ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



      200                                                             ಕರ್ಣಾಟಕ ಕವಿಚರಿತೆ.                                        [16 ನೆಯ
                                                                       
                                                                     ಶಾಂತಿಕೀರ್ತಿಮುನಿ. 1519 
   ಈತನು ಶಾಂತಿನಾಥಚರಿತೆಯನ್ನು ಬರೆದಿದ್ದಾನೆ ಇವನು ಜೈನ ಕವಿ. ತುಳುದೇಶದೊಳಗಣ ವೇಣುಪುರದ ವೃಷಭಜಿನಾಲಯದಲ್ಲಿ ಈ ಗ್ರಂಥವನ್ನು ಶಕ1440 ಪ್ರಮಾಧಿಯಲ್ಲಿ - ಎಂದರೆ 1519ರಲ್ಲಿ, ರಚಿಸಿದಂತೆ ಹೇಳುತ್ತಾನೆ ಎಂದು ಮೆ| ರೈಸ್ ಬರೆದಿದ್ದಾರೆ.

ಇವನ ಗ್ರಂಧ

                                                                            ಶಾಂತಿನಾಧಚರಿತೆ 
  ಇದು ಸಾಂಗತ್ಯದಲ್ಲಿ ಬರೆದಿರುವಂತೆ ತೋರುತ್ತದೆ ; ಸಂಧಿ 23 ಇದರಲ್ಲಿ 16ನೆಯ ತೀರ್ಥಂಕರನಾದ ಶಾಂತಿನಾಥನ ಕಥೆ ಹೇಳಿದೆ.
                                                                                       - ---
                                                                              ಪ್ರಭುಗ ಸು 1520
  ಈತನು ಚೂಡನಾಸ್ಥಾನ, ವೈಭೋಗರಾಜಾಸ್ಥಾನ ಎಂಬ ಗ್ರಂಥಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ. ಗುಮ್ಮಳಾಪುರದಶಾಂತೇ ಶನ ದೌಹಿತ್ರನು ; ಚಿಕ್ಕಾರನ ಮಗನು.
    ವೈಭೋಗರಾಜಾಸ್ಥಾನದಲ್ಲಿ ' ಮೊಲೆಗೊಯ್ದ ಪವಿತ್ರನಾರಿಗಾಕಂತುಹರಾ ಜ್ಜೆಯಿಂ ಮೊಲೆಯನಿತ್ತ ' ವಿರಕ್ತಶಿರೋಮಣಿಶಾಂತನ ಮಕ್ಕಳು ಚೆನ್ನ ಬಸವಗಣಪಾರರನ್ನೂ, ' ಕವೀಶ್ವರಪ್ರಸರಮಾ ಎಂಬಂತೆ ಸತ್ಯೇಂದ್ರನಾಕೃತಿಯಂ ಪೇಳ್ಳು ನಿರಂತರಂ ಶಿವಕಧಾಸಂದೋಹಸೌಖ್ಯಂಗಳಂ ಕ್ಷಿತಿಯೊಳ್ ಬೋಧಿಸಿ ಎಸೆವ ' ಮಲ್ಲಣಾರನನ್ನೂ ಹೇಳಿ, ಇಂತಪ್ಪ ರಸಿಕಕವೀಶ್ವರರ್ ಪ್ರಭುಕವೀಶ್ವರನೇ ಬಾರೆಂದು ಮನ್ನಿಸಿ ಚಿಕ್ಕವ ಯಸ್ಸಿನಲ್ಲಿಯೇ ಸಂಸ್ಕೃತಕನ್ನಡಭಾಷೆಗಳಲ್ಲಿ ಪ್ರಾವೀಣ್ಯವು ನಿನಗೆ ಉಂಟಾಗಿದೆ, ಹಿಂದೆ ಗುರುರಾಯನ ಆಜ್ಞೆಯಿಂದ ಚಂದ್ರಕವಿ ವಿರೂಪಾಕ್ಷಾ ಸ್ಥಾನವನ್ನು ರಚಿಸಿದಂತೆ ನೀನ' ನಾನಾಲಂಕಾರಚಿತ್ರಭಾವರಸಗಳಿಂದ ವೈಭೋಗರಾಜಾಸ್ಥಾನವನ್ನು ರಚಿಸಬೇಕೆಂದ ಹೇಳಲು ಆ ಗ್ರಂಧವನ್ನು ರಚಿಸಿದಂತೆ ಹೇಳುತ್ತಾನೆ.
    ಇದರಿಂದ ಈತನು ಸತ್ಯೇಂದ್ರಚೋಳಕಥೆಯನ್ನು 1513ರಲ್ಲಿ ಬರೆದ ಗುಬ್ಬಿಯ ಮಲ್ಲಣಾರ್ರ್ಯನ ಸಮಕಾಲದವನೆಂದು ತೋರುತ್ತದೆ ; ಸುಮಾರು 1520ರಲ್ಲಿ ಇದ್ದಿರಬಹುದು.
      ತನ್ನ ಕವಿತಾಚಾತುರಿಯನ್ನು ಈ ಪದ್ಯದಲ್ಲಿ ಹೇಳಿದ್ದಾನೆ-