ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಶತಮಾನ] ಗುಬ್ಬಿಯಮಲ್ಲಣಾರ್ಯ. ೧೯೧

                            ವಜ್ರದತ್ತನ ಆನೆ
ಮಾಳುತೋ ಗಜವೈರಿಒಲವನು | ತೋಳುತೋ ರಿಪುಭೂಭುಜಾಳಗೆ | 

ಹೇಳಿ'ತೋ ಭಂಗವನು ಮಲೆತಾ೦ತರಿಭಟಾವಳಿಯ || ಮಾಳಿ'ತೋ ಸುರಕಾಮಿನಿಯರಿಗೆ | ತೋಳಿ'ತೋ ನಿಜಬಲಕೆ ಜಯವನು | ಹಾಳಿ'ತೋ ರಿಪುವೀರಸಿರಿಯೆನೆ ಕರಿ ವಿಜೃಂಭಿಸಿತು ||

                          ರಾಜನೀತಿ
ಒಲಿದು ವನಪಾಲಕನು ತೋಟನ | ಬೆಳಸಿ ವನದಲಿ ಕುಸುಮಫಲತತಿ |
ಗಳನು ಕೊಯ್ಯಂದದಲಿ ಪ್ರಜೆಗಳ ಸಲಹಿ ತೆಳಿ'ಗೆಯನು || 

ಕೊಳಲುಬೇಹುದು ಕಡಿದು ಬಹುತರು | ಗಳನುರುಹಿ ಕೆಂಡವನು ಕೊಂಡಂ | ತಿಳೆಯ ಜನಗಳ ಬಾಧಿವುದು ತಾನುಚಿತವಲ್ಲೆಂದ ||

                           ಕೃಷ್ಣ ರಾಯನ ಕೀರ್ತಿ
ಶಿವನು ನಾರೀಕವಚಿ ಕೀಳಿ  | ದವನು ನನ್ನ ಗರಾಜ ಶರದ | 

ಭ್ರವನದೇತಕ್ಕೆಣಿಸಲದು ಜೀವನವ ಬಿಟ್ಟಿಹುದು || ಸವನೆನಗದಾರೆನುತಲತ್ಯು | ತ್ಸವದಿ ನರಸಯಕೃಷ್ಣರಾಯನ | ಧವಳಕೀರ್ತಿಸುಧಾಂಶು ಗರ್ವಿಸುತಿರ್ಪುದನವರತ ||

                          ಕೃಷ್ಣರಾಯನ ಪ್ರತಾಪ 

ಹೆಳಿವನೆಳಿಯದೆ ಬೆಳಗಲಾಪುದೆ | ನಳಿನಮಿತ್ರನ ತೇಜವನಿಲನು | ಸುಳಿದು ಹೆಚ್ಚಿಸದಿದ್ದೂಡುಂಟೇ ವಹ್ನಿಯಾಟೋಪ | ತಿಳಿಯೆ ತಾನಸಹಾಯಿಯಾಗು | ಚ್ವಳಿಸಿ ನರಸಯಕೃಷ್ಣರಾಯನ | ಲಲಿತಭುಜತೇಜಃಕೃಶಾನುಪ್ರಭೆ ವಿಜೃಂಭಿಸಿತು ||

                            __________
                     ಗುಬ್ಬಿಯಮಲ್ಲಿಣಾರಯ. ಸು 1513 

ಈತನು ಭಾವಚಿಂತಾರತ್ನ, ವೀರಶೈವಾಮೃತಪುರಾಣ ಇವುಗಳನ್ನು ಬರೆದಿದ್ದಾನೆ. ಪುರಾತನರಗಳ ಎಂಬ ಗ್ರಂಥವನ್ನೂ ಬರೆದಿರುವುದಾಗಿ ಪ್ರತೀತಿಯಿದೆ. ಇದು ನಮಗೆ ದೊರೆತಿಲ್ಲ.

   ಇವನು ವೀರಶೈವಕವಿ. ಇವನ ಸ್ಥಳ ಗುಬ್ಬಿ. ವೀರಶೈವಾಮೃತವು ರಾಣದಲ್ಲಿ ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ--