ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ವಿರುಪಂಜ. 19
ಶಿವಭಕ್ತರೊಳಗೆ ಒಬ್ಬನಾದ ಚೇರಮಾಂಕನೃಪನ ಕಥೆ ಹೇಳಿದೆ. ಇದನ್ನು ಕವಿ ತನ್ನ ಹೆಂಡತಿಗೆ ಹೇಳಿದಂತೆ ತಿಳಿಯುತ್ತದೆ. ಈ ಗ್ರಂಥದವಿಷಯವಾಗಿ ಕವಿ ಹೀಗೆ ಹೇಳುತ್ತಾನೆ-
ಈಕಬ್ಬ ರಸಿಕಜನಗಳ ಕಿವಿಯ ಹಬ್ಬ, ಈಕಥೆಯಿಹಪರಸರ್ವಸೌಖ್ಯದ ಲತೆ.
ಚತುರಚಕೋರ ಜೀವಿಸೆ ಸೂರಿನೀಲಾಬ್ಬ | ವಿತತಿಗಿಂಬಾಗೆ ರಾಗೋತ್ಕರ |
ಕ್ಷಿತಿನಾಧ ಹೊನ್ನೊರವಿರುಪೆರಾಜೇಂದ್ರನ | ಕೃತಿಚಂದ್ರ ಬೆಳಗುಗೆ ಭುವನವ |
ನೆಗಟ್ಟುದು ವಿರುಪಾಕ್ಷ್ಮಾಪನಿಂ ಸತ್ಕಲಾಕೋವಿದರಾಹೋ ಎಂದೆನಲ್ಕೀತ್ರಿಭುವನ ತಿಲಕಂ ನವ್ಯಮಾಚಂದ್ರಸೇವ್ಯಂ.
ಗ್ರಂಧಾವತಾರದಲ್ಲಿ ಮಲ್ಲಿಕಾರ್ಜುನಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ನಂದಿಪಣ್ಮುಖರು, ಬಸವಮಡಿವಾಳ ಚೆನ್ನಬಸವರು, ಗಣೇಶ, ಸರಸ್ವತಿ ಇವರುಗಳನ್ನು ಹೊಗಳಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-
ಮಲ್ಲಿಗೆ
ಪರಿಭವವಡೆದಂತಸುಗೆಮಾಂದಳರ್ಗಳು | ಮರನೇ ಬಾಳ್ವವಂಬುವ ಪೊಕ್ಕು |
ಸರಸಿಜಕುಮುದ ಜೀವಿಪುವೆಂದು ನಗುವವೊ } ಲರಲ್ದ ಮಲ್ಲಿಗೆಗಳೊಪ್ಪಿದುವಲ್ಲಿ ||
ಬೇಡಸ್ತ್ರೀಯರು
ಕಡೆಗಣ್ಣ ಕಾಂತಿಗೋರಗೆಯಾದ ಪಲ್ಗದಿ | ರಡಿಗೆಂಪ ಮಾರುದಧರಕಾಂತಿ |
ಮುಡಿಗಪ್ಪ ಕೀಳ್ಮಾಡುವ ಮೈಯ ಪೊಗರಿಂದ ನಡೆದುದು ಬಿಯದವೆಣ್ಗಳ ತಂಡ |
ಸಮುದ್ರ
ತೆರೆಗಳ ಸೀಗುರಿಯಿಂದೆ ತುಪಾರಚಾ | ಮರದಿಂದೆ ಜಲಜಾತಪತ್ರದೆ |
ಸುರುಚಿರಮಣಿವಿಷ್ಕರದಿಂದೆ ಸಿಂಧು ಭೂ | ವರನಂತೆ ಕಣ್ಗೆ ರಾಜಿಸುವುದು |
ದೇಹಾನಿತ್ಯತೆ
ನೀರ ಬೊಬ್ಬುಳಿಕೆಯ ಕಾರ್ಬೊನ್ನೊಳೆ ಕಟ್ಟಿ | ಯಾರೈಕೆಗೈದ ಮರುಳರಂತ |
ಶಾರೀರಸೌಖ್ಯವ ನಿಜವೆಂದು ತಿಳಿವುದು | ಪರಮಾರ್ಧವೇನು ಬಲ್ಲವರಿಗೆ ||