ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

19೦

            ಕರ್ನಾಟಕ ಕವಿಚರಿತೆ,     [೧೬ ನೆಯ
                                                
 ಇವನ ಗ್ರಂಥ
               ಭಾರತ
   ಇದು ಭಾಮಿನೀಷಟ್ಟಿದಿಯಲ್ಲಿ ಬರೆದಿದೆ ; ಸಂಧಿ 40, ಪದ್ಯ 3736. ಇದರಲ್ಲಿ ಶಾಂತಿಪರ್ವದಿಂದ ಕೊನೆಯವರೆಗೆ 7 ಪರ್ವಗಳಿವೆ. ಗ್ರಂಥಕೆ ಕೃಷ್ಣರಾಜಭಾರತ ಎಂದು ಹೆಸರು. ಆರಂಭದಲ್ಲಿ ವೆಂಕಟೇಶಸ್ತುತಿ ಇದೆ. ಬಳಿಕ ಕವಿ ಪಂಪಾವಿರೂಪಾಕ್ಷ, ಬ್ರಹ್ಮ, ಲಕ್ಷ್ಮಿ, ಗಣೇಶ, ಸರ ಸ್ವತಿ ಇವರುಗಳನ್ನು ಕ್ರಮವಾಗಿ ಸ್ತುತಿಸಿದ್ದಾನೆ. ಪರ್ವಗಳ ಕೊನೆಯಲ್ಲಿ ಈ ಗದ್ಯವಿದೆ--
   ಇತಿ ಶ್ರೀಮದಚಿಂತ್ಯಮಹಿಮವೆಂಕಟಪತಿಚರಣಾರವಿಂದಮಕರಂದಮಧುಪಾನ ಪುಷ್ಟವಚಷ್ಪಟ್ಟಿದೀನಿಕಾಯ ಶ್ರೀಮತ್ಕರ್ಣಾಟಕಕವಿಕುಲಸಾರ್ವಭೌಮ ತಿಮ್ಮಣ್ಣಕ ವೀಂದ್ರವಿರಚಿತಮಪ್ಪ ಕರ್ಣಾಟಕೃಷ್ಣರಾಯಭಾರತಕಧಾಮಂಜರಿಯೊಳ್.
   ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ--
                   ಸೊರೋದಯ                                                               ಕುಕ್ಕುಟದ ಕೂಗಾಟ ಮೂಡಣ | ದಿಕ್ಕಿನೆಲರೆಡೆಯಾಟ ಮರದುದಿ |ವಕ್ಕಿಗಳ ಪರಿಪರಿಯ ಚಿಲಿಪಿಲಿರವದ ಚೀಪಾಟ ||                                                         ಜಕ್ಕವಕ್ಕಿಯ ಕೂಟ ಕಮಲದ | ಸೊಕ್ಕುದುಂಬಿಯ ಬೇಟವೆಣ್ದೆನೆ |ಮಿಕ್ಕ ಕತ್ತಲೆಯೋಟವೆಸೆದುದು ರವಿಯ ಬರವಿನಲಿ ||
                   ಚಂದ್ರೋದಯ
ವರನಿಶಾಕರನುದಯಧರಣೀ | ಧರದ ಶಿಖರಬಟಿ'ಯ.ಜೇನಿನ | 

ಹರೆಯವೋಲಿರುಳೆಂಬ ಬೇಡನು ತೆಗೆಯುತಿರಲದನು || ಸುರಿವ ಮಧುವಿನತೆಳಿದೊಳೆಸೆದುವು | ಸರಸಿಜಾರಿಯ ಕಿರಣಗಳು ಬೆಂ | ಬರಿವ ಮಧುಮಕ್ಷುಗಳೆವುಡುನಿಕರವೊಪ್ಪಿದುವು ||

                   ವಸಂತ 

ಕವಿದು ತೆಂಕಣಗಾಳಿಯೆಂದೆನಿ | ಸುವ ಮಹಾತಸ್ಕರನು ವರವನ |

ಯುವತಿಯಂಗದ ಕ೦ರಭೂಷವಳಿಯ ಕೀಳುತಿರೆ || 

ಅವನಿಗುದಿಂದ ಹೊನ್ನ ತಾಳಿಗ | ಳವೊಲು ಹಣ್ಣೆಲೆಗಳು ವಿರಾಜಿಸಿ | ದುವು ನಿರೀಕ್ಷಿಸಿಯವನು ಕೋಗಿಲೆಯಾಗ ಕೂಗಿದುದು||