ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ೧೮೯ ತಿಮ್ಮಣ ಕವಿ ತಿಮ್ಮಣ್ಣಕವಿ. ಸು ೧೫೧೦

ಈತನು ಭಾರತದ ಉತ್ತರಭಾಗವನ್ನು, ಎಂದರೆ ಶಾಂತಿಪರ್ವವೊ ದಲುಗೊಂಡು 7 ಪರ್ವಗಳನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ; ಭಾರದ್ವಾಜಗೋತ್ರದವನು; ಇವನ ತಂದೆ ಪದವಾಕ್ಯಪ್ರಮಾಣಜ್ಞನಾದ ಭಾನುಕವಿ ಅಥವಾ ಭಾಸ್ಕರಕವಿ; ವಿಜಯನಗರದ ರಾಜನಾದ ಕೃಷ್ಣರಯನ (1509-1529) ಆಜ್ಞಾನುಸಾರವಾಗಿ ಈ ಗ್ರಂಥವನ್ನು ರಚಿಸಿದಂತೆ ಹೇಳುತ್ತಾನೆ. ಈ ದೊರೆಯ ಪರಂಪರೆಯನ್ನು ಹೀಗೆ ಹೇಳಿದ್ದಾನೆ:-ತುಳುವವಂಶದಲ್ಲಿ ತಿಮ್ಮ ನೃಪ; ಮಗ ಈಶ್ವರಕ್ಷಿತಿನಾಧ; ಮಗ ನರಸಕ್ಷ ಮಾಧಿಪ, ಇವನು " ಸಕಲವಸು ಧಾಜಾನಿಗಳ ನಿಜಭೃತ್ಯವರ್ಗದೋಳೈದೆ ನಿಲಿಸಿದನು;ಷೋಡಶಮಹಾದಾನಗಳ ವಿರಚಿ ಸಿದನು; ಆತ ಕೊಳ್ಳದ ದುರ್ಗವೊಂದಿ |ಲ್ಲಾತನಾಳದ ರಾಜ್ಯವೊಂದಿ | ಲ್ಲಾತ ಮಾಡದ ದಾನಧರ್ಮಾವಳಿಗಳೊಂದಿಲ್ಲ || ಆತನಲಿದ ವಿದ್ಯೆಯೊಂದಿ | ಲ್ಲಾತ ಸುಖಿಸದ ಭೋಗವೊಂದಿಲ್ಲೀತೆಳಿದಿ ಭುಜಶಕ್ತಿಯಿಂದಾಳಿದನು ಭೂತಳವ. " ಇವನ ಹೆಂಡತಿ ನಾಗಲಾಂಬಿಕೆ; ಮಗ ವಿದ್ಯಾನಗರಿಯಲಿ ಭುಜಬಲದಿ ಪಟ್ಟವ ಕಟ್ಟಿ ಕೊಂಡ ಖಿಳಕರ್ಣಾಟಾಧಿಪತಿಯಾಗಿಳೆಯನಾಳಿದ ಕೃಷ್ಣರಾಯ, ಈ ಕೃಷ್ಣರಾಯನು ಒಡ್ಡೋಲಗದೊಳಿರ್ದು ಭಾರತಕಧೆಯ ಕೇಳಿ ಕವಿಜನವ ನೋಡಿ ತಿಮ್ಮಣನ ಕರೆದು ವಸ್ತ್ರಭೂ‍‍‍‍‍‌‌‌‌ಪಾವ್ರಾತವನು ಕೊಟ್ಟು ಮನ್ನಿಸಿ-ಲೇಸೆನಿಸಿ ಮೊದಲಾಕುಮಾರವ್ಯಾಸ ದಶಪರ್ವಗಳ ಹೇಳಿದ ಭಾರತದ ಉಟಿದ ಪರ್ವಗಳ ನೀ ಸಕಲಜನ ಮೆಚ್ಚುವಂತೆ ಪೇಱು; ಸುರನದಿಯ ಯಮುನಾತರಂಗಿಣಿ | ಬೆರಸಿ ಹರಿವಂ ದದಲಿ ಕವಿಕುಂ| ಜರಕುಮಾರವ್ಯಾಸನುರುವಾಗ್ಲ ಹರಿಯೊಡನೀಗ || ಸರಿಯೆನಿಸಿ ನೀ ಕೂ ಡಿಸೈ ಸುರು | ಚಿರಭವತ್ಕ ವಿತಾಪ್ರವಾಹವ | ಪರಮಪುಣ್ಯನಿಧಾನವಹುದು-ಎನ್ನಲು, ಹಸಾದವೆನುತ್ತ ಕೈಕೊಂಡು ಭಾರತಕಧೆಯ ಕಡಮೆಯ ಕೃಷ್ಣರಾಯನಿಗಂಕಿತವ ಮಾಡಿ ತಿಮ್ಮಣನು ಹೇಳಿದನು. ಸಂಧಿಗಳ ಕೊನೆಯಲ್ಲಿ ವೆಂಕಟೇಶದೇವರ ಮತ್ತು ಕೃಷ್ಟರಾಯನ ಅಂಕಿತಗಳಿವೆ. ಗ್ರಂಥಾಂತ್ಯದಲ್ಲಿ- ನರಸನೃಪಸುತಕೃಷ್ಣ ರಾಯಗೆ ವರ ಯಶವ ನಿಲುವಂತೆ ಪೇಟ್ದಿ ಭಾರತವು—ಎಂದು ಕವಿ ಹೇಳುತ್ತಾನೆ. ಇವನ ಕಾಲವು ಸುಮಾರು 1510 ಆಗಬಹುದು. ಇವನಿಗೆ ಕರ್ನಾಟಕಕವಿ ಕುಲಸಾರ್ವಭೌಮ ಎಂಬ ಬಿರುದಿದ್ದಂತ ತಿಳಿಯುತ್ತದೆ.