ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 17 -ಳದ ಗೊಮ್ಮಟೇಶ್ವರ ಚರಿತೆಯನ್ನು ರಚಿಸಿದನು ಗೇರಸೊಪ್ಪೆಯ ದೊರೆ ಭೈರವರಾಯನ ಆಳಿಕೆಯಲ್ಲಿ ಆದಿಯಪ್ಪನು ಧನ್ಯಕುಮಾರಚರಿತೆಯನ್ನು ಬರೆದನು. ಅಹಿಂಸಾಚರಿತಯನು 17.8 ರಲ್ಲಿ ರಚಿಸಿದ ಪಾಯಣ್ಣನು ಸಂಗೀತಪುರದರಸ ಸಂಗಮರಾಯಪುತ್ರನ ಆಶ್ರಿತನಾಗಿದ್ದನು. ರಾಮಚಂ , ದ್ರಚರಿತ್ರದ ಪೂರ್ವ ಭಾಗವನ್ನು ಬರೆದ ಚಂದ್ರಶೇಖರನು ತುಳವದೇಶದ ಲಕ್ಷ್ಮಣಬಂಗರಾಜನ ಆಸ್ಥಾನಕವಿ. ತೌಳವದೇಶದ ಮೂಲಿಕೆಯ ರಾಜನಾದ ಚೆನ್ನ ರಾಯನಿಂದ ಫೋಷಿತನಾಗಿ ಪದ್ಮನಾಭನು ರಾಮಚಂದ್ರಚರಿತ್ರದ ಉತ್ತರಭಾಗವನ್ನು 175) ರಲ್ಲಿ ರಚಿಸಿದನು.

     ಚೌಟರು-ಚೆನ್ನಮಾಂಬೆಯ ಆಳಿಕೆಯಲ್ಲಿ ತಿರುಮಲಸಾಮಂತನ ಕೋಶಾಧ್ಯಕ್ಷನಾದ ಪದ್ಮನಾಭನು ಪದ್ಮಾವತೀ ಚರಿತೆಯನ್ನೂ, ಅಬ್ಬಕ್ಕ ದೇವಿಯ ಆಳಿಕೆಯಲ್ಲಿ ಪಟ್ಟಾಭಿರಾಮನು ರತ್ನ ಶೇಖರಚರಿತ್ರೆಯನ್ನೂ, ಚಂದ್ರಶೇಖರ ಚಿಕ್ಕರಾಯನ ರಾಣಿವಾಸದ ಚೆನ್ನಮ್ಮ ದೇವಿಯ ಆಜ್ಞಾ ನುಸಾರವಾಗಿ ಸುರಾಲನು 1761 ರಲ್ಲಿ ಪದ್ಮಾವತೀ ಚರಿತೆಯನ್ನೂ ರಚಿಸಿದರು.
      ವಿಜಯನಗರದ ಅರಸರು-ಒಂದನೆಯ ಹರಿಹರನ (1336-1353) ಆಳಿಕೆಯಲ್ಲಿ ಮುಗುಳಿಯಪುರದ ಅಧಿಪನಾದ 1ನೆಯ ಮಂಗರಸನು ಖಗೇಂದ್ರಮಣಿದರ್ಪಣವನ್ನು ಬರೆದನು ಧರ್ಮನಾಥಪುರಾಣವನ್ನು ಬರೆದ ಮಧುರನು 2ನೆಯ ಹರಿಹರನ (1377-1404) ಆಸ್ಥಾನಕವಿಯಾಗಿದ್ದನು. ಒಂದನೆಯ ಬುಕ್ಕನ ಮಗನಾದ ಕಂಸರಾಜನ ಪುತ್ರ ದೇವರಾಜನು ಸೊಬಗಿನಸೋನೆ ಅಮರುಕ ಎಂಬ ಗ್ರಂಧಗಳನ್ನು ಬರೆದಿದ್ದಾನೆ. ಎರಡನೆಯ ದೇವರಾಯನ (1419-144 ) ಮಂತ್ರಿಗಳಲ್ಲಿ ಲಕ್ಕಣ್ಣ ದಂಡೇ ಶನು ಶಿವಾತ್ವಚಿಂತಾಮಣಿಯನ್ನೂ ಜಕ್ಕಣಾರ್ಯನು ನೂರೊಂದುಸ್ಥಲವನ್ನೂ ಬರೆದರು. ಇದೇರಾಜನ ಮಹಾಪ್ರಧಾನನಾದ ಗುರುರಾಜನ ಪ್ರೇರಣೆಯಿಂದ ಚಂದ್ರಕವಿ ವಿರೂಪಾಕ್ಷಾಸ್ಥಾನ ಮೊದಲಾದ ಗ್ರಂಥಗ ಳನ್ನು ರಚಿಸಿದನು. ಇದೇ ದೊರೆಯ ಪ್ರೋತ್ಸಾಹದಿಂದ ಚಾಮರಸನು ಪ್ರಭುಲಿಂಗಲೀಲೆಯನ್ನೂ, ಮಗ್ದೆಯಮಾಯಿದೇವನು ಶತಕತ್ರಯ

ವನ್ನೂ ಗುರುಬಸವನು ಶಿವಯೋಗಾಂಗ ಭೂಷಣವೇ ಮುಂತಾದ ಸಪ್ತ ಕಾವ್ಯಗಳನ್ನೂ ಬತ್ತಲೇಶ್ವರನು ರಾಮಾಯಣವನ್ನೂ ಬರೆದರು. ಕುಮಾ