ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16

   ಸೌಂದತ್ತಿಯ ರಟ್ಟರು-ಪಾರ್ಶ್ವನಾಧಪುರಾಣವನ್ನು ಬರೆದ ಪಾರ್ಶ್ವಪಂಡಿತನು 4 ನೆಯ ಕಾರ್ತವೀ‌‌‌ರ (1202-1220) ಆಸ್ಥಾನಕವಿಯಾಗಿದ್ದನು. ಅದೇ ರಾಜನ ಕಾಲದಲ್ಲಿ ಬಾಳಚಂದ್ರಕವಿ ಕಂದರ್ಪನು ಬಾಳಿದಂತೆ ತಿಳಿಯುತ್ತದೆ. ಪುಪ್ಪದಂತಪುರಾಣವನ್ನು ಬರೆದ 2ನೆಯ ಗುಣವರ್ಮನು ಅದೇ ದೊರೆಯ ಕೈಯಕೆಳಗೆ ನಾಳ್ಪ್ರಭುವಾಗಿದ್ದ ಶಾಂತಿವರ್ಮನ ಆಶ್ರಿತನು.
    ಕರಹಾಟದ ಶಿರಾಹಾರರು-ಗಂಡರಾದಿತ್ಯನ ಮಗನಾದ ಲಕ್ಷ್ಮಣರಾಜನ ಆಜ್ಞಾನುಸಾರವಾಗಿ ಕಣ್ಣಪಾ‌‌‌ರನು ನೇಮಿನಾಧಪುರಾಣವನ್ನು ಬರೆದನು. ಅದೇ ರಾಜನ ಆಳಿಕೆಯಲ್ಲಿ ನೇಮಿಚಂದ್ರನು ಲೀಲಾವತಿಯನ್ನು ರಚಿಸಿದನು.
    ಕೊಂಗಾಳ್ವರು-ಚಂದ್ರನಾಥಾಷ್ಟಕವನ್ನು ಬರೆದ ಮೌಕ್ತಿಕಕವಿ ವೀರಕೊಂಗಾಳ್ವನ (ಸು. 1129) ಕಾಲದಲ್ಲಿ ಬಾಳಿದಂತೆ ತೋರುತ್ತದೆ.
     ಚೆಂಗಾಳ್ವರು--ಸಮ್ಯಕ್ತ್ವಕೌಮುದಿ (1508) ಮುಂತಾದ ಗ್ರಂಥಗಳನ್ನು ಬರೆದ 3 ನೆಯ ಮಂಗರಸನು ಚೆಂಗಾಳ್ವರಾಜ೮ ಕುಲಕ್ರಮಾಗತ ಮಂತ್ರಿಯಾದ ಕಲ್ಲಹಳ್ಳಿಯ ಪ್ರಭ, ವಿಜಯನ ಮಗನು. ಚೆಂಗಾಳ್ವನಂಜರಾಯನ (1502.1533) ಆಳಿಕೆಯಲ್ಲಿ ನಂಜುಂಡನು ಕುಮಾರರಾಮಕಥೆಯನ್ನು ರಚಿಸಿದನು.
      ತುಳವದೇಶದ ಅರಸರು-ತುಳವದೇಶದ ದೊರೆ ಭೈರವಸುತ ಪಾಂಡ್ಯ ರಾಯನ ಇಷ್ಟಾನುಸಾರವಾಗಿ ಕಲ್ಯಾಣಕೀರ್ತಿ ಜ್ಞಾನಚಂದ್ರಾಭ್ಯುದಯವನ್ನು 1439 ರಲ್ಲಿ ಬರೆದಂತೆ ಹೇಳುತ್ತಾನೆ. ಸುಮಾರು 1500 ರಲ್ಲಿ ಕೋಟೀಶ್ವರನು ಹೈವನೃಸಸುತ ಸಂಗೀತಪುರದ ದೊರೆ ಸಂಗಮನ ಆಜ್ಞಾನುಸಾರವಾಗಿ ಜೀವಂಧರಷಟ್ಪದಿಯನ್ನು ಬರೆದನು. ಭರತೇಶ್ವರಚರಿತೆಯನ್ನು 1557 ರಲ್ಲಿ ಬರೆದ ರತ್ನಾಕರವರ್ಣಿ ತುಳವದೇಶದ ಭೈರಸಒಡೆಯರ ಆಸ್ಥಾನದಲ್ಲಿ ಶೃಂಗಾರಕವಿ ಎಂಬ ಬಿರುದನ್ನು ಪಡೆದನು. ಭಾರತ ಮುಂತಾದ ಗ್ರಂಥಗಳನ್ನು ರಚಿಸಿದ ಸಾಳ್ವನು ತೌಳವಡೈವಕೊಂಕಣ ದೇಶಾಧಿನಾಥನಾದ ಸಾಳ್ವಮಲ್ಲನ ಆಸ್ಥಾನಕವಿಯಾಗಿದ್ದನು. ಕೆಲವನೆಸಿಂ ಹಾಸನದ ಅರಿರಾಯರಗಂಡರ ದಾವಣಿ ಭೈರವೇಂದ್ರನ ಆಜ್ಞೆಯಿಂದ ಬಾಹುಬಲಿ ನಾಗಕುಮಾರಚರಿತೆಯನ್ನು ಬರೆದನು. ಚಂದ್ರಮನು ಅರಿರಾಯರ ಗಂಡರದಾವಣಿ ಭೈರವನೃಪನ ಆಜ್ಞಾನುಸಾರವಾಗಿ 1646 ರಲ್ಲಿ ಕಾರ್ಕ