ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ಮಂಗರಸ 187
ಕಥಾನಾಯಕನು ಕಾರ್ತಿಕಮಾಸದಲ್ಲಿ ಮಾಡುವ ಕೌಮುದಿಯ ಉತ್ಸವ
ದಿಂದ ಸಂಯಕ್ತ್ವವನ್ನು ಪಡೆದನಾದುದರಿಂದ ಗ್ರಂಥಕ್ಕೆ ಈ ಹೆಸರು ಬಂ
ದಿದೆ. “ಅತಿಕಠಿನವಾಕಮಲ್ಲದೆ ಸುಗಮಮಂದೆನಿಪ ಪಟ್ಟದದೊಳು ಸಕ್ಕದ
ಗನ್ನಡವ ಬೆರಸಿ ಮೃದುವಾಕಮಪ್ಪಂದದಿಂ ವಿರಚಿಸಿದೆಂ ” ಎಂದು ಕವಿ
ಹೇಳುತ್ತಾನೆ. ಗ್ರಂಥದ ಉತ್ಕೃಷ್ಟತೆಯನ್ನು ಹೀಗೆ ಹೇಳಿಕೊಂಡಿದ್ದಾನೆ:-
ತರುಣಿಯರ ಬಿಂಬಾಧರಂ ಇಂದುರುಚಿ ಪೂವಿನತೊಡಂಬೆ ಪೀಯೂಷಪಿಂಡಂ, ಜೇ
ನ ಸೋನೆ ಪೊಸಸುಗ್ಗಿ ಕೆಂಬರಲ ತೊಡವು ಚಂದಣದಣ್ಣು ಕೋಗಿಲೆಯ ನುಣ್ಣರಂ ಪ್ರಭು
ರಾಜಮಂಗರಸನೊರೆದ ಕೌಮುದಿಯ ಮಾತು.
ಗ್ರಂಥಾವತಾರದಲ್ಲಿ ವೀರಜಿನಸ್ತುತಿ ಇದೆ. ಬಳಿಕ ಕವಿ ಚತುರ್ವಿಂ
ಕತಿತೀರ್ಧಕರರು,ಸಿದ್ದಾದಿಗಳು, ಸರಸ್ವತಿ ಇವರುಗಳನ್ನು ಸ್ಮರಿಸಿ ಅನಂ
ತರ ಗೌತಮನಿಂದ ಪ್ರಭೇಂದುವಿನವರೆಗೆ ಗುರುಗಳನ್ನು ಸ್ತುತಿಸಿದ್ದಾನೆ.
ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ:-
ಶರತ್ಕಾಲ
ಅಲ್ಲಲ್ಲಿ ಗಿಣ್ಣಿಕ್ಕುವಲ್ಲಲ್ಲಿ ಕುಳುಹನಿಡು |
ವಲಲ್ಲಿ ಕದಿರುಗಡೆವಲ್ಲಲ್ಲಿ ಪೂದುಂಬು |
ವಲಲ್ಲಿ ಪಾಲ್ದೀವುಲ್ವಲ್ಲಲ್ಲಿ ಕಾಯಾಗುವಲ್ಲಲ್ಲಿ ಪಣ್ಣಾಗುವ ||
ಅಲ್ಲಲ್ಲಿಯಕ್ಕಿ ಮುಕುವಲ್ಲಲ್ಲಿ ಕೆಂಪಾಗು |
ವಲ್ಲಲ್ಲಿ ಕುಯ್ಯಲಾಗುವ ಪಲವು ಪೆಸರ್ವಡದ |
ನೆಲ್ಲ ಗದ್ದೆಗಳತಿಮುದಂಬಡಿಸಿದುವು ತಮ್ಮನೋವಿದ ಕುಟುಂಬಿಗಳ್ಗೆ ||
ನಳನಳಿಸಿ ಬೆಳೆದ ನವಗಂಧಶಾಲಿಯ ವನಕೆ |
ತಳಿಗಳಂ ಹೆಣೆವ ಕಪ್ಪಂ ತೋಡುವೆಸಕದ |
ಟ್ಟಳೆಯನಿಕ್ಕುವ ಬೆಚ್ಚು ಗಳನಿರದೆ ನೆಡುವ ಗುಡಿಲಂ ಹೊದಿಸಿ ಹಸಮಾಡುವ ||
ಕಳನ ಕೆತ್ತುವ ಮೇಟೆಯಂ ನೆಡುವ ಕುಡುಗೋಲ |
ನು ಯದೇ ಮಸೆಯಿಸುವ ಗೊಂದಣ೦ ಗುಡಿಯರುಗ |
ಳೊಳಗೊಪ್ಪುವಡೆದುದಾಬಂದು ಬಂಧುರತೆಯಂ ನೆವೆ ಪಡೆದ ಕಾರ್ತಿಕದೊಳು ||
1 ಗೌತಮ ದೇವನಂದಿ, ಗುಣ್ದ್ರಭದ್ರ , ಜಿನಸೇನ, ರಾವುಳ ಕೊಂಡಕುಂದ. ಭುಜ ಬಲಿ, ಹೇಮದೇವ ಮುನಿಚಂದ್ರ, ಪದ್ಮಪ್ರಭ, ಮಯೂರಪಿಂಛ, ನಂದಿಮಿತ್ರ, ಸಮಂ ತಭದ್ರ, ಕೇಶವ, ಮಾಘನಂದಿ, ಆಕಳಂಕ, ಭದ್ರೆಬಾಹು, ಕುಮುದೇಂದು, ಪ್ರಭೇಂದು