಪಿಗಳ ಚಾತುರ್ಯವು ಸ್ತೋತ್ರಾಹ್ರವಾಗಿದೆ. ಅಲ್ಲದೆ ಈ ದೇವಸ್ಥಾನದ ನವರಂಗದಲ್ಲಿ ಮೇಷಾದಿದ್ವಾದಶರಾಶಿ ಚಿಹ್ನೆ ಗಳಿಂದ ಅಂಕಿತವಾಗಿರುವ 12 ಕ೦ಭಗಳನ್ನು ಆ ಆ ಚಿಹ್ನಕ್ಕನುಗುಣವಾಗಿ ಆ ಆ ಕಂಭದಮೇಲೆ ಆ ಆ ತಿಂಗಳಲ್ಲಿ ಸೂರ್ಯರ್ಮು ಬೀಳುವಂತೆ ನಿಲ್ಲಿಸಿರುವ ಶಿಲ್ಪಿಕೌಶಲವು ಯಾರಿಗೆ ತಾನೆ ಆಶ್ಚರ್ಯವನ್ನು೦ಮಾಡದು?
ಸ್ವಾಮೀಕ್ತರು ಸ್ವಾಮಿಯೇ ದೇವರೆಂದು ಭಾವಿಸಿ ಅವನಿಗೋಸ್ಕರ ತಮ್ಮ ಪ್ರಾಣವನ್ನು ಕೂಡ ಉತ್ಸಾಹದೊಡನೆ ಒಪ್ಪಿಸಿ ಸ್ವಾಮಿಭ ಕ್ತಿಯ ಪರಾಕಾಷ್ಠೆಯನ್ನು ತೋರಿಸಿದ ಅನೇಕಪುರುಷರೂ ಸ್ತ್ರೀಯರೂ ಈ ನಾಡನ್ನು ಅಲಂಕರಿಸಿದ್ದರು. ಈ ವಿಷಯಕ್ಕೆ ಒಂದೆರಡು ಉದಾಹರಣೆಗಳನ್ನು ಕೊಡುತ್ತೇನೆ ತನ್ನ ಸ್ವಾಮಿಯಾದ ವೀರಬಲ್ಲಾಳನು 1220 ರಲ್ಲಿ ಸಾಯಲು ಸ್ವಾಮಿಯ ಮರಣಾನಂತರ ಬದುಕಿರುವುದು ನಾಚಿಕೆಗೇಡೆಂದು ಭಾವಿಸಿ ತನ್ನ ಸತಿಯೊಡನೆಯೂ ತನ್ನ ಕೈಯಕೆಳಗಿದ್ದ ಸಾವಿರಜನ ವೀರರೊಡನೆಯೂ ಮೃತಿಯನ್ನು ಹೊಂದಿದ ಕುವರ ಲಕ್ಷ್ಮನ ಪ್ರಭಾವವು ಕೆಳಗಣ ಪದ್ಯಗಳಲ್ಲಿ ಹೇಳಿದೆ.
ಗುರುವಂ ದೈವಮುಮಾಳ್ದನೆ ( ಪರರತ್ರೆಗಂ ತನಗಿಹತ್ರೆಗಂ ಪೆವಿನೊರ್ವ೦ |