ಈ ಪುಟವನ್ನು ಪರಿಶೀಲಿಸಲಾಗಿದೆ
188 ಕರ್ಣಾಟಕ ಕವಿಚರಿತೆ. [16 ನೆಯ
ಚಂದ್ರ
ವಿರಹಿಜನದೆರ್ದೆಯ ಲಗ್ಗೆ ಯನಿಡುವ ಮನಸಿಜನ |
ಕರತಳದ ಮೌಕ್ತಿಕದ ಸೆಂಡೋ ವಿಯೋಗಿಗಳ |
ಸಿರವ ಹರಿಯಿಡುವ ಕಾವನ ಕೈಯ ಚಕ್ರಮೋ ಓಪರನಗಲ್ದವರನು ||
ಭರದಿನಿಸುವಂಗಜನ ಕುಂಡಲಿತಕಾರ್ಮುಕವೊ |
ಹರನೊಡನೆ ಸೂಡ ಕಾದುವೆನೆಂದು ಪಡಿಸು |
ವರಲಸರನೆಡಗೈಯ ವಜ್ರಖೇಟಕವೊ ಧಳಧಳಿಪ ಸಂಪೂಣ೯ಶಶಿಯೋ ||
ಭೋಜನ
ದೊನ್ನೆಯಂ ಹರಹಿ ಬಾಎಲೆಹಾಳೆಯಂ ಹಾಕಿ |
ಬಿನ್ನಣದೆ ಮಾಡಿದಾಚೌಕದೆಡೆಗಳಮುಂದೆ |
ಜನ್ನಿವಾರವ ಮೇಲಕೆತ್ತಿ ಕಿಹುಸುತ್ತುಮಂ ತೆಗೆದು ಸಡಿಲಿಸಿ ಧೋತ್ರಮಂ ||
ಚೆನ್ನಾಗಿಯಾಪೋಶನಮನೆತ್ತಿ ಕುಳ್ಳಿರ್ದು |
ಭಿನ್ನರುಚಿಮಾಡಿ ಹರಿಸದೆ ಗಡ್ಡ ಮಿಸೆಗಳು |
ಮಂ ನೀವಿಕೊಳ್ಳುತ್ತೆ ಭೋಜನವನಿಂತು ಮಾಡುತ್ತಿರ್ದರಾಪಾರ್ವರು ||
ಓಗರವ ತಾ ತೊಗೆಯನಿಕ್ಕು ಹಸನಾಯ್ತು ಮೇ |
ಲೋಗರವ ಬಡಿಸು ದೊನ್ನೆಗಳು ಹಿಡಿವಂತೆಯುಂ ||
ಟಾಗಿ ಹೆರೆದುಪ್ಪವೆಳೆಯಾಪದಳಿದ್ಯಮನಟ್ಟು ಕಲಸುವೋಗರವ ತೋಹಾ ||
ಬೇಗದಿಂದೆಡೆಮಾಡಿದಿಡ್ಡ ಲಿಗೆದೋಸೆಗಳ |
ಮೇಗೆ ಸಕ್ಕರೆಬಟ್ಟವಾಲ ಹೊಯ್ಯೆನುತಮಾ |
ರೋಗಣೆಯನಾಪೊಟ್ಟಿಯೊಡೆವ ಮರ್ಯಾದೆಯೊಳಗುಂಡು ತೇಗುತ್ತಿರ್ದರು ||
ಪಾಯಸದ ಪರಿಗಳಂ ನೋಡಿ ಪಂಡಿತರೆ ಸವಿ |
ಯಾಯಿತೇಯಾಯ್ತು ಪಾಧ್ಯಾಯರೇ ಕರಜೆಗೆಯ |
ಕಾಯ ದೋಸೆಗಳ ಹಸನಂ ಪುರೋಹಿತರೆ ಚೆನ್ನಾಗಿ ಸವಿಸವಿದು ನೋಡಿ ||
ಈಯೆಣ್ಣೆಯೂರಿಗೆಯ ಮೃದುತರಕೆ ಸರಿಯುಂಟೆ |
ಜೋಯಿಸರೆ ಕೇಳಿ ಸಕ್ಕರೆಬುರುಡೆಗಳ್ ನಮ್ಮ |
ಬಾಯ ಬಳುನಂ ಬಿಡಿಸುತಿವೆ ದೀಕ್ಷಿತರೆ ಎಂದು ಕೊಂಡಾಡುತಿರ್ದರಾಗ ||