18 ರವ್ಯಾಸನೂ ಇದೇರಾಜನ ಆಳಿಕೆಯಲ್ಲಿ ಭಾರತವನ್ನು ಬರೆದಂತೆ ತೋರುತ್ತದೆ. ಮಲ್ಲಿಕಾರ್ಜುನನ (1446 1467) ಆಳಿಕೆಯಲ್ಲಿ ಕಲ್ಲರಸನು ಜನವಶ್ಯವನ್ನು ಬರೆದಿದ್ದಾನೆ. ಪಟ್ಸ್ಥಅಜ್ಞಾನಶಸಾರಾಮೃತವನ್ನು ರಚಿಸಿದ ತೋಂಟದ ಸಿದ್ಧಲಿಂಗನು ವಿರೂಪಾಕ್ಷನ (1467 1478) ಆಳಕೆಯಲ್ಲಿ ಬಾಳಿದನು ಕವಿಲಿಂಗನಪದ ಎಂಬ ಗ್ರಂಥವನ್ನು ರಚಿಸಿದ ಕವಿ ಲಿಂಗನು ಸಾಳುವನರಸಿಂಗರಾಯನ ( 1487.-1493.) ಆಸ್ಥಾನಕವಿಯಾಗಿದ್ದನು. ಕೃಷ್ಣರಾಯನ (1509--1529) ಆಜ್ಞಾನುಸಾರವಾಗಿ ತಿಮ್ಮಣ್ಣಕವಿ ಭಾರತದ ಉತ್ತರಭಾಗವನ್ನು ಬರೆದನು ಚಾಟುವಿಟ್ಠಲನಾಥ ಎಂಬ ಬಿರುದುಳ್ಳ ಸದಾನಂದಯೋಗಿ ಅಚ್ಯುತರಾಯನ (1530--1542) ಆಳಿಕೆಯಲ್ಲಿ ಭಾಗವತವನ್ನು ಬರೆದಂತೆ ತೋರುತ್ತದೆ.ಸದಾಶಿವರಾಯನ (1513-1567) ಆಳಿಕೆಯಲ್ಲಿ ಸಲಕರಾಜನ ಮಗನಾದ ತಿರುಮಲರಾಜನು ಕಾಲಜ್ಞಾನವನ್ನು ಬರೆದ ಎಮ್ಮೆ ಬಸವನಿಗೆ ಒಂದು ಗ್ರಾಮವನ್ನು ಕೊಟ್ಟಂತೆ ತಿಳಿಯುತ್ತದೆ. ಶಬ್ದಾನುಶಾಸನವನ್ನು ಬರೆದ ಭಟ್ಟಾಕಳಂಕನ ಗುರುವಾದ ಭಟ್ಟಾಕಳಂಕನು 1ನೆಯ ಶ್ರೀರಂಗರಾಯನ (1573-1584) ಆಸ್ಥಾನದಲ್ಲಿ ಆತನ ಪ್ರೇರಣೆಯಿಂದ ಸಾರತ್ರಯವನ್ನೂ ಅಲಂಕಾರತ್ರಯವನ್ನೂ ಓದಿ ಕೀರ್ತಿವರೆದಂತೆ-
ಶ್ರೀರಂಗರಾಜನೃಪತಿ | ಪ್ರೇರಣೆಯಿಂ ವಿಒಯಮುನಿಪನುಪದೇಶನದಿಂ | ಸಾರತ್ರಿತಯಮುಮನಲಂ | ಕಾರತ್ರಿತಯಮುವನೋದಿ ಜಸಮಂ ಪಡೆದಂ || ಎಂಬ ಬಿಳಗಿತಾಲ್ಲೂಕಿನಲ್ಲಿರುವ ಒಂದು ಶಾಸನದ ಪದ್ಯದಿಂದತಿಳಿಯುತ್ತದೆ.ಅದೇ ಶಾಸನದಲ್ಲಿ ಶಬ್ದಾನುಶಾಸನಕಾರನಾದ ಭಟ್ಟಾಕಳಂಕನು 1ನೆಯ ವೆಂಕಟಪತಿರಾಯನ (1586-1617) ಆಳಿಕೆಯಲ್ಲಿ ಬಾಳಿದಂತೆ ಹೇಳಿದೆ. ಮೈಸೂರರಸರು-ರಾಜನೃಪನ (1578-1617) ಪ್ರಧಾನಿಯಾದ ತಿರುಮಲಾರ್ಯನು ಕರ್ಣವೃತ್ತಾಂತ ಕಥೆಯನ್ನು ಬರೆದಿದ್ದಾನೆ. ಚಾಮರಾಜನು (1617 -1637) ರಾಮಾಯಣ, ಬ್ರಹ್ಮೋತ್ತರಖಂಡ ಇವುಗಳನ್ನು
1. Mysore Archaeological Report for 1917, Page 51,