ಈ ಪುಟವನ್ನು ಪರಿಶೀಲಿಸಲಾಗಿದೆ
185 ಕರ್ಣಾಟಕ ಕವಿಚರಿತೆ, [16 ನೆಯ
ಕವಿ ಹೇಳುತ್ತಾನೆ. ಗ್ರಂಥಾವತಾರದಲ್ಲಿ ನೇಮಿನಾಥಸ್ತುತಿ ಇದೆ. ಬಳಿಕ ಕವಿ ಸಿದ್ದರು, ಸೂರಿಗಳು, ಉಪದೇಶಕರು, ಸಾಧುಗಳು, ಸರಸ್ವತಿ, ಸರ್ರ್ವಾಹ್ಣಯಕ್ಷ ,ಯಕ್ಷೇಶ್ವರಿ, ಗಣಧರರು ಇವರುಗಳನ್ನು ಸ್ತುತಿಸಿ ಆಮೇಲೆ ಗೃಧ್ರಪಿಂಛಾಚಾರ್ರ್ಯನಿಂದ ವಿಮಲಕೀರ್ತಿಯವರೆಗೆ ಗುರುಗಳ ನ್ನು ಹೊಗಳಿದ್ದಾನೆ. ಅನಂತರ ಪೂರ್ರ್ವಕರ್ವಿಗಳನ್ನು ಸ್ಮರಿಸಿ ತನ್ನ ವಂಶಾ ವಳಿಯನ್ನು ಹೇಳಿ ಗ್ರಂಥವನ್ನು ಆರಂಭಿಸಿದ್ದಾನೆ. ಈ ಗ್ರಂಥದಿಂದ ಕೆಲ ವು ಪದ್ಯಗಳನ್ನು ತೆಗೆದು ಬರೆಯುತ್ತೇವೆ- ದೇಶ
ಶ್ರುತಿಶೂನ್ಯವೆಂಬುದಕ್ರಮವೆಂಬುದು ವಕ್ರ | ಗತಿಯೆಂಬುದು ಭಾವಿಸಲು | ನುತಮಾಗಿಯಾದೇಶದಹಿಯೊಳಲ್ಲದೆ ಜನ | ತತಿಯೊಳಗೊಂದಿನಿಸಿಲ್ಲ | ತ್ರಿವಿಕ್ರಮಾವತಾರ ಉಡಿಯಮೇಲಿಟ್ಟ ಮೇಖಲೆಯ ಕಿಂಕಿಣಿಗಳ | ಪಡಿಯಾಗಿ ಮಿಗೆ ರಂಜಿಸಿದುವು | ಉಡುನಿಕುರುಂಬವಂಬರತಲವ ಮಟ್ಟಿ | ಕಡುಬೆಳೆದಾತ್ರಿವಿಕ್ರಮನ | | ಕಡಲ ಮಧ್ಯದ ಭೂಮಿಯನೆಲ್ಲವನೊ೦ | ದಡಿಮಾಡಿಯಾಗಸವೆಂಬ | ಕೊಡೆಗೆ ಮತ್ತೊಂದುಕಾಲನು ಕಾವುಮಾಡುತ | ನಡುಗಿಸಿದನು ಭೂತಳವ || ಗಗನಮೆಂಬ ಗೂಡಾರಕಿಕ್ಕಿದ ಕಂಭ | ಮುಗಿಲೆಂಬ ಭೂಮಂಡಲವ | ನೆಗಪಿದ ಪಂಚಫಣಾಶೇಷನವೊಲು | ಸೊಗಯಿಸಿತಾವಿಷ್ಣುಪಾದ |
6 ಸಂಯಕ್ತ್ವ ಕೌಮುದಿ
ಇದು ಉದ್ದಂಡಪಟ್ಟದಿಯಲ್ಲಿ ಬರೆದಿದೆ ; ಸಂಧಿ 12, ಪದ್ಯ 792' ಉದಿತೋದಯನೆಂಬ ರಾಜನು ಅರ್ಹದ್ದಾಸನೆಂಬ ವೈಶ್ಯವಿಭುವಿನ ಸ್ತ್ರೀಯ ರು ಹೇಳಿದ ಕಥೆಯನ್ನು ಕೇಳಿ ಸಂಯಕ ವನ್ನು ಧರಿಸಿ ದೀಕ್ಷೆಯನ್ನು ವಹಿಸಿ ಸ್ವರ್ಗಲೋಕವನ್ನು ಪಡೆದನು-ಎಂಬುದೇ ಕಥಾಗರ್ಭ. ಈ
I ತತ್ವಾರ್ಥಕೆ ವೃತ್ತಿಯನುದ್ಧ ರಿಸುತ ಮಹಿಮವಡೆದೆ ಗೃಧ್ರಪಿಂಛಾಚಾರ್ರ್ಯ.
ಚವ್ವೀಸತೀರ್ಥೇಕ್ವರಕಥನವನೊರೆದ ಕವಿಪರಮೇಷ್ಠಿ, ಗುಣಭದ್ರ, ಕಲಿಯುಗಗಣ ಧರರಾದ ಮಾಘಣಂದಿ, ಛಂದೋಲಂಕಾರಶಬ್ದಶಾಸ್ತ್ರಗಳೆಲ್ಲ ಮೂರ್ತಿವಡೆದು ನಿಂದಂತಿ ರುವ ದೇವನಂದಿ, ಬೌದ್ದರನು ಗೆಲಿದ ಅಕಲಂಕ, ಸ್ವಗುರುಪ್ರಭೇಂದು, ತಚಿ ಶ್ರುತ ಮುನಿ, ಇವನ ಸಹೋದರ ವಿಮಲಕೀರ್ತಿ 2. 179ನೆಯ ಪುಟವನ್ನು ನೋಡಿ. *